ETV Bharat / state

ಮಂಗಳೂರು: ಎರಡು ಧರ್ಮಿಯರ ಮಧ್ಯೆ ಸಾಮರಸ್ಯ ಕದಡಲು ಮೆಡಿಕಲ್​ ವಿದ್ಯಾರ್ಥಿನಿಯ ಫೋಟೋ ಎಡಿಟ್!

ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಒಂದು ಧರ್ಮದ ವಿದ್ಯಾರ್ಥಿನಿಯೋರ್ವಳ ಫೋಟೋವನ್ನು ಆಕೆಯ ಇನ್​​ಸ್ಟಾಗ್ರಾಂ ಪೇಜ್​ನಿಂದ ಕದ್ದು, ಅದನ್ನು ಮತ್ತೊಂದು ಧರ್ಮದ ಯುವಕನೊಂದಿಗೆ ಫೋಟೋ ಜೊತೆಗಿಟ್ಟು ಎಡಿಟ್ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿದೆ.

Mangaluru police station
ಮಂಗಳೂರು ಮಹಿಳಾ ಪೊಲೀಸ್ ಠಾಣೆ
author img

By

Published : Jan 16, 2022, 11:02 PM IST

ಮಂಗಳೂರು: ನಗರದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಮತ್ತೊಂದು ಧರ್ಮದ ಯುವಕನೊಂದಿಗೆ ಸಂಬಂಧವಿದೆಯೆಂದು ಆಕೆಯ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳ ಫೋಟೋವನ್ನು ಆಕೆಯ ಇನ್​​ಸ್ಟಾಗ್ರಾಂ ಪೇಜ್​ನಿಂದ ಕದ್ದು, ಅದನ್ನು ಅನ್ಯ ಧರ್ಮದ ಯುವಕನೊಂದಿಗೆ ಫೋಟೋ ಜೊತೆಗಿಟ್ಟು ಎಡಿಟ್ ಮಾಡಲಾಗಿತ್ತು.

ಈ ಫೋಟೋವನ್ನು ಕೆಲವು ಸಾಮಾಜಿಕ ಜಾಲತಾಣದ ಹಲವಾರು ಪೇಜ್​​​ಗಳಲ್ಲಿ ವೈರಲ್ ಮಾಡಲಾಗಿದೆ. ಈ ಎಡಿಟೆಡ್ ಫೋಟೋ ವಿದ್ಯಾರ್ಥಿನಿಗೂ ದೊರಕಿತ್ತು. ಇದೇ ವೇಳೆ ಯುವಕನೊಂದಿಗೆ ವಿದ್ಯಾರ್ಥಿನಿಯ ಕುಚಿಕು ಅನ್ನುವ ವಿಚಾರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿತ್ತು. ಆನಂತರ ಫೋಟೋಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಅನ್ನುವುದು ಕುಟುಂಬಸ್ಥರಿಗೂ ಗೊತ್ತಾಗಿತ್ತು.

ಈ ಎಡಿಟೆಡ್ ಫೋಟೋ ವೈರಲ್ ಆಗುತ್ತಿದ್ದಂತೆ, ಅದರ ಪರ-ವಿರೋಧವೂ ಕೇಳಿಬಂದಿತ್ತು. ಇದೀಗ ವಿದ್ಯಾರ್ಥಿನಿ ಕುಟುಂಬಸ್ಥರು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ಓದಿ: ಚಿಕ್ಕಮಗಳೂರಲ್ಲಿ ಅಚ್ಚರಿ.. ನೇಣು ಹಾಕಿಕೊಂಡ ವರ್ಷದ ಬಳಿಕ ವ್ಯಕ್ತಿ ಮೃತದೇಹ ಪತ್ತೆ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.