ಮಂಗಳೂರು: ನಗರದ ಹಂಪನಕಟ್ಟೆ ಮಿಲಾಗ್ರಿಸ್ನಲ್ಲಿರುವ ಎಂಸಿಸಿ ಬ್ಯಾಂಕ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಎಂಸಿಸಿ ಬ್ಯಾಂಕ್ನ ಕೆಳ ಅಂತಸ್ತಿನಲ್ಲಿ ಮಧ್ಯಾಹ್ನದ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.
ಕೆಳ ಅಂತಸ್ತಿನಲ್ಲಿದ್ದ ಸರ್ವರ್ ರೂಂನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿದ್ದು, ಬ್ಯಾಂಕಿನ ಕಟ್ಟಡ ತುಂಬೆಲ್ಲ ಹೊಗೆ ಆವರಿಸಿತ್ತು. ಪಾಂಡೇಶ್ವರದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಲ್ಲದೇ ಹೊಗೆಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಣೆ ಮಾಡಿದ್ದಾರೆ.
ಅಗ್ನಿ ಅವಘಡದಿಂದ ಬ್ಯಾಂಕ್ನ ಸರ್ವರ್ ರೂಂ ಹಾನಿಗೀಡಾಗಿದೆ. ಸನಿಹದಲ್ಲಿಯೆ ಇದ್ದ ಸ್ಟ್ರಾಂಗ್ ರೂಂ ಸೇರಿದಂತೆ ಬ್ಯಾಂಕ್ನ ಇತರೆಡೆಗೆ ಹಾನಿ ಸಂಭವಿಸದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: ಗದಗದಲ್ಲಿ ಬೆಡ್ ಸಿಗದೇ ಕೊರೊನಾ ರೋಗಿಗಳ ಪರದಾಟ!