ETV Bharat / state

ಪುತ್ತೂರು: ಬಡ ಮಹಿಳೆಗೆ ಹಕ್ಕುಪತ್ರಕ್ಕಾಗಿ ಮಾಜಿ ಶಾಸಕಿ ಶಕುಂತಳ ಶೆಟ್ಟಿ ಧರಣಿ

ಬಡ ಮಹಿಳೆಯ ಹಕ್ಕು‌ಪತ್ರಕ್ಕಾಗಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಧರಣಿ ನಡೆಸಿ ನ್ಯಾಯ ದೊರಕಿಸಿದ್ದಾರೆ.

Shakuntala Shetty protest
ಮಾಜಿ ಶಾಸಕಿ ಶಕುಂತಳ ಶೆಟ್ಟಿ ಧರಣಿ
author img

By

Published : Mar 26, 2021, 8:57 PM IST

ಪುತ್ತೂರು: ಆರ್ಯಾಪು ಗ್ರಾಮದ ಮಚ್ಚಿಮಲೆ ಸೀತಮ್ಮಗೆ 94 ಸಿಸಿ ಹಕ್ಕು ಪತ್ರ ಸಿಗದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕಿ ಶಕುಂತಳ ಶೆಟ್ಟಿ ನೇತೃತ್ವದಲ್ಲಿ ಪುತ್ತೂರು ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸಲಾಯಿತು.

ಮಾಜಿ ಶಾಸಕಿ ಶಕುಂತಳ ಶೆಟ್ಟಿ ಧರಣಿ

ಸೀತಮ್ಮಗೆ ಹಕ್ಕು ಪತ್ರ ನೀಡುವುದಾಗಿ ಕಂದಾಯ ಅಧಿಕಾರಿಗಳು ಕಳೆದ ಏಳು ವರ್ಷಗಳಿಂದ ಸತಾಯಿಸಿದ್ದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಧರಣಿ ನಡೆಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಮೇಶ್ ಬಾಬು ಸರ್ಕಾರಿ ಶುಲ್ಕ ಪಾವತಿಸುವಂತೆ ತಿಳಿಸಿದರು. ಮಾಜಿ ಶಾಸಕಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಣ ಸಂಗ್ರಹಿಸಿ ಬ್ಯಾಂಕ್​ಗೆ ಪಾವತಿಸಿದರು. ನಂತರ ಅಧಿಕಾರಿಗಳು ಸೀತಮ್ಮಗೆ ಹಕ್ಕುಪತ್ರ ವಿತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.