ETV Bharat / state

ಆಸ್ಪತ್ರೆಯಲ್ಲಿ ಕೊರೊನಾ ಹಣ ಕೊಡಿಸುವುದಾಗಿ ಮಹಿಳೆಗೆ ಸಾವಿರಾರು ರೂ. ಪಂಗನಾಮ

ಕೊರೊನಾ ಪರಿಹಾರ ಧನ ನೀಡುವುದಾಗಿ ನಂಬಿಸಿ ಮಹಿಳೆಗೆ ಸಾವಿರಾರು ರೂ. ಪಂಗನಾಮ ಹಾಕಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲ ಪೊಲೀಸ್ ಠಾಣೆ
ಉಳ್ಳಾಲ ಪೊಲೀಸ್ ಠಾಣೆ
author img

By

Published : Nov 22, 2020, 10:51 AM IST

ಉಳ್ಳಾಲ (ಮಂಗಳೂರು): ಕೊರೊನಾ ಸಂಬಂಧ ಆಸ್ಪತ್ರೆಯಲ್ಲಿ ಹಣ ಕೊಡುತ್ತಿರುವುದಾಗಿ ಮಹಿಳೆಯನ್ನು ನಂಬಿಸಿ ಯುವಕನೋರ್ವ 60,000 ರೂ. ಮೌಲ್ಯದ ಮಾಂಗಲ್ಯ ಸರ ಮತ್ತು 20,000 ರೂ. ನಗದು ಪಡೆದು ವಂಚಿಸಿರುವ ಘಟನೆ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.20 ರಂದು ತೊಕ್ಕೊಟ್ಟು ಒಳಪೇಟೆಯ ನ್ಯಾಯಬೆಲೆ ಅಂಗಡಿ ಸಮೀಪ ನಿಂತಿದ್ದ ಮಹಿಳೆಯನ್ನು ತನ್ನನ್ನು ಬ್ಯಾಂಕ್ ಸಿಬ್ಬಂದಿಯೆಂದು ರಾಕೇಶ್ ಪರಿಚಯ ಮಾಡಿಕೊಂಡಿದ್ದ. ಕೊರೊನಾ ಸಂಬಂಧ ಆಸ್ಪತ್ರೆಗಳಲ್ಲಿ ರೂ. 2 ಲಕ್ಷ ಹಣ ನೀಡಲಾಗುತ್ತಿದ್ದು, ಅದನ್ನು ವಾಪಸ್​ ಕಟ್ಟಲು ಇರುವುದಿಲ್ಲ. ಈ ದಿನವೇ ಹಣ ಸಿಗುತ್ತದೆ ಎಂದು ನಂಬಿಸಿ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ವೈದ್ಯರಿಗೆ ನೀಡಲು ರೂ. 20,000 ಹಾಗೂ ಹೆಚ್ಚುವರಿಯಾಗಿ ನೀಡಲು ಮಹಿಳೆ ಬಳಿ ಚಿನ್ನವನ್ನು ಕೇಳಿದ್ದ. ಅದರಂತೆ ಮಹಿಳೆಯು 4 ಪವನ್ ತೂಕದ ಮಾಂಗಲ್ಯ ಸರವನ್ನು ನೀಡಿದ್ದಾರೆ. ಅದಕ್ಕೆ ಬದಲಾಗಿ ತನ್ನ ತಾಯಿಯ ಚಿನ್ನದ ಸರ ಇರುವುದಾಗಿ ಮಹಿಳೆಗೆ ನಕಲಿ ಚಿನ್ನವನ್ನು ನೀಡಿ ನಾಪತ್ತೆಯಾಗಿದ್ದಾನೆ.

ಹಣದ ಆಸೆಯಿಂದ ತೆರಳಿದ್ದ ಮಹಿಳೆ ಮೋಸಕ್ಕೆ ಒಳಗಾಗಿದ್ದು, ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.