ETV Bharat / state

ಸಾಲದ ಆಮಿಷವೊಡ್ಡಿ 3 ತಿಂಗಳ ಇಎಂಐ ಕಟ್ಟಿಸಿಕೊಂಡು ವಂಚನೆ: ದೆಹಲಿಯಲ್ಲಿ ಆರೋಪಿ ಸೆರೆ - mangalore

ಶೇ 5%ಬಡ್ಡಿಗೆ ಸಾಲ ನೀಡುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಲಾಗಿದ್ದು, ಒಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಂಗಳೂರು ಪೋಲಿಸರೊಂದಿಗೆ ವಶಪಡಿಸಿಕೊಂಡ ವಸ್ತುಗಳು
author img

By

Published : Jul 5, 2019, 3:17 PM IST

ಮಂಗಳೂರು: ಶೇ 5%ಬಡ್ಡಿಗೆ ಸಾಲ ನೀಡುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಲಾಗಿದ್ದು, ಒಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನ ಒಬ್ಬ ವ್ಯಕ್ತಿಗೆ 5%ರಲ್ಲಿ ಬಡ್ಡಿ ನೀಡುವ ಆಮಿಷವೊಡ್ಡಿ ಕರೆ ಬಂದಿತ್ತು. ಅದನ್ನು ನಂಬಿದ ಆ ವ್ಯಕ್ತಿ ಸಾಲ ಪಡೆಯಲು ಮುಂದಾದರು. ಆಗ ಆಮಿಷವೊಡ್ಡಿದವರು ಮೂರು ತಿಂಗಳ ಇಎಂಐ ಮೊದಲೇ ನೀಡುವಂತೆ ಸೂಚಿಸಿದ್ದರು. ಅದರಂತೆ ಆ ವ್ಯಕ್ತಿ 1,70,000 ಹಣವನ್ನು ಅವರಿಗೆ ಕಳುಹಿಸಿದ್ದರು. ಆದರೆ ಆ ಬಳಿಕ ಅವರು ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಈ ಬಗ್ಗೆ ಬಂದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ದೆಹಲಿಯಲ್ಲಿ ಕುಳಿತು ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದ್ದು ದೆಹಲಿ ಪೊಲೀಸರ ಸಹಕಾರ ಪಡೆದು ಆರೋಪಿಯನ್ನು ಬಂಧಿಸಿಲಾಗಿದೆ ಎಂದರು.

ದೆಹಲಿಯ ಜನಕ್ ಪುರಿಯಲ್ಲಿ ಕಚೇರಿ ಹೊಂದಿದ್ದ ಯೂಸುಫ್ ಖಾನ್ (30) ಬಂಧಿತ ಆರೋಪಿ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿತರರಾದ ನೌಶದ್ ಮತ್ತು ಪ್ರಭಾಕರ್ ಎಂಬ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 31 ಮೊಬೈಲ್, ಎರಡು ಲ್ಯಾಪ್ ಟಾಪ್, 70 ಸಾವಿರ ನಗದು ಮತ್ತು ಮೊಬೈಲ್ ಸಂಖ್ಯೆ ದಾಖಲಿಸಿರುವ ಹಲವು ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ತಂಡ ಕರ್ನಾಟಕದ 60 ಕ್ಕೂ ಅಧಿಕ ಮಂದಿಗೆ ಈ ರೀತಿ ವಂಚನೆ ಮಾಡಿರುವುದು ತಿಳಿದುಬಂದಿದೆ. ಆರೋಪಿಗಳು ಕಳೆದ ಆರು ತಿಂಗಳಿನಿಂದ ಈ ಕೃತ್ಯ ನಡೆಸುತ್ತಿದ್ದು ಸುಮಾರು 400 ಮಂದಿಗೆ ಕರೆ ಮಾಡಿ ಆಮಿಷವೊಡ್ಡಿದ್ದರು. ಇದರಲ್ಲಿ 60 ರಷ್ಟು ಮಂದಿ ಮೋಸ ಹೋಗಿದ್ದಾರೆ. ಇದರ ಬೆನ್ನಲ್ಲೇ ತನಿಖೆ ಮುಂದವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಈ ಜಾಲ ಪತ್ತೆ ಹಚ್ಚಿದ ಶ್ಯಾಮ್ ಸುಂದರ್ ಅವರ ತಂಡವನ್ನು ಅಭಿನಂದಿಸಿದರು.

Intro:ಮಂಗಳೂರು: ಐದು ಶೇಕಡ ಬಡ್ಡಿಯಲ್ಲಿ ಸಾಲ ನೀಡುವ ಆಮೀಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಜಾಲ ಪತ್ತೆ ಹಚ್ಚಲಾಗಿದ್ದು ಓರ್ವನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನ ಓರ್ವ ವ್ಯಕ್ತಿಗೆ ಐದು ಶೇಕಡ ಬಡ್ಡಿ ನೀಡುವ ಆಮೀಷವೊಡ್ಡಿ ಕರೆ ಬಂದಿತ್ತು. ಅದನ್ನು ನಂಬಿದ ಆ ವ್ಯಕ್ತಿ ಸಾಲ ಪಡೆಯಲು ಮುಂದಾದರು. ಆಗ ಆಮೀಷವೊಡ್ಡಿದವರು ಮೂರು ತಿಂಗಳ ಇಎಂಐ ಮೊದಲೇ ನೀಡುವಂತೆ ಸೂಚಿಸಿದ್ದರು. ಅದರಂತೆ ಆ ವ್ಯಕ್ತಿ 170000 ಹಣವನ್ನು ಅವರಿಗೆ ಕಳುಹಿಸಿದ್ದರು. ಆದರೆ ಆ ಬಳಿಕ ಅವರು ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಈ ಬಗ್ಗೆ ಬಂದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ದೆಹಲಿಯಲ್ಲಿ ಕುಳಿತು ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದ್ದು ದೆಹಲಿ ಪೊಲೀಸರ ಸಹಕಾರ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ದೆಹಲಿಯ ಜನಕ್ ಪುರಿಯಲ್ಲಿ ಕಚೇರಿ ಹೊಂದಿದ್ದ ಯೂಸುಫ್ ಖಾನ್ (30) ಬಂಧಿತ ಆರೋಪಿ.ಈ ಕೃತ್ಯದಲ್ಲಿ ಭಾಗಿಯಾಗಿದ್ದ ನೌಶದ್ ಮತ್ತು ಪ್ರಭಾಕರ್ ಎಂಬ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 31 ಮೊಬೈಲ್, ಎರಡು ಲ್ಯಾಪ್ ಟಾಪ್, 70 ಸಾವಿರ ನಗದು ಮತ್ತು ಮೊಬೈಲ್ ಸಂಖ್ಯೆ ದಾಖಲಿಸಿರುವ ಹಲವು ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ತಂಡ ಕರ್ನಾಟಕದ 60 ಕ್ಕೂ ಅಧಿಕ ಮಂದಿಗೆ ಈ ರೀತಿ ವಂಚನೆ ಮಾಡಿರುವುದು ತಿಳಿದುಬಂದಿದೆ.
ಆರೋಪಿಗಳು ಕಳೆದ ಆರು ತಿಂಗಳಿನಿಂದ ಈ ಕೃತ್ಯ ನಡೆಸುತ್ತಿದ್ದ ಸುಮಾರು 400 ಮಂದಿಗೆ ಕರೆ ಮಾಡಿ ಆಮೀಷವೊಡ್ಡಿದ್ದರು. ಇದರಲ್ಲಿ 60 ರಷ್ಟು ಮಂದಿ ಮೋಸ ಹೋಗಿದ್ದಾರೆ. ತನಿಖೆ ಮುಂದವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಈ ಜಾಲ ಪತ್ತೆ ಹಚ್ಚಿದ ಶ್ಯಾಮ್ ಸುಂದರ್ ತಂಡವನ್ನು ಅಭಿನಂದಿಸಿದರು.

ಬೈಟ್- ಸಂದೀಪ್ ಪಾಟೀಲ್, ಮಂಗಳೂರು ‌ನಗರ ಪೊಲೀಸ್ ಕಮೀಷನರ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.