ಮಂಗಳೂರು: ಇಲ್ಲಿನ ಗುರುಪುರದಲ್ಲಿ ಉತ್ಖನನ ಮಾಡುವ ಸಂದರ್ಭದಲ್ಲಿ ವಿಸ್ಮಯವೊಂದು ಕಂಡುಬಂದಿದೆ. 3 ಶತಮಾನಗಳಷ್ಟು ಪುರಾತನ ಎನ್ನಲಾದ ದೈವದ ಮೂರ್ತಿ ಮತ್ತು ಪರಿಕರಗಳು ಪತ್ತೆಯಾಗಿದ್ದು ಅಚ್ಚರಿ ಎನಿಸಿದೆ.
ಗುರುಪುರ ಮಾಣಿಬೆಟ್ಟು ಶ್ರೀ ಕೋರ್ದಬ್ಬು ಪರಿವಾರ ದೈವಸ್ಥಾನ ಬಳಿ ಉತ್ಖನನ ಮಾಡುವ ವೇಳೆ ಈ ಪರಿಕರಗಳು ಪತ್ತೆಯಾಗಿದೆ. ಇತ್ತೀಚಿಗೆ ತಾಂಬೂಲ ಪ್ರಶ್ನೆ ಇಡುವ ವೇಳೆಯಲ್ಲಿ ಶಶಿಕುಮಾರ್ ಪಂಡಿತ್ ಅವರು ಹಳೆ ದೈವಸ್ಥಾನದ ಜಾಗದಲ್ಲಿ ದೈವದ ಸೊತ್ತುಗಳು ಇವೆ ಎಂದು ಸೂಚನೆ ನೀಡಿದ್ದರು. ಇವರ ಸೂಚನೆಯಂತೆ ಉತ್ಖನನ ಮಾಡಿದಾಗ ಹಳೆಯ ಕೋರ್ದಬ್ಬು ದೈವದ ಮೂರ್ತಿ, ಖಡ್ಸಲೆ, ಗೋಣ, ದೈವದ ಕಲ್ಲು, ಗಂಟೆಮಣಿ, ಸುತ್ತಿಗೆ, ದೀಪ ಪತ್ತೆಯಾಗಿವೆ.
ದೀಪ ಮಣ್ಣಿನದಾಗಿದ್ದು, ಉಳಿದವುಗಳು ಪಂಚಲೋಹ, ಹಿತ್ತಾಳೆ ಮತ್ತು ಕಬ್ಬಿಣದ್ದಾಗಿವೆ. ಉತ್ಖನನ ವೇಳೆ ಪತ್ತೆಯಾದ ದೈವದ ಮೂರ್ತಿ ಮತ್ತು ಪರಿಕರಗಳು 3 ಶತಮಾನದಷ್ಟು ಹಳೆಯದಾಗಿರಬಹುದೆಂದು ಅಂದಾಜಿಸಲಾಗಿದೆ.
ಓದಿ: ರಾಜ್ಯದಲ್ಲಿ ಇನ್ನೂ 2 ದಿನ ಭಾರಿ ಮಳೆ: ಇಂದು, ನಾಳೆಗೆ ಆರೆಂಜ್ ಅಲರ್ಟ್