ETV Bharat / state

ಮಂಗಳೂರಿನ ಪಾಂಡೇಶ್ವರದಲ್ಲಿ ಅಗ್ನಿ ಅವಘಡ : ಏಳು ಮನೆಗಳು ಭಸ್ಮ

ಮಂಗಳೂರಿನಲ್ಲಿ ಅಗ್ನಿ ಅವಘಡ ಸಂಭವಿಸಿ ಏಳು ಮನೆಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ತಹಸೀಲ್ದಾರ್​ ಭೇಟಿ ನೀಡಿದ್ದಾರೆ.

ಮಂಗಳೂರಿನ ಪಾಂಡೇಶ್ವರದಲ್ಲಿ ಅಗ್ನಿ ಅವಘಡ
author img

By

Published : Mar 23, 2019, 11:52 PM IST

ಮಂಗಳೂರು : ಪಾಂಡೇಶ್ವರದಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು 7 ಮನೆಗಳು ಹಾನಿಗೀಡಾಗಿವೆ.

ಪಾಂಡೇಶ್ವರದಲ್ಲಿರುವ ಧೂಮಪ್ಪ ಕಾಂಪೌಂಡ್​ನಲ್ಲಿ ಈ ಘಟನೆ ನಡೆದಿದೆ. ದೂಮಪ್ಪ ಕಾಂಪೌಂಡ್​ ಅಕ್ಕ ಪಕ್ಕದಲ್ಲಿರುವ 9 ಮನೆಗಳಿಗೆ ಬೆಂಕಿ ತಗುಲಿದ್ದು ಇದರಲ್ಲಿ ಏಳು ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಹಾನಿಗೊಳಗಾಗಿವೆ.

ಬೆಂಕಿ ಅನಾಹುತಕ್ಕೆ ತುತ್ತಾದ 7 ಮನೆಗಳಲ್ಲಿ ಒಂದು ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ತಗುಲಿದೆ. ಕೂಡಲೇ ಮನೆಯವರು ಹೊರಗೋಡಿ ಬಂದ ಪರಿಣಾಮ ಯಾವುದೇ ಪ್ರಾಣಾಪಾಯವಾಗಿಲ್ಲ. ಅಗ್ನಿ ಅವಘಡ ನಡೆದ 200 ಮೀಟರ್ ದೂರದಲ್ಲಿ ಅಗ್ನಿಶಾಮಕ ಕಚೇರಿ ಇರುವುದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಪಾಂಡೇಶ್ವರದಲ್ಲಿ ಅಗ್ನಿ ಅವಘಡ

ಘಟನಾ ಸ್ಥಳಕ್ಕೆ ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್, ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ಗುರುಪ್ರಸಾದ್, ಏಳು ಮನೆಗಳಲ್ಲಿ ತಕ್ಷಣಕ್ಕೆ ಮೂರು ಕುಟುಂಬಗಳಿಗೆ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದವರು ತಮ್ಮ ಸಂಬಂಧಿಕರ ಮನೆಯಲ್ಲಿ ಇರಲಿದ್ದಾರೆ. ಮನೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Intro:ಮಂಗಳೂರು; ಮಂಗಳೂರಿನ ಪಾಂಡೇಶ್ವರದಲ್ಲಿ 7 ಮನೆಗಳು ಬೆಂಕಿಯ ರುದ್ರನರ್ತನಕ್ಕೆ ಹಾನಿಯಾಗಿದೆ.

Body:ಮಂಗಳೂರಿನ ಪಾಂಡೇಶ್ವರ ದಲ್ಲಿರುವ ಧೂಮಪ್ಪ ಕಂಪೌಂಡ್ ನಲ್ಲಿ ಈ ಘಟನೆ ನಡೆದಿದೆ. ದೂಮಪ್ಪ ಕಾಂಪೌಂಡು ಬಳಿ ಇರುವ ಅಕ್ಕ ಪಕ್ಕದಲ್ಲಿರುವ 9 ಮನೆಗಳಿಗೆ ಬೆಂಕಿ ತಗುಲಿದ್ದು ಇದರಲ್ಲಿ ಏಳು ಮನೆಗಳು ಬೆಂಕಿಯ ಕೆನ್ನಾಲಗೆಗೆ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಅನಾಹುತಕ್ಕೆ ತುತ್ತಾದ 7 ಮನೆಗಳಲ್ಲಿ ಒಂದು ಮನೆಯಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್ ಬೆಂಕಿಯ ಕೆನ್ನಾಲಿಗೆ ಆಗಿ ಪರಿವರ್ತನೆಯಾಗಿ ಮನೆಗಳನ್ನು ಸುಟ್ಟು ಹಾಕಿದೆ. ಬೆಂಕಿಯನ್ನು ಕಂಡ ಮನೆಯವರು ಮನೆಯಿಂದ ಹೊರಗೋಡಿ ಬಂದ ಪರಿಣಾಮ ಯಾರಿಗೂ ಪ್ರಾಣಾಪಾಯವಾಗಿಲ್ಲ. ಅಗ್ನಿ ಅವಘಡ ನಡೆದ 200 ಮೀಟರ್ ದೂರದಲ್ಲಿ ಅಗ್ನಿಶಾಮಕ ದಳ ಇರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯು ಇನ್ನಷ್ಟು ಹರಡುವುದನ್ನು ತಡೆದರು. ಘಟನಾ ಸ್ಥಳಕ್ಕೆ ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ಗುರುಪ್ರಸಾದ್ ಅವರು ಏಳು ಮನೆಗಳಲ್ಲಿ ತಕ್ಷಣಕ್ಕೆ ಮೂರು ಕುಟುಂಬಗಳಿಗೆ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಳಿದವರು ತಮ್ಮ ಸಂಬಂಧಿಕರ ಮನೆಯಲ್ಲಿ ಇರಲಿದ್ದಾರೆ ಎ ತಿಳಿಸಿದ್ದಾರೆ. ಮನೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರ ನೀಡಲಾಗುವುದು ಎಂದರು

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.