ETV Bharat / state

ಜೆಡಿಎಸ್​ನ ಜಾತ್ಯಾತೀತ ಮುಖವಾಡ ಜನತೆಯ ಮುಂದೆ ಬಯಲಾಗಿದೆ : ಅಭಯಚಂದ್ರ ಜೈನ್

author img

By

Published : Feb 2, 2021, 3:43 PM IST

ಈಗಾಗಲೇ ಸರ್ಕಾರದಿಂದ ಅವರಿಗೆ ದೊರಕಿರುವ ಬಂಗಲೆ, ಕಾರು, ಪಿಎ ಎಲ್ಲವನ್ನೂ ಬಿಟ್ಟಿದ್ದು, ಕೆಎಸ್ಆರ್​ಟಿಸಿ ಬಸ್​ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್​ ಮುಖವಾಡ ಕಳಚಬೇಕೆಂದು, ಇದನ್ನು ಅಂತಿಮ ಹಂತಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ..

Abhayachandra Jain Press meet at Mangaluru
ಮಾಜಿ ಸಚಿವ ಅಭಯಚಂದ್ರ ಜೈನ್

ಮಂಗಳೂರು : ಜೆಡಿಎಸ್​ ಹಾಗೂ ಬಿಜೆಪಿ ಒಟ್ಟಿಗೆ ಸೇರಿ ಪ್ರತಾಪ್‌ ಚಂದ್ರ ಶೆಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ನಡೆಸುತ್ತಿವೆ. ಈ ಮೂಲಕ ಜಾತ್ಯಾತೀತ ಹಣೆಪಟ್ಟಿಯಿರುವ ಜೆಡಿಎಸ್​ನ ಮುಖವಾಡ ರಾಜ್ಯದ ಜನತೆಯ ಮುಂದೆ ಬಯಲಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ನಗರದ ಪ್ರೆಸ್ ಕ್ಲಬ್​ನಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿಯವರು ತಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಹೇಳಿಕೆ ನೀಡುತ್ತಾರೆ. ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈ ರೀತಿಯ ಅಧಿಕಾರ ದಾಹವಿಲ್ಲ. ಅವರು ಅಧಿಕಾರದಿಂದ ಇಳಿಯಲು ಸಿದ್ದರಿದ್ದಾರೆ. ಇಂದಲ್ಲ, ನಾಳೆ ರಾಜೀನಾಮೆ ನೀಡುವವರಿದ್ದಾರೆ.

ಈಗಾಗಲೇ ಸರ್ಕಾರದಿಂದ ಅವರಿಗೆ ದೊರಕಿರುವ ಬಂಗಲೆ, ಕಾರು, ಪಿಎ ಎಲ್ಲವನ್ನೂ ಬಿಟ್ಟಿದ್ದು, ಕೆಎಸ್ಆರ್​ಟಿಸಿ ಬಸ್​ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್​ ಮುಖವಾಡ ಕಳಚಬೇಕೆಂದು, ಇದನ್ನು ಅಂತಿಮ ಹಂತಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್..

ಓದಿ : 'ಹುಟ್ಟುವ ಮಗುವಿಗೂ ಋಣಭಾರ ಹೊರಿಸಿದ ಬೂಸಾ ಬಜೆಟ್.. ದುಡಿಯೋ ರೈತನಿಗೆ ಹಗ್ಗವೇ ಗತಿ'

ಜೆಡಿಎಸ್​​ ಕೈಗೆ ಅಧಿಕಾರ ದೊರಕಬೇಕು, ಲಿಂಗಾಯತ ಸಮುದಾಯದ ಹೊರಟ್ಟಿಯವರಿಗೆ ಸಭಾಪತಿ ಸ್ಥಾನ ಸಿಗಬೇಕು. ಈ ಮೂಲಕ ಅಧಿಕಾರ ಲಿಂಗಾಯತ ಸಮುದಾಯದಲ್ಲಿರಬೇಕೆಂದು ಜೆಡಿಎಸ್​ ಹಾಗೂ ಬಿಜೆಪಿಯ ಒಳ ಒಪ್ಪಂದದ ಮೂಲಕ ಅವಿಶ್ವಾಸ ತರಲು ಪ್ರಯತ್ನ ನಡೆಯುತ್ತಿದೆ.

ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈ ಮೂಲಕ ಅವಮಾನ ಮಾಡಲಾಗುತ್ತಿದೆ, ಭ್ರಷ್ಟಾಚಾರಿಗಳಿಗೆ ಮಣೆ ಹಾಕಲಾಗುತ್ತಿದೆ. ಓರ್ವ ಸಜ್ಜನ ರಾಜಕಾರಣಿಗೆ ಅನ್ಯಾಯವಾಗುತ್ತಿದೆ ಎಂಬ ನೋವನ್ನು‌ ವ್ಯಕ್ತಪಡಿಸುತ್ತಿದ್ದೇನೆ ಎಂದು ಅಭಯಚಂದ್ರ ಜೈನ್ ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.