ETV Bharat / state

ಕಂದಾಯ ಇಲಾಖೆಯ ಬೇಜಾಬ್ದಾರಿ..ನಶಿಸಿ ಹೋಗುತ್ತಿದೆ ಸಾರ್ವಜನಿಕ ಆಸ್ತಿಗಳು - ಸರಿಯಾದ ನಿರ್ವಣೆ ಇಲ್ಲ

ಸರ್ಕಾರಿ ಕಚೇರಿಗಳಲ್ಲಿ ಬಳಸುತ್ತಿರುವ ಸಾರ್ವಜನಿಕ ಸ್ವತ್ತುಗಳಿಗೆ ಸರಿಯಾದ ನಿರ್ವಣೆ ಇಲ್ಲದೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಕ್ಕು ಹಿಡಿದು ಮೂಲೆಗೆ ಸೇರುತ್ತಿವೆ.

ಸೊತ್ತುಗಳು
author img

By

Published : Nov 8, 2019, 9:41 AM IST

ಕಡಬ: ನಗರದ ಕಂದಾಯ ಇಲಾಖೆಯ ಸಮೀಪದಲ್ಲಿ ಸರ್ಕಾರಿ ಜೀಪು ಹಾಗೂ ದೊಡ್ಡ ಜನರೇಟರ್​​ವೊಂದು ನಿರ್ವಹಣೆ ಇಲ್ಲದೇ ತುಕ್ಕು ಹಿಡಿದು ಮೂಲೆಗೆ ಸೇರಿವೆ.

ಇಲ್ಲಿನ ಕಂದಾಯ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಜೀಪ್​​ ಇಲಾಖೆಯ ಬೇಜಾವಬ್ದಾರಿಯಿಂದ ದುರಸ್ತಿ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದೆ. ಇನ್ನು ಇದರ ಪಕ್ಕದಲ್ಲೇ ಇರುವ ತುಕ್ಕು ಹಿಡಿದ ಆಧುನಿಕ ಜನರೇಟರ್ ಅನ್ನು ದುರಸ್ತಿ ಮಾಡಿದ್ದೇ ಆದರೆ, ನೂತನ ಕಡಬ ತಾಲೂಕಿನಲ್ಲಿ ಆರಂಭವಾಗುವ ಮಿನಿ ವಿಧಾನಸೌದ ಅಥವಾ ಬೇರೆ ಯಾವುದಾದರೂ ಇತರೆ ಇಲಾಖಾ ಕಚೇರಿಗಳಿಗೆ ಇದನ್ನು ಬಳಸಬಹುದು. ಆದರೆ ಲಕ್ಷಗಟ್ಟಲೆ ಹಣ ಖರ್ಚುಮಾಡಿ ಖರೀದಿಸಿದ ಈ ಜನರೇಟರ್ ಯಾವುದೇ ನಿರ್ವಹಣೆ ಇಲ್ಲದೇ ಈಗಾಗಲೇ ಬಹುತೇಕ ಕೆಟ್ಟು ಹೋಗುವ ಹಂತದಲ್ಲಿದೆ. ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿರುವ ಸರ್ಕಾರಿ ವಸ್ತುಗಳು ಮೂಲೆ ಗುಂಪಾಗುತ್ತಿವೆ.

ನಶಿಸಿ ಹೋಗುತ್ತಿದೆ ಸಾರ್ವಜನಿಕ ಸೊತ್ತುಗಳು

ಈ ಬಗ್ಗೆ ಪ್ರಸ್ತುತ ಕಡಬದಲ್ಲಿ ಅಧಿಕಾರದಲ್ಲಿರುವ ಯಾವುದೇ ಅಧಿಕಾರಿಗಳನ್ನು ಕೇಳಿದರೂ, ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಮಣ್ಣು ಪಾಲಾಗುತ್ತಿರುವ ಈ ಸರ್ಕಾರಿ ವಸ್ತುಗಳನ್ನು ದುರಸ್ತಿ ಮಾಡುವ ಅಥವಾ ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕೆಲಸಕ್ಕೆ ಸಂಬಂಧಿಸಿದ ಅಧಿಕಾರಿಗಳು ,ಅಥವಾ ಇಲಾಖೆಗಳು ಮುತುವರ್ಜಿವಹಿಸಬೇಕಿದೆ.

Intro:Location:- ಕಡಬ

ಸಾರ್ವಜನಿಕ ಸ್ವತ್ತುಗಳು ಸರಿಯಾದ ನಿರ್ವಹಣೆ ಇಲ್ಲದೇ ಯಾವ ರೀತಿಯಲ್ಲಿ ನಾಶವಾಗತ್ತಿದೆ ಎಂಬುದಕ್ಕೆ ಒಂದು ತಾಜಾ ಉದಾಹರಣೆ ಕಡಬದ ಕಂದಾಯ ಇಲಾಖಾ ಕಚೇರಿಯ ಸಮೀಪದಲ್ಲಿ ತುಕ್ಕು ಹಿಡಿಯುವ ಮೂಲಕ ನಾಶವಾಗುತ್ತಿರುವ ಒಂದು ಹಳೇ ಕಾಲದ ಸರಕಾರಿ ಜೀಪು ಮತ್ತು ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯಲು ಆರಂಭವಾದ ಒಂದು ದೊಡ್ಡ ಜನರೇಟರ್.Body:ಹೌದು ಕಡಬದ ಕಂದಾಯ ಇಲಾಖೆಯ ಅಧೀನದಲ್ಲಿರುವ ಈ ಸರಕಾರಿ ಜೀಪೋಂದು ಇಲಾಖೆಯ ಬೇಜಾವಬ್ದಾರಿಯಿಂದ ಇನ್ನು ದುರಸ್ತಿ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದೆ. ಇದು ಒಂದು ವಿಚಾರವಾದರೆ, ಇದರ ಪಕ್ಕದಲ್ಲೇ ಇರುವ ಆಧುನಿಕ ರೀತಿಯ ದೊಡ್ಡ ಜನರೇಟರ್ ಒಂದು ದುರಸ್ತಿ ಮಾಡಿದ್ದೇ ಆದರೆ ನೂತನ ಕಡಬ ತಾಲೂಕಿನಲ್ಲಿ ಆರಂಭವಾಗುವ ಮಿನಿ ವಿಧಾನಸೌದಕ್ಕೆ ಅಥವಾ ಬೇರೆ ಯಾವುದಾದರೂ ಇತರ ಇಲಾಖಾ ಕಚೇರಿಗಳಿಗೆ ಇದನ್ನು ಬಳಸಬಹುದಿತ್ತು. ಆದರೆ ಲಕ್ಷಗಟ್ಟಲೆ ಹಣ ಖರ್ಚುಮಾಡಿ ಖರೀದಿಸಿದ ಈ ಜನರೇಟರ್ ಯಾವುದೇ ನಿರ್ವಹಣೆ ಇಲ್ಲದೇ ಈಗಾಗಲೇ ಬಹುತೇಕ ಕೆಟ್ಟು ಹೋಗುವ ಹಂತದಲ್ಲಿದೆ. ಇಲಾಖಾಧಿಕಾರಿಗಳ ದಿವ್ಯನಿರ್ಲಕ್ಷ್ಯದಿಂದ ಸಾರ್ವಜನಿಕರ ತೆರಿಗೆ ಹಣದಿಂದ ಖರೀದಿಸಿರುವ ಸರಕಾರಿ ವಸ್ತುಗಳು ಮೂಲೆ ಗುಂಪಾಗುತ್ತಿರುವುದು ದುರದೃಷ್ಟವೇ ಸರಿ.
Conclusion:ಈ ಬಗ್ಗೆ ಪ್ರಸ್ತುತ ಕಡಬದಲ್ಲಿ ಅಧಿಕಾರದಲ್ಲಿರುವ ಯಾವುದೇ ಒಬ್ಬ ಅಧಿಕಾರಿಗಳನ್ನು ಕೇಳಿದರೂ, ಸ್ಪಷ್ಟವಾದ ಉತ್ತರ ಲಭ್ಯವಿಲ್ಲ. ಒಟ್ಟಿನಲ್ಲಿ ಮಣ್ಣುಪಾಲಾಗುತ್ತಿರುವ ಈ ಸರಕಾರಿ ವಸ್ತುಗಳನ್ನು ದುರಸ್ತಿ ಮಾಡುವ ಅಥವಾ ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕೆಲಸಕ್ಕೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ,ಅಥವಾ ಇಲಾಖೆಗಳು ಮುತುವರ್ಜಿವಹಿಸಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.