ಮಂಗಳೂರು : ಕಾಂಗ್ರೆಸ್ ಆಯೋಜಿಸಿದ ಮೇಕೆದಾಟು ಪಾದಯಾತ್ರೆಯಿಂದ ರಾಜ್ಯ ಸರ್ಕಾರ ಅಲ್ಲಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ತಡೆಯುವ ಪ್ರಯತ್ನ ನಡೆಸಿತು. ನಮ್ಮ ಪಾದಯಾತ್ರೆ ಯಶಸ್ವಿಯಾಗಿದೆ. ಕೊರೊನಾ ಹೆಚ್ಚಳವಾಗಬಾರದೆಂದು ಪಾದಯಾತ್ರೆ ಸ್ಥಗಿತಗೊಳಿಸಲಾಗಿದೆ. ಸೋಂಕು ಕಡಿಮೆಯಾದ ಬಳಿಕ ಮತ್ತೆ ಆರಂಭಿಸಲಾಗುವುದು ಎಂದರು.
ಸ್ತಬ್ಧಚಿತ್ರ ತಿರಸ್ಕಾರ ಖಂಡನೀಯ : ಗಣರಾಜ್ಯೋತ್ಸವದ ಪ್ರಯುಕ್ತ ಕೇರಳ ಸರ್ಕಾರ ನಿರ್ಮಿಸಿದ ಬ್ರಹ್ಮರ್ಷಿ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ ಖಂಡನೀಯ. ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಿಸಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಅವಮಾನ ಮಾಡಿದೆ.
ಅವರು ಇಡೀ ದೇಶದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದವರು. ಬ್ರಹ್ಮರ್ಷಿ ನಾರಾಯಣ ಗುರು ಮತ್ತು ಶಂಕರಾಚಾರ್ಯರ ಸ್ಥಬ್ದಚಿತ್ರಗಳನ್ನು ಕೇಂದ್ರವೇ ಮಾಡಲಿ. ರಾಜ್ಯದ ಕರಾವಳಿ ಜಿಲ್ಲೆಯ ಸಂಸದರು ಹಾಗೂ ಇತರ ಜಿಲ್ಲೆಯ ಸಂಸದರು ಕೇಂದ್ರದ ಜತೆ ಮಾತುಕತೆ ನಡೆಸಲಿ ಎಂದು ಸಲಹೆ ನೀಡಿದರು.
ಕರ್ಫ್ಯೂ ಹಿಂಪಡೆಯಲಿ : ವೀಕೆಂಡ್ ಕರ್ಫ್ಯೂವಿನಿಂದ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಇದನ್ನು ಹಿಂಪಡೆಯಬೇಕು ಎಂದು ಖಾದರ್ ಆಗ್ರಹಿಸಿದರು.
ಇದನ್ನೂ ಓದಿ: ಬೆಂಗಳೂರು ಕೋವಿಡ್ ವರದಿ.. ಕೊಂಚ ತಗ್ಗಿದ ಸೋಂಕು