ಮಂಗಳೂರು: ಸರ್ಕಾರಿ ನೌಕರರಿಗೆ ಅನಾರೋಗ್ಯ ಸಂಭವಿಸಿದ ವೇಳೆಯಲ್ಲಿ ಅವರ ಮೆಡಿಕಲ್ ಬಿಲ್ ಅನ್ನು ಸರ್ಕಾರದ ವತಿಯಿಂದ ಪಾವತಿಸಲಾಗುತ್ತದೆ. ಕೊರೊನಾ ಕಾಲದಲ್ಲಿ ಸಾಕಷ್ಟು ಒತ್ತಡದ ನಡುವೆಯೂ ಮೆಡಿಕಲ್ ಬಿಲ್ ಮರುಪಾವತಿ ಸಕಾಲದಲ್ಲಿ ಆಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಸರ್ಕಾರಿ ಸಿಬ್ಬಂದಿ ಯಾವುದೇ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಅವರ ಚಿಕಿತ್ಸೆ ವೆಚ್ಚವನ್ನು ಸರ್ಕಾರದಿಂದ ಪಡೆದುಕೊಳ್ಳುವ ಅವಕಾಶವಿದೆ. ಈ ಚಿಕಿತ್ಸಾ ವೆಚ್ಚವನ್ನು ಅವರು ಬಿಲ್ ಸಲ್ಲಿಸಿ ಸರ್ಕಾರದಿಂದ ಪಡೆಯಬಹುದು. ಈ ರೀತಿ ನೀಡಲಾದ ಬಿಲ್ ಅನ್ನು ಪರಿಶೀಲನೆ ಮಾಡಿ ಅವರಿಗೆ ಹಣ ನೀಡಲಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಕೂಡ ಮರುಪಾವತಿ ಸಕಾಲದಲ್ಲಿ ಆಗಿದೆ ಎಂದು ತಿಳಿದು ಬಂದಿದೆ.
ವಿವಿಧ ಕಾಯಿಲೆಗಳಿಗೆ ನೀಡಲಾಗುವ ಚಿಕಿತ್ಸಾ ವೆಚ್ಚದ ಬಿಲ್ ಅನ್ನು ಸರ್ಕಾರಿ ನೌಕರರು ತಮ್ಮ ಇಲಾಖೆಗೆ ಕಳುಹಿಸಿಕೊಡುತ್ತಾರೆ. ಅಲ್ಲಿಂದ ಅದು ಸರ್ಕಾರದ ಮಾನದಂಡದಂತೆ ಪರಿಶೀಲನೆ ಆಗಿ ಸರ್ಕಾರದ ಖಜಾನೆ ಇಲಾಖೆಗೆ ಬರುತ್ತದೆ. ಅಲ್ಲಿಗೆ ಬಂದ ಅರ್ಜಿಗೆ ಅನುಸಾರವಾಗಿ ಖಜಾನೆ ಇಲಾಖೆಯಿಂದ ಅವರ ಖಾತೆಗೆ ಮೆಡಿಕಲ್ ಬಿಲ್ ಹಣವನ್ನು ಮರುಪಾವತಿ ಮಾಡಲಾಗುತ್ತದೆ.
ಇದನ್ನೂ ಓದಿ: 'ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಸತ್ಯ ಸಿದ್ದರಾಮಯ್ಯಗೆ ಗೊತ್ತಿದೆ': ಬೊಮ್ಮಾಯಿ
ಕೊರೊನಾ ಸಂದರ್ಭದಲ್ಲಿ ಮೆಡಿಕಲ್ ಬಿಲ್ ಮರುಪಾವತಿ ಕಾರ್ಯ ವಿಳಂಬವಾಗಿಲ್ಲ ಎಂದು ತಿಳಿದುಬಂದಿದೆ.