ಪುತ್ತೂರು (ದ.ಕ): ಮುಖದ ಮೇಲಿನ ಮೊಡವೆ ಹೆಚ್ಚಿದ್ದರಿಂದ ಮನನೊಂದು ಶಾಲಾ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಲ್ತಾಡಿ ಗ್ರಾಮದ ನೇರೋಳ್ತಡ್ಕದಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನೇರೋಲ್ತಡ್ಕ ರಾಮ ಎಂಬವರ ಪುತ್ರಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿನಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ.
ಶುಕ್ರವಾರ ಶಾಲೆ ಆರಂಭವಾಗಿದ್ದರಿಂದ ಶಾಲೆಗೆ ಹೋಗುವುದಾಗಿ ಹೇಳಿ ಮನೆಯ ಪಕ್ಕದ ಗೇರು ಬೀಜ ಗುಡ್ಡೆಯಲ್ಲಿ ಮರವೊಂದಕ್ಕೆ ಚೂಡಿದಾರದ ಶಾಲ್ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಮುಖದ ಮೇಲಿನ ಮೊಡವೆಯಿಂದ ದಿವ್ಯಾ ಯಾರ ಮನೆಗೂ, ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ. ಶಾಲೆ ಆರಂಭವಾದ್ದರಿಂದ ಶಾಲೆಗೆ ಮೊಡವೆ ಹೊತ್ತ ಮುಖ ಹಿಡಿದುಕೊಂಡು ಹೇಗೆ ಹೋಗುವುದೆಂದು ಮನನೊಂದಿದ್ದಳು ಎಂದು ತಿಳಿದು ಬಂದಿದೆ.