ETV Bharat / state

ವ್ಯವಸ್ಥೆ ಸರಿಪಡಿಸದೇ ಇದ್ದರೆ ಬಸ್​​​ ಎದುರು ಅಡ್ಡ ಮಲಗುತ್ತೇನೆ: ರಮಾನಾಥ ರೈ - ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ರಾಜಧರ್ಮ ಎಂದರೆ ರಾಜಕೀಯ ಮಾಡುವುದಲ್ಲ, ಎಲ್ಲ ಜಾತಿ, ಧರ್ಮ, ಭಾಷೆ ಅವರನ್ನು ಒಂದೇ ರೀತಿ ಕಾಣುವುದು ರಾಜಧರ್ಮ. 94 ಸಿ ಕೊಡಬೇಕಾದರೆ ಶಕ್ತಿ ಕೇಂದ್ರಕ್ಕೆ ದೂರವಾಣಿ ಕರೆ ಮಾಡಬೇಕು ಇದೆಂಥಾ ವ್ಯವಸ್ಥೆ ಎಂದು ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ರಮಾನಾಥ ರೈ

author img

By

Published : Aug 31, 2021, 4:50 PM IST

ಬಂಟ್ವಾಳ : ಪದೇ ಪದೆ ರಾಜಧರ್ಮವನ್ನು ಉಲ್ಲೇಖಿಸುವ ಬಿಜೆಪಿ ಆಡಳಿತ ಇಂದು ಕ್ಷೇತ್ರದಲ್ಲಿ ತಾರತಮ್ಯ ಎಸಗುತ್ತಿದ್ದು, ಇದು ಮುಂದುವರಿದರೆ ಬಸ್ಸಿನೆದುರು ಅಡ್ಡ ಮಲಗುತ್ತೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ರಮಾನಾಥ ರೈ

ಮಂಗಳವಾರ ದಿಢೀರ್​ ತಮ್ಮ ಬೆಂಬಲಿಗರೊಂದಿಗೆ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ರೈ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತಹಶೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ, ಕೆಎಸ್​ಆರ್​ಟಿಸಿ ಐಸಿಯು ಬಸ್​ಗಳು, ಕಾಂಗ್ರೆಸ್ ಮತ್ತಿತರ ಪಕ್ಷ ಬೆಂಬಲಿತರ ಆಡಳಿತ ಇರುವ ಪಂಚಾಯಿತಿ ಊರಿಗೆ ಬರುವುದಿಲ್ಲ. ಬಿಜೆಪಿ ಬೆಂಬಲಿತರ ಆಡಳಿತವಿದ್ದ ಪಂಚಾಯಿತಿಗೆ ಮಾತ್ರ ಬರುತ್ತದೆ. ಕಾರ್ಮಿಕರಿಗೆ ಕಿಟ್ ಅರ್ಹರ ಕೈಸೇರುತ್ತಿಲ್ಲ.

ಯಾರ್ಯಾರೋ ಇದನ್ನು ವಿತರಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆ ಮೇಲೆ ಬೆದರಿಕೆ ಕುರಿತು ಆಡಳಿತ ಗಂಭೀರವಾಗಿ ಪರಿಗಣಿಸಿಲ್ಲ. 94 ಸಿ ಸವಲತ್ತು ಅರ್ಹರಿಗೆ ವಿತರಣೆ ಆಗಬೇಕು ಎಂಬ ಹಲವು ವಿಚಾರಗಳ ಕುರಿತು ತಹಶೀಲ್ದಾರರ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.

ಅಧಿಕಾರಿಗಳು ತಪ್ಪು ಮಾಡಿದರೆ ಅವರ ವಿರುದ್ಧ ಹೋರಾಟವನ್ನು ನಾವು ಮಾಡುತ್ತೇವೆ. ನಿಜವಾದ ಕಾರ್ಮಿಕರಿಗೆ ಕಿಟ್ ಸಿಕ್ಕಿಲ್ಲ. ಬಿಜೆಪಿ ಪಂಚಾಯಿತಿ ಇದ್ದಲ್ಲಿ ಪಂಚಾಯಿತಿಯಲ್ಲಿ ಕೊಡ್ತಾರೆ, ಇಲ್ಲದಲ್ಲಿ ಕಾರ್ಯಕರ್ತರ ಮೂಲಕ ಕೊಡ್ತಾರೆ. ಪಂಚಾಯಿತಿ ಆಡಳಿತ ವ್ಯವಸ್ಥೆ ಮೂಲಕ ಸವಲತ್ತುಗಳನ್ನು ಕೊಡುವುದು ಸರಿಯಾದ ಮಾರ್ಗವಲ್ಲವೇ ಎಂದು ಪ್ರಶ್ನಿಸಿದರು.

ನಾವು ಈ ಕುರಿತು ಬೇಡಿಕೆ ಕೊಟ್ಟರೂ ಬೆಲೆ ಸಿಗದಿದ್ದ ಕಾರಣ ಪ್ರತಿಭಟನೆ ಮಾಡಿದ್ದೇವೆ ಎಂದ ಅವರು, ರಾಜಧರ್ಮ ಎಂದರೆ ರಾಜಕೀಯ ಮಾಡುವುದಲ್ಲ, ಎಲ್ಲ ಜಾತಿ, ಧರ್ಮ, ಭಾಷೆಯವರನ್ನು ಒಂದೇ ರೀತಿ ಕಾಣುವುದು ರಾಜಧರ್ಮ. 94 ಸಿ ಕೊಡಬೇಕಾದರೆ ಶಕ್ತಿಕೇಂದ್ರಕ್ಕೆ ದೂರವಾಣಿ ಕರೆ ಮಾಡಬೇಕು ಇದೆಂಥ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಕಿಚ್ಚ ಸುದೀಪ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.