ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಭವನ ವಿಸ್ತರಣಾ ಕಾಮಗಾರಿಗೆ ರಾಜ್ಯಪಾಲ ವಜೂಭಾಯಿ ವಾಲಾ ಶಿಲಾನ್ಯಾಸ - ರಾಜ್ಯಪಾಲ ವಜೂಭಾಯಿ ವಾಲಾ

ಮಂಗಳೂರು ಬಹುದೊಡ್ಡ ವ್ಯಾಪಾರ ಕೇಂದ್ರವಾಗಿರುವುದರಿಂದ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಭವನ ವಿಸ್ತರಣಾ ಕಾಮಗಾರಿಗೆ ಶಿಲಾನ್ಯಾಸ
author img

By

Published : Feb 22, 2019, 8:24 PM IST

ಮಂಗಳೂರು: ವ್ಯಾಪಾರದ ಬಹುದೊಡ್ಡ ಕೇಂದ್ರವಾಗಿರುವ ಮಂಗಳೂರಿಗೆ ದೇಶ ವಿದೇಶಗಳಿಂದ ವ್ಯಾಪಾರಸ್ತರು ಆಗಮಿಸುತ್ತಾರೆ. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಭವನ ವಿಸ್ತರಣಾ ಕಾಮಗಾರಿಗೆ ಶಿಲಾನ್ಯಾಸ

ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಭವನ ವಿಸ್ತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಅನೇಕ ವರ್ಷಗಳಿಂದ ವ್ಯಾಪಾರದಲ್ಲಿ ಇತರೆ ನಗರಗಳಿಗಿಂತ ವೇಗವಾಗಿ ಪ್ರಗತಿ ಕಂಡ ಸಾಂಸ್ಕೃತಿಕ ನಗರ ಮಂಗಳೂರು. ಇದು ವ್ಯಾಪಾರದ ಬಹುದೊಡ್ಡ ಕೇಂದ್ರಗಳಿವೆ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಈ ದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಆಗಿದೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ ಆಗಿದೆ. ಈ ಎರಡರ ಅಭಿವೃದ್ಧಿ ಎಲ್ಲಿ ಆಗುತ್ತದೆಯೋ, ಆ ದೇಶ ಅಥವಾ ರಾಜ್ಯ ವಿಕಾಸ ಹೊಂದಿದಂತೆಯೇ. ಮತ್ತು ಅಲ್ಲಿ ಎಲ್ಲವೂ ಅಭಿವೃದ್ಧಿ ಹೊಂದಿದಂತೆ ಎಂದು ರಾಜ್ಯಪಾಲರು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ಮೇಯರ್ ಭಾಸ್ಕರ.ಕೆ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.

Intro:ಮಂಗಳೂರು: ಅನೇಕ ವರ್ಷಗಳಿಂದ ವ್ಯಾಪಾರದಲ್ಲಿ ಎಲ್ಲರಿಗಿಂತಲೂ ವೇಗದಲ್ಲಿ ಪ್ರಗತಿ ಕಂಡ ಸಾಂಸ್ಕೃತಿಕ ನಗರ ಮಂಗಳೂರು. ಇಲ್ಲಿ ವ್ಯಾಪಾರದ ಬಹುದೊಡ್ಡ ಕೇಂದ್ರಗಳಿದ್ದು, ವ್ಯಾಪಾರ ಮಾಡುವುದಕ್ಕೋಸ್ಕರ ಇಲ್ಲಿ ದೇಶ ವಿದೇಶಗಳಿಂದ ಅನೇಕ ದೊಡ್ಡ ದೊಡ್ಡ ವ್ಯಾಪಾರಸ್ಥರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಆದ್ದರಿಂದ ಕರ್ನಾಟಕದಲ್ಲಿಯೇ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು‌ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಲು ಇಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಹೇಳಿದರು.

ಮಂಗಳೂರಿನ ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಭವನ ವಿಸ್ತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Body:ಈ ದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಆಗಿದೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ ಆಗಿದೆ. ಈ ಎರಡರ ಅಭಿವೃದ್ಧಿ ಎಲ್ಲಿ ಆಗುತ್ತದೆಯೋ, ಆ ದೇಶ ಅಥವಾ ರಾಜ್ಯ ವಿಕಾಸ ಹೊಂದಿದಂತೆಯೇ. ಮತ್ತು ಅಲ್ಲಿ ಎಲ್ಲವೂ ಅಭಿವೃದ್ಧಿ ಹೊಂದಿದಂತೆ ಎಂದು ಅವರು ಹೇಳಿದರು.

Conclusion:ಈ ಸಂದರ್ಭ ದ.ಕ.ಜಿಲ್ಲಾ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮನಪಾ ಮೇಯರ್ ಭಾಸ್ಕರ ಕೆ., ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.

Reporter_Vishwanath Panjimogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.