ETV Bharat / state

ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳಮುಖಿಯರಿಂದ ಯಕ್ಷಗಾನ ಬಯಲಾಟ ಆಯೋಜನೆ - For the first time in the history, Yakshagana is being organized by transgenders

ಮಂಗಳೂರು ನಗರದ ಕೋಡಿಕಲ್ ಕಟ್ಟೆಯ ಮೈದಾನದಲ್ಲಿ ಫೆ. 25ರಂದು ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವನ್ನು ಮಂಗಳಮುಖಿಯರು ಆಯೋಜಿಸಿದ್ದಾರೆ.

Yakshagana is being organized by transgenders
ಮಂಗಳಮುಖಿಯರಿಂದ ಯಕ್ಷಗಾನ ಬಯಲಾಟ ಆಯೋಜನೆ
author img

By

Published : Feb 22, 2022, 7:42 PM IST

ಮಂಗಳೂರು: ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟ ಮಂಗಳಮುಖಿಯರು ಯಕ್ಷಗಾನವನ್ನು ಆಯೋಜಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಐದು ಮಂದಿ ಮಂಗಳಮುಖಿಯರು ಸೇರಿ ಈ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದಾರೆ.

ಮಂಗಳೂರು ನಗರದ ಕೋಡಿಕಲ್ ಕಟ್ಟೆಯ ಮೈದಾನದಲ್ಲಿ ಫೆ.25ರಂದು ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟರ ಮುಂದಾಳತ್ವದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯವರು ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಸಲಿದ್ದಾರೆ. ಸುಮಾರು 1,500ರಷ್ಟು ಜನ ಸೇರುವ ನಿರೀಕ್ಷೆಯಿದ್ದು, ಅಷ್ಟೂ ಮಂದಿ ಯಕ್ಷಗಾನ ‌ಆಸಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಪತಿಯನ್ನ ಕಿಡ್ನಾಪ್​​ ಮಾಡಲಾಗಿದೆ ಎಂದು ಪೊಲೀಸ್​​ ಠಾಣೆ ಮೆಟ್ಟಿಲೇರಿದ ನಟ ಚೇತನ್​​ ಪತ್ನಿ

ಅಶೋಕನಗರ, ದಂಬೇಲ್‌ನಲ್ಲಿ ವಾಸವಿರುವ ಮಂಗಳಮುಖಿಯರು ಈ ಯಕ್ಷಗಾನವನ್ನು ಆಯೋಜಿಸಿದ್ದಾರೆ. ಈ ಐವರು ಯಾವುದೇ ದೇಣಿಗೆ ಪಡೆಯದೇ ತಾವು ಕೆಲಸ ಮಾಡಿ ಸಂಪಾದನೆ ಮಾಡಿ ಉಳಿಸಿದ ಹಣವನ್ನು ದೇವಿಯ ಸೇವೆಗೆ ವಿನಿಯೋಗಿಸಲು ಮುಂದಾಗಿದ್ದಾರೆ. ಈ ಮುಂಗಳಮುಖಿಯರ ನಡೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.