ETV Bharat / state

ದುಬೈನಿಂದ 168 ಮಂದಿ‌ ಪ್ರಯಾಣಿಕರನ್ನು ಹೊತ್ತು ತಂದ 'ಫ್ಲೈ ದುಬೈ' - 'Fly Dubai'

ಅನಿವಾಸಿ ಕನ್ನಡಿಗರನ್ನು ದುಬೈನಿಂದ ತಾಯ್ನಾಡಿಗೆ ಕರೆತಂದ 'ಫ್ಲೈ ದುಬೈ' ಬಾಡಿಗೆ ವಿಮಾನ ಮಂಗಳೂರು ಅಂತರ್​​ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

ಮಂಗಳೂರು ಅಂತರ್​​ರಾಷ್ಟ್ರೀಯ ವಿಮಾನ ನಿಲ್ದಾಣ
ಮಂಗಳೂರು ಅಂತರ್​​ರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Jun 23, 2020, 10:50 PM IST

ಮಂಗಳೂರು: ಕೋವಿಡ್ ಲಾಕ್​ಡೌನ್​​ನಿಂದ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ಕಾರ್ಯ ಮುಂದುವರೆದಿದ್ದು, ಇಂದು ದುಬೈನಿಂದ 168 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ಮಂಗಳೂರು ಅಂತರ್​​ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಮಧ್ಯಾಹ್ನ 2 ಗಂಟೆಗೆ ಹೊರಟ ಈ ಬಾಡಿಗೆ ವಿಮಾನ ಸಂಜೆ 7.35ಕ್ಕೆ ಮಂಗಳೂರು ಅಂತರ್​​ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ. 6 ಮಂದಿ ಮಕ್ಕಳು ಸೇರಿ 168 ಮಂದಿ ಪ್ರಯಾಣಿಕರು ಈ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ.

ಎಂ. ಫ್ರೆಂಡ್ಸ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್​​​ನ "ಫ್ಲೈ ದುಬೈ" ಏಜೆನ್ಸಿ ಮೂಲಕ ಈ ಬಾಡಿಗೆ ವಿಮಾನ ಆಯೋಜನೆಗೊಂಡಿದೆ. 'ಫ್ಲೈ ದುಬೈ' ಎಂಬ ಹೆಸರಿನ ವಿಮಾನವು ಪ್ರಪ್ರಥಮ ಬಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ವಿಮಾನದ ಪ್ರಯಾಣ ಭತ್ಯೆಯನ್ನು ಪ್ರಯಾಣಿಕರೇ ಭರಿಸಿದ್ದು, ಈ ವಿಮಾನದಲ್ಲಿ ಆಗಮಿಸಿದ್ದ 29 ಮಂದಿ ಕೇರಳಕ್ಕೆ ತೆರಳಿದ್ದಾರೆ. 15 ಮಂದಿ ಉಡುಪಿಗೆ ಹೋಗಿದ್ದು, ಉಳಿದವರು ಮಂಗಳೂರಿನಲ್ಲಿಯೇ ಕ್ವಾರಂಟೈನ್​ಗೆ ಒಳಗಾಗಿದ್ದಾರೆ‌.

ವಿದೇಶದಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಸಾಂಸ್ಥಿಕ ನಿಗಾವಣೆ (ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್)ಯಲ್ಲಿರಿಸಲಾಗುತ್ತದೆ. ಈ ಪ್ರಯಾಣಿಕರ ಗಂಟಲಿನ ದ್ರವ ಮಾದರಿಯ ಪರೀಕ್ಷೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಆ ವರದಿ ಬರುವವರೆಗೂ ಪ್ರಯಾಣಿಕರು ಕ್ವಾರಂಟೈನ್‌ನಲ್ಲಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.