ETV Bharat / state

ಮೀಸಲಾತಿ ವಿಚಾರ, ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು : ಜಯಮೃತ್ಯುಂಜಯ ಸ್ವಾಮೀಜಿ

ಕಳೆದ ಬಾರಿ 39 ದಿವಸಗಳ 712 ಕಿ.ಮೀ ದೂರದ ಬಹುದೊಡ್ಡ ಪಾದಯಾತ್ರೆ ಮಾಡಲಾಗಿತ್ತು. ಅಲ್ಲದೆ ಬೆಂಗಳೂರಿನಲ್ಲಿ ರ್ಯಾಲಿಯನ್ನು ಮಾಡಲಾಗಿತ್ತು. ಆದರೂ ಸರ್ಕಾರ ಕಣ್ತೆರೆಯಲಿಲ್ಲ. ಬಳಿಕ‌ ನಡೆಸಿದ ನಿರಂತರ ಸತ್ಯಾಗ್ರಹದ ಬಳಿಕ ಮೀಸಲಾತಿ ನೀಡುವುದಕ್ಕೆ‌ ಆರು ತಿಂಗಳ ಕಾಲಾವಧಿ ಕೇಳಿತ್ತು‌. ಈ ಕಾಲಾವಧಿ ಸೆ.15ಕ್ಕೆ ಮುಕ್ತಾಯವಾಗುತ್ತದೆ..

Jayamrutyanjaya swamiji
ಜಯಮೃತ್ಯುಂಜಯ ಸ್ವಾಮೀಜಿ
author img

By

Published : Sep 8, 2021, 10:42 PM IST

ಮಂಗಳೂರು : ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಸರ್ಕಾರಕ್ಕೆ 6 ತಿಂಗಳ ಕಾಲಾವಧಿ ನೀಡಲಾಗಿತ್ತು. ಅದು ಮುಗಿಯುತ್ತಾ ಬಂದಿದೆ. ಕೊಟ್ಟ ಮಾತಿನಂತೆ ನ್ಯಾಯ ಒದಗಿಸಬೇಕೆಂದು ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಮೀಸಲಾತಿ ಹೋರಾಟದ ಕುರಿತಂತೆ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತು..

ನಗರದ ಬಲ್ಮಠದಲ್ಲಿರುವ ಆರ್ಯ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ತಾನು ಕೊಟ್ಟಿರುವ ಮಾತನ್ನು ಉಳಿಸಬೇಕೆಂದು ರಾಜ್ಯಾದ್ಯಂತ ಪ್ರತಿಜ್ಞಾ ಪಂಚಾಯತ್​​ ಬೃಹತ್ ರಾಜ್ಯ ಅಭಿಯಾನ ಕೈಗೊಳ್ಳಲಾಗಿದೆ. ಈ ಅಭಿಯಾನ‌ ಅ.1ಕ್ಕೆ ಮುಕ್ತಾಯಗೊಳ್ಳಲಿದೆ. ಸರ್ಕಾರ ಮೀಸಲಾತಿ ನೀಡಲು ಮತ್ತೂ ವಿಳಂಬ ಮಾಡಿದ್ದಲ್ಲಿ ಬೆಂಗಳೂರು ಫ್ರೀಡಂ ಪಾರ್ಕ್​​​ನಲ್ಲಿ‌ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.

ಉತ್ತರ ಕರ್ನಾಟಕದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ‌ ಹಾಗೂ ಲಿಂಗಾಯತದ ಎಲ್ಲಾ ಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಬೇಕು. ಅಲ್ಲದೆ ಲಿಂಗಾಯತ ಪಂಚಮಸಾಲಿ ಸಮಾಜ ಇಂದು ಆರ್ಥಿಕ ಸಂಕಷ್ಟದಲ್ಲಿದೆ. ಆದ್ದರಿಂದ ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರಕಬೇಕೆಂದು ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಕಳೆದ ಬಾರಿ 39 ದಿವಸಗಳ 712 ಕಿ.ಮೀ ದೂರದ ಬಹುದೊಡ್ಡ ಪಾದಯಾತ್ರೆ ಮಾಡಲಾಗಿತ್ತು. ಅಲ್ಲದೆ ಬೆಂಗಳೂರಿನಲ್ಲಿ ರ್ಯಾಲಿಯನ್ನು ಮಾಡಲಾಗಿತ್ತು. ಆದರೂ ಸರ್ಕಾರ ಕಣ್ತೆರೆಯಲಿಲ್ಲ. ಬಳಿಕ‌ ನಡೆಸಿದ ನಿರಂತರ ಸತ್ಯಾಗ್ರಹದ ಬಳಿಕ ಮೀಸಲಾತಿ ನೀಡುವುದಕ್ಕೆ‌ ಆರು ತಿಂಗಳ ಕಾಲಾವಧಿ ಕೇಳಿತ್ತು‌. ಈ ಕಾಲಾವಧಿ ಸೆ.15ಕ್ಕೆ ಮುಕ್ತಾಯವಾಗುತ್ತದೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮ ಪಾದಯಾತ್ರೆ ಸಂದರ್ಭದಲ್ಲಿ ನಮಗೆ ಬಹಳ ಸಹಕಾರ ನೀಡಿದ್ದರು. ಅವರ ಅವಧಿಯೊಳಗೆ ಮೀಸಲಾತಿ ಕೊಡುತ್ತಾರೆಂಬ ಭರವಸೆ ಇದೆ ಎಂದರು.

ಓದಿ: 2025ಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶ ಪ್ರಗತಿಯಾಗಲಿದೆ : ಡಾ. ಸಿ ಎನ್ ಅಶ್ವತ್ಥ್ ನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.