ಮಂಗಳೂರು: ಕರಾವಳಿ ನಗರಿ ಮಂಗಳೂರು ಮೆಲ್ಲಗೆ ಶಾಂತವಾಗುತ್ತಿದೆ. ಇದರ ಬೆನ್ನಲ್ಲೇ ವಿದೇಶಿ ಪ್ರವಾಸಿಗರನ್ನು ಹೊತ್ತ ಹಡಗು ಮಂಗಳೂರು ತಲುಪಿದೆ.
ಕೋಸ್ಟ್ ವಿಕ್ಟೋರಿಯ ಎಂಬ ಹೆಸರಿನ ಹಡಗು ಇಂದು ನವ ಮಂಗಳೂರು ಬಂದರು ತಲುಪಿದೆ. 1726 ವಿದೇಶಿ ಪ್ರವಾಸಿಗರು ಮತ್ತು 791 ಸಿಬ್ಬಂದಿ ಇದ್ದ ಈ ಹಡಗು ನವ ಮಂಗಳೂರು ಬಂದರು ತಲುಪುತ್ತಿದ್ದಂತೆ ಸ್ಥಳೀಯ ಜಾನಪದ ನೃತ್ಯ ತಂಡಗಳ ಮೂಲಕ ಸ್ವಾಗತಿಸಲಾಯಿತು.
ಈ ಹಡಗಿನಲ್ಲಿದ್ದ ಪ್ರವಾಸಿಗರಲ್ಲಿ 625 ಮಂದಿ ಮಂಗಳೂರು ಸುತ್ತಮುತ್ತಲಿನ ಪ್ರದೇಶ ವೀಕ್ಷಣೆ ಮಾಡಲು ಹೆಸರು ನೋಂದಾಯಿಸಿದ್ದಾರೆ. ಹಾಗಾಗಿ ಕರಾವಳಿ ನಗರಿಯನ್ನು ಸುತ್ತು ಹಾಕಲಿದ್ದಾರೆ. ಮುಂಬೈ ಬಂದರಿನಿಂದ ಮಂಗಳೂರು ಬಂದರಿಗೆ ಬಂದ ಈ ಹಡಗು ಮುಂದೆ ಕೊಚ್ಚಿನ್ಗೆ ಪ್ರಯಾಣ ಬೆಳೆಸಲಿದೆ.