ಉಳ್ಳಾಲ (ದಕ್ಷಿಣ ಕನ್ನಡ): ಸುಮಾರು 650 ಆಟೋ ಚಾಲಕರಿಗೆ ದಿನಸಿ ಕಿಟ್ಗಳನ್ನು ಉಳ್ಳಾಲ ಶಾಸಕ ಯು.ಟಿ.ಖಾದರ್ ವಿತರಿಸಿದರು.
ಪವಿತ್ರ ರಂಜಾನ್ ಮಾಸ ಹಾಗೂ ಲಾಕ್ಡೌನ್ ಹಿನ್ನೆಲೆ ಹಸಿವಿನಿಂದ ಬಳಲುತ್ತಿರುವವರಿಗೆ ಕಿಟ್ಗಳನ್ನು ನೀಡಲಾಯಿತು. ಈ ರಂಜಾನ್ ಮಾಸದಲ್ಲಿ ಬಡವರಿಗೆ ಉಳ್ಳವರು ಸಹಾಯ ಮಾಡಬೇಕು ಎಂಬುದು ಹಬ್ಬದ ವಿಶೇಷತೆಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಶಾಸಕ ಖಾದರ್ ನೆರವಿನ ಹಸ್ತ ಚಾಚಿದ್ದಾರೆ.
ಲಾಕ್ಡೌನ್ನಿಂದ ಸಂಪೂರ್ಣ ಮಾರುಕಟ್ಟೆ, ವ್ಯವಹಾರ ಸ್ಥಗಿತಗೊಂಡಿದೆ. ಇದರಿಂದ ಆಟೋ ಚಾಲಕರು ಬಾಡಿಗೆ ಇಲ್ಲದೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇದರಿಂದಲೇ ಜೀವನ ಸಾಗಿಸುತ್ತಿರುವವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.