ETV Bharat / state

ಶಿಶಿಲ: ಕಪಿಲಾ ನದಿನೀರಲ್ಲಿ ಮೀನು ಹಿಡಿಯಲು ಬಂದವರಿಗೆ ಧರ್ಮದೇಟು - ಶಿಶಿಲೇಶ್ವರನ ಸನ್ನಿಧಿ

ಶಿಶಿಲೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಮೀನು ಹಿಡಿಯಲು ಬಂದವರನ್ನು ಸಾರ್ವಜನಿಕರು ಹಿಡಿದು ಥಳಿಸಿದರು.

Fish
Fish
author img

By

Published : Jun 23, 2020, 1:08 PM IST

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿಶಿಲೇಶ್ವರನ ಸನ್ನಿಧಿಯ ಕಪಿಲಾ ನದಿಯಲ್ಲಿ ಮೀನು ಹಿಡಿಯಲು ಬಂದಿದ್ದ ಸ್ಥಳೀಯ 7 ಮಂದಿಯನ್ನು ಹಿಡಿದ ಸಾರ್ವಜನಿಕರು ಥಳಿಸಿರುವ ಘಟನೆ ಶಿಶಿಲದಲ್ಲಿ ನಡೆದಿದೆ.

ಭಾನುವಾರ ಸೂರ್ಯಗ್ರಹಣದ ದಿನ ದೇವಳದ ಪರಿಸರದಲ್ಲಿ ಯಾರೂ ಇರುವುದಿಲ್ಲ ಎಂದು ಮೀನು ಹಿಡಿಯಲು ಬಂದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ದೇವರ ಮೀನುಗಳೆಂದೇ ಪರಿಗಣಿಸಲ್ಪಟ್ಟಿದ್ದು ದೇವಸ್ಥಾನದ 2 ಕಿ.ಮೀ ನದಿಯಲ್ಲಿ ಮೀನು ಹಿಡಿಯಲು ನಿಷೇಧವಿದೆ. ಹೀಗಿದ್ದರೂ ಮೀನು ಹಿಡಿಯಲು ಬಂದಿರುವ ತಂಡದ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.