ETV Bharat / state

ಬೆಳ್ತಂಗಡಿ: ವಿದ್ಯುತ್ ಟ್ರಾನ್ಸ್​​ಫಾರ್ಮರ್​ನ ಕಿಡಿ ತಾಗಿ ಗುಡ್ಡಕ್ಕೆ ಬೆಂಕಿ - ಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು ಸಹಿತ ಮಳೆ

ಬೆಳ್ತಂಗಡಿ ತಾಲೂಕಿನ ಹಲವೆಡೆ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಲಾಯಿಲ ಗ್ರಾಮದ ರಾಗಿಬೆಟ್ಟು ಎಂಬಲ್ಲಿ ವಿದ್ಯುತ್ ಟ್ರಾನ್ಸ್​​ಫಾರ್ಮರ್‌ನಿಂದ ಸಿಡಿದ ಕಿಡಿಯಿಂದ ಗುಡ್ಡಕ್ಕೆ ಬೆಂಕಿ ಬಿದ್ದಿದೆ.

Fire to the hill in belthangadi
ವಿದ್ಯುತ್ ಟ್ರಾನ್ಸ್​​ಫಾರ್ಮರ್​ನ ಕಿಡಿ ತಾಗಿ ಗುಡ್ಡಕ್ಕೆ ಬೆಂಕಿ
author img

By

Published : Apr 12, 2021, 7:26 AM IST

ಬೆಳ್ತಂಗಡಿ(ದಕ್ಷಿಣ ಕನ್ನಡ): ಧರ್ಮಸ್ಥಳ, ಗೇರುಕಟ್ಟೆ ಹಾಗು ಬೆಳ್ತಂಗಡಿ ಸೇರಿದಂತೆ ಹಲವೆಡೆ ಭಾನುವಾರ ಸಂಜೆ ಗುಡುಗು ಸಹಿತ ಮಳೆ ಸುರಿದಿದೆ.

ಕೆಲವು ಕಡೆಗಳಲ್ಲಿ ಗಾಳಿ ಜೊತೆಗೆ ಸಿಡಿಲಬ್ಬರ ಜೋರಾಗಿತ್ತು. ಲಾಯಿಲ ಗ್ರಾಮದ ರಾಗಿಬೆಟ್ಟು ಎಂಬಲ್ಲಿ ವಿದ್ಯುತ್ ಟ್ರಾನ್ಸ್​​ಫಾರ್ಮರ್​ನಿಂದ ಸಿಡಿದ ಕಿಡಿಯಿಂದ ಗುಡ್ಡವೊಂದಕ್ಕೆ ಬೆಂಕಿ ಬಿದ್ದಿದೆ.

ಕೂಡಲೇ ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ: ಒಂದೇ ದಿನ 10,250 ಮಂದಿಗೆ ಸೋಂಕು ದೃಢ!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.