ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ಪುತ್ತೂರು ಪತ್ರಿಕಾ ಭವನದಲ್ಲಿ ವಿತರಿಸಲಾಯಿತು.
ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಇಂದು ದೇಶದಲ್ಲಿ ಕೊರೊನಾ ವಿರುದ್ಧ ನಿರ್ಣಾಯಕ ಸಮರ ನಡೆಯುತ್ತಿದೆ. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು, ನಾನಾ ಇಲಾಖೆಗಳು, ಸ್ವಚ್ಛತಾ ವಿಭಾಗದವರನ್ನು ಈ ಸಂದರ್ಭದಲ್ಲಿ ನಾವು ಕೊರೊನಾ ಯೋಧರು ಎಂದು ಕರೆಯುತ್ತಿದ್ದೇವೆ. ಪತ್ರಕರ್ತರು ಕೂಡ ಕೊರೊನಾ ವಾರಿಯರ್ಸ್ ಆಗಿದ್ದಾರೆ ಎಂದರು. ಸಂಕಷ್ಟದ ಮಧ್ಯೆಯೂ ಪತ್ರಕರ್ತರು ದಿನವಿಡೀ ಮಾಡುತ್ತಿರುವ ಸೇವೆ ದೊಡ್ಡದು. ಎಸ್‌ಸಿಡಿಸಿಸಿ ಬ್ಯಾಂಕ್ ಪತ್ರಕರ್ತರನ್ನು ಗೌರವಿಸುವ ರೂಪದಲ್ಲಿ ಈ ಕಿಟ್ ನೀಡುತ್ತಿದೆ. ಶಾಸಕರ ವಾರ್ ರೂಂ ಮೂಲಕ ಇದನ್ನು ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಂ ರೈ, ಶಾಸಕರ ವಾರ್ ರೂಂ ಸಂಯೋಜಕ ಸಾಜ ರಾಧಾಕೃಷ್ಣ ಆಳ್ವಾ ಉಪಸ್ಥಿತರಿದ್ದರು.
ಎಸ್‌ಸಿಡಿಸಿಸಿ ಬ್ಯಾಂಕ್ನಿಂದ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಯಿತು.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ಪುತ್ತೂರು ಪತ್ರಿಕಾ ಭವನದಲ್ಲಿ ವಿತರಿಸಲಾಯಿತು.
ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಇಂದು ದೇಶದಲ್ಲಿ ಕೊರೊನಾ ವಿರುದ್ಧ ನಿರ್ಣಾಯಕ ಸಮರ ನಡೆಯುತ್ತಿದೆ. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರು, ನಾನಾ ಇಲಾಖೆಗಳು, ಸ್ವಚ್ಛತಾ ವಿಭಾಗದವರನ್ನು ಈ ಸಂದರ್ಭದಲ್ಲಿ ನಾವು ಕೊರೊನಾ ಯೋಧರು ಎಂದು ಕರೆಯುತ್ತಿದ್ದೇವೆ. ಪತ್ರಕರ್ತರು ಕೂಡ ಕೊರೊನಾ ವಾರಿಯರ್ಸ್ ಆಗಿದ್ದಾರೆ ಎಂದರು. ಸಂಕಷ್ಟದ ಮಧ್ಯೆಯೂ ಪತ್ರಕರ್ತರು ದಿನವಿಡೀ ಮಾಡುತ್ತಿರುವ ಸೇವೆ ದೊಡ್ಡದು. ಎಸ್‌ಸಿಡಿಸಿಸಿ ಬ್ಯಾಂಕ್ ಪತ್ರಕರ್ತರನ್ನು ಗೌರವಿಸುವ ರೂಪದಲ್ಲಿ ಈ ಕಿಟ್ ನೀಡುತ್ತಿದೆ. ಶಾಸಕರ ವಾರ್ ರೂಂ ಮೂಲಕ ಇದನ್ನು ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಂ ರೈ, ಶಾಸಕರ ವಾರ್ ರೂಂ ಸಂಯೋಜಕ ಸಾಜ ರಾಧಾಕೃಷ್ಣ ಆಳ್ವಾ ಉಪಸ್ಥಿತರಿದ್ದರು.
TAGGED:
food kits Distribution