ETV Bharat / technology

ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಹುವಾವೇ ಮೇಟ್​ 70 ಸೀರಿಸ್​ - HUAWEI MATE 70 SERIES LAUNCH

ಇನ್ನು ಕೆಲವೇ ದಿನಗಳಲ್ಲಿ ಹುವಾವೇ ಇಂದ ಹೊಸ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ. ಈ ಚೀನಿ ಕಂಪನಿ ತನ್ನ ಮೇಟ್​ 70 ಸೀರಿಸ್​ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

HUAWEI MATE 70 PRO RELEASE DATE  HUAWEI MATE 70 SERIES DESIGN  HUAWEI MATE 70 LAUNCH DATE  HUAWEI MATE 70 SERIES
ಹುವಾವೇ (IANS)
author img

By ETV Bharat Tech Team

Published : Nov 18, 2024, 1:58 PM IST

HUAWEI Mate 70 Series Launch: ಹುವಾವೇ ನಿಂದ ಹೊಸ ಸ್ಮಾರ್ಟ್‌ಫೋನ್‌ಗಳು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಚೀನಿ ಕಂಪನಿಯು ತನ್ನ 'ಮೇಟ್ 70' ಸರಣಿಯ ಬಿಡುಗಡೆ ದಿನಾಂಕವನ್ನು ಅಂತಿಮವಾಗಿ ಬಹಿರಂಗಪಡಿಸಿದೆ. ಕಂಪನಿ ತನ್ನ 'Huawei Mate Brand' ಸಮಾರಂಭದಲ್ಲಿ ಇವುಗಳನ್ನು ಪರಿಚಯಿಸುವುದಾಗಿ ಬಹಿರಂಗಪಡಿಸಿದೆ. ಅಷ್ಟೇ ಅಲ್ಲ, ಹುವಾವೇ ಕಂಪನಿಯು ಇಂದೇ 'ಮೇಟ್ 70' ಸೀರಿಸ್​ ಮೊಬೈಲ್​ಗಳ ಪ್ರಿ-ಬುಕಿಂಗ್ ಸಹ ಆರಂಭಿಸಿದೆ.

'Mate 70' ಮತ್ತು 'Mate 70 Pro' ಮೊಬೈಲ್‌ಗಳು 12GB RAM ಮತ್ತು 1TB ಸ್ಟೋರೇಜ್​ಗಳು ಹೊಂದಿವೆ. ಕಂಪನಿಯು ಈ ಮೊಬೈಲ್ ಅನ್ನು ಒಬ್ಸಿಡಿಯನ್ ಬ್ಲಾಕ್, ಸ್ನೋ ವೈಟ್, ಸ್ಪರ್ಸ್ ಗ್ರೀನ್, ಹಯಸಿಂತ್ ಪರ್ಪಲ್ ಮುಂತಾದ ನಾಲ್ಕು ಕಲರ್​ಗಳಲ್ಲಿ ತರಲಿದೆ. 'ಮೇಟ್ 70 ಪ್ರೊ ಪ್ಲಸ್' ಮೊಬೈಲ್ ಇಂಕ್ ಬ್ಲ್ಯಾಕ್, ಫೆದರ್ ವೈಟ್, ಗೋಲ್ಡ್ ವಿತ್ ಸಿಲ್ವರ್ ಮತ್ತು ಬ್ಲೂ ಕಲರ್​ ಆಯ್ಕೆಗಳಲ್ಲಿ 16GB+1TB ಆವೃತ್ತಿಯಲ್ಲಿ ಲಭ್ಯವಿದೆ. ಸಿರೀಸ್​ 'ಮೇಟ್ 70 ಆರ್​ಎಸ್' ಅನ್ನು ಸಹ ಒಳಗೊಂಡಿದೆ.

'ಮೇಟ್ 70 ಪ್ರೊ' ಮೊಬೈಲ್ 6.88 ಇಂಚಿನ ಕ್ವಾಡ್-ಕರ್ವ್ಡ್ ಸ್ಕ್ರೀನ್‌ ಹೊಂದಿದೆ. ಇದು 120Hz ರಿಫ್ರೆಶ್ ರೇಟ್​, 1.5K ರೆಸಲ್ಯೂಶನ್‌ ಒಳಗೊಂಡಿದೆ. ಇದು ToF 3D ಫೇಸ್​ ರಿಕಾಗ್ನೇಶನ್​ ಸಪೋರ್ಟ್​ನೊಂದಿಗೆ ಎಂಟ್ರಿ ಕೊಡಲಿದೆ. ಕಂಪನಿಯು ಈ ಕ್ವಾಡ್-ಕರ್ವ್ಡ್ ಸ್ಕ್ರೀನ್​ನೊಂದಿಗೆ ಹೆಚ್ಚಿನ ಮಾದರಿಗಳನ್ನು ತರಲಿದೆ. ಆದರೂ ಸಹ ಸ್ಟ್ಯಾಂಡರ್ಡ್ ಮಾಡೆಲ್​ ಫ್ಲಾಟ್ ಸ್ಕ್ರೀನ್​ನೊಂದಿಗೆ ಮುಂದು ಸಾಗಲಿದೆ.

ಕಂಪನಿಯು ತನ್ನ 'ಹುವಾವೇ ಮೇಟ್ 70' ಟೀಸರ್ ಇಮೇಜ್​ ಅನ್ನು ಬಿಡುಗಡೆ ಮಾಡಿದೆ. ಇದು ಅದರ ಹಿಂದಿನ ವಿನ್ಯಾಸವನ್ನು ಬಹಿರಂಗಪಡಿಸಿತು. ಈ ಮೊಬೈಲ್ ನಾಲ್ಕು ಲೆನ್ಸ್‌ಗಳೊಂದಿಗೆ ಬೃಹತ್ ಕ್ಯಾಮೆರಾ ಬಂಪ್ ಹೊಂದಿದೆ. ಹಿಂದಿನ ಮಾದರಿಗಳಿಗೆ ಹೋಲಿಸಿದರೆ, ಅದರ ಹೊಸ ಹಿಂಭಾಗದ ವಿನ್ಯಾಸವನ್ನು ಹೆಚ್ಚು ಅಪ್​ಡೇಟ್​ ಮಾಡಲಾಗಿದೆ.

ಇದು ಫೇಸ್​ ರಿಕಾಗ್ನೇಶನ್​ ವೈಶಿಷ್ಟ್ಯಗಳೊಂದಿಗೆ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇದು ವೇರಿಯಬಲ್ ಅಪರ್ಚರ್ ತಂತ್ರಜ್ಞಾನದೊಂದಿಗೆ ಆಪ್ಟಿಮೈಸ್ಡ್ XMAGE ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. ಇದರ ಬ್ಯಾಟರಿ ಬಗ್ಗೆ ಮಾತನಾಡೋದಾದ್ರೆ, ಈ ಫೋನ್​ ಹೆಚ್ಚು ಸಾಮರ್ಥ್ಯವುಳ್ಳ ಬ್ಯಾಟರಿಯನ್ನು ಪ್ರಸ್ತುತ ಪಡಿಸಲಿದೆ. ಎಂದು ತೋರುತ್ತದೆ. ಆದರೆ ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಮೊಬೈಲ್ ಇತ್ತೀಚಿನ HarmonyOS ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಎಲ್ಲಾ ಮೇಟ್ 70 ಸೀರಿಸ್​ ಮೊಬೈಲ್‌ಗಳು ಡಸ್ಟ್​ ಪ್ರೂಫ್​, ವಾಟರ್​ಪ್ರೂಫ್​ ರೇಟಿಂಗ್‌ಗಳೊಂದಿಗೆ ಬರಲಿದೆ. 'Huawei Mate 60' ಸಿರೀಸ್​ಗಿಂತ ಭಿನ್ನವಾಗಿದೆ. ಕಂಪನಿಯು ತನ್ನ 'Huawei Mate 70' ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ನಡೆಸುತ್ತಿದೆ. ಹೀಗಾಗಿ ಕಂಪನಿಯು ಈ 'ಹುವಾವೇ ಮೇಟ್ ಬ್ರಾಂಡ್' ಕಾರ್ಯಕ್ರಮದ ದಿನಾಂಕವನ್ನು ನವೆಂಬರ್ 26, 2024 ರಂದು ನಿಗದಿಪಡಿಸಲಾಗಿದೆ ಎಂದು ಘೋಷಿಸಿದೆ.

ಓದಿ: ಗೂಗಲ್​ ಮ್ಯಾಪ್ಸ್​ನಲ್ಲಿ ಅಡಗಿವೆ ಅದ್ಭುತ ಫೀಚರ್​ಗಳು: ಇವುಗಳನ್ನು ನೀವು ಒಮ್ಮೆಯಾದರೂ ಬಳಸಿದ್ದೀರಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.