ETV Bharat / state

ದ.ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕಕ್ಕೆ ಚಾಲನೆ - Govt staff salaries

ಇತರ ಸರ್ಕಾರಿ ಸಿಬಂದಿಗೆ ಹೋಲಿಸಿದರೆ ಸರ್ಕಾರಿ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಇವರ ವೇತನ ಕಡಿಮೆ ಇದೆ. ಪೊಲೀಸ್​ ಸಿಬ್ಬಂದಿಗೆ ಉತ್ತಮ ವೇತನವಿದ್ದು, ಇದೇ ವೇತನವನ್ನು ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೂ ನೀಡಲು ಶಿಫಾರಸು ನೀಡುವುದಾಗಿ ಶಾಸಕ ಯು.ಟಿ. ಖಾದರ್ ಹೇಳಿದರು.

Green Signal To Ullal Home Guard Unit
ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕಕ್ಕೆ ಚಾಲನೆ
author img

By

Published : Oct 5, 2020, 8:36 PM IST

ಉಳ್ಳಾಲ : ಸಮಾಜದಲ್ಲಿ ಶಾಂತಿ ಕಾಪಾಡುವುದರೊಂದಿಗೆ, ಪೊಲೀಸ್ ಇಲಾಖೆ ಮತ್ತು ಸರ್ಕಾರದ ಕಾರ್ಯವನ್ನು ಅನುಷ್ಠಾನ ಮಾಡುವಲ್ಲಿ ಕಾಣದ ಕೈಗಳಂತೆ ಕೆಲಸ ಮಾಡುವವರು ಹೋಂ ಗಾರ್ಡ್​ಗಳಾಗಿದ್ದಾರೆ. ನೂತನ ಉಳ್ಳಾಲ ಘಟಕಕ್ಕೆ ತಾಲೂಕು ರಚಣೆಯಾಗುವಾಗ ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಎಲ್ಲಾ ಹೋಂ ಗಾರ್ಡ್​ಗಳಿಗೆ ಸಮಾನ ವೇತನ ನೀಡಲು ಸಂಬಂಧಿತ ಇಲಾಖೆಗೆ ಸೂಚನೆ ನೀಡುವುದಾಗಿ ಶಾಸಕ ಯು.ಟಿ. ಖಾದರ್ ಹೇಳಿದರು.

Green Signal To Ullal Home Guard Unit
ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕಕ್ಕೆ ಚಾಲನೆ

ಕಲ್ಲಾಪು ಆಡಂಕುದ್ರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ದ.ಕ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಮಾಜಿಕ ಕಳಕಳಿಯಲ್ಲಿರುವವರು ಮಾತ್ರ ಹೋಂ ಗಾರ್ಡ್​ನಲ್ಲಿ ಸ್ವಯಂ ಪ್ರೇರಿತಾರಾಗಿ ಕಾರ್ಯ ನಿರ್ವಹಿಸುತ್ತಾರೆ. ಇತರ ಸರ್ಕಾರಿ ಸಿಬಂದಿಗೆ ಹೋಲಿಸಿದರೆ ಸರ್ಕಾರಿ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಇವರ ವೇತನ ಕಡಿಮೆ ಇದೆ. ಪೊಲೀಸ್​ ಸಿಬ್ಬಂದಿಗೆ ಉತ್ತಮ ವೇತನವಿದ್ದು, ಇದೇ ವೇತನವನ್ನು ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೂ ನೀಡಲು ಶಿಫಾರಸು ನೀಡುತ್ತೇನೆ ಎಂದರು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ. ಮುರಳಿ ಮೋಹನ್ ಚೂಂತಾರು ಮಾತನಾಡಿ, ಈ ಭಾಗದಲ್ಲಿ 52 ಜನ ಗೃಹರಕ್ಷಕ ದಳದ ಸಿಬಂದಿ ಇದ್ದು ಅವರಿಗೆ ಕವಾಯತು ನೀಡುವ ನಿಟ್ಟಿನಲ್ಲಿ ಈ ಘಟಕ ಸಹಕಾರಿಯಾಗಲಿದೆ ಎಂದರು.

ಮಂಗಳೂರು ಕಮಿಷನರೇಟ್ ದಕ್ಷಿಣ ವಿಭಾಗದ ಸಹಾಯಕ ಆಯುಕ್ತ ರಂಜಿತ್ ಕುಮಾರ್ ಬಂಡಾರೂ, ಪಾಲಿಕೆಯ ಜಪ್ಪಿನ ಮೊಗರು ವಾರ್ಡ್​ನ ಸದಸ್ಯೆ ವೀಣಾ ಮಂಗಳ, ಸಂತ ಸೆಬಾಸ್ತಿಯನ್ ಶಾಲೆಯ ಮುಖ್ಯ ಶಿಕ್ಷಕಿ ಕ್ಲೇರಾ ವೇಗಸ್ ಸೇರಿದಂತೆ ಇತರರು ಉಪಸ್ತಿತರಿದ್ದರು.

ಕೋವಿಡ್-19 ವೇಳೆ ಗೃಹರಕ್ಷಕ ದಳಕ್ಕೆ ಸಹಕಾರ ನೀಡಿದ ದಂತ ವೈದ್ಯ ಡಾ. ಅಶ್ವಥ್, ಆಯುರ್ವೇದ ವೈದ್ಯ ಡಾ. ಅವಿನಾಶ್, ಗೋಪಾಲ ಕೃಷ್ಣ ಸಾಮಗ ಅವರನ್ನು ಇದೇ ವೇಳೆ, ಸನ್ಮಾನಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.