ETV Bharat / state

ಕೋಟಾ ಶ್ರೀನಿವಾಸ್ ಪೂಜಾರಿಗೆ ಕೋವಿಡ್​​​​: ಕಟೀಲ್ ಮನೆಯ ನೇಮೋತ್ಸವದಲ್ಲಿ ಪಾಲ್ಗೊಂಡವರಿಗೆ ಆತಂಕ - ಕಟೀಲ್ ಮನೆಯ ನೇಮೋತ್ಸವದಲ್ಲಿ ಪಾಲ್ಗೊಂಡವರಿಗೆ ಆತಂಕ

ಕೋವಿಡ್ ಪಾಟಿಸಿವ್ ಹಿನ್ನೆಲೆ ತನ್ನೊಂದಿಗೆ ಸಂಪರ್ಕ ಹೊಂದಿದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಜೊತೆಯಾಗಿ ಕಾಣಿಸಿಕೊಂಡಿದ್ದರು.

Kota Shrinivas Poojari tested Covid positive
ಕೋಟ ಶ್ರೀನಿವಾಸ್ ಪೂಜಾರಿಗೆ ಕೋವಿಡ್
author img

By

Published : Apr 10, 2021, 10:01 PM IST

ಸುಳ್ಯ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಮೂಲ ಮನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಸಂಪರ್ಕ ಹೊಂದಿರುವವರಿಗೆ ಆತಂಕ ಶುರುವಾಗಿದೆ.

ಏಪ್ರಿಲ್ 8 ಮತ್ತು 9ರಂದು ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯ ಸವಣೂರು ಸಮೀಪದ ಕುಂಜಾಡಿಯಲ್ಲಿ ನಡೆದಿದ್ದ ಧರ್ಮನೇಮಕ್ಕೆಂದು ಹಲವರು ಗಣ್ಯರು ಆಗಮಿಸಿದ್ದರು. ಸಚಿವರಾದ ಕೆ.ಎಸ್.ಈಶ್ವರಪ್ಪ, ಮುರುಗೇಶ್ ನಿರಾಣಿ, ಪ್ರಭು ಚೌಹಾಣ್, ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಸಂಸದರು, ಶಾಸಕರು, ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಈ ಎಲ್ಲರ ಜೊತೆಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾಣಿಸಿಕೊಂಡಿದ್ದರು.

  • #COVID19 Positive ಕಾರಣಕ್ಕೆ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಅನಿವಾರ್ಯವಾದರೆ ದೂರವಾಣಿ ಮೂಲಕ ಸಂಪರ್ಕಿಸಬಹುದು. ಒಂದೆರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು Covid-19 ಟೆಸ್ಟ್ ಮಾಡಿಸಿಕೊಳ್ಳಿ.@BJP4Karnataka @BjpMangaluru @BJP4Udupi

    — Kota Shrinivas Poojari (@KotasBJP) April 10, 2021 " class="align-text-top noRightClick twitterSection" data=" ">

ಏ. 8ರಂದು ಸಂಜೆ ಮಂಗಳೂರಿನಲ್ಲಿ ಸಚಿವ ಈಶ್ವರಪ್ಪ ಕರೆದಿದ್ದ ಸುದ್ದಿಗೋಷ್ಠಿಯಲ್ಲೂ ಸಚಿವ ಕೋಟಾ ಮತ್ತು ಇತರ ಮುಖಂಡರು ಜೊತೆಯಾಗಿ ಕುಳಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಸಚಿವರು ಬಂದ ದಿನದಲ್ಲಿ ಧರ್ಮನೇಮೋತ್ಸವದಲ್ಲೂ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಓದಿ : ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಕೊರೊನಾ ಪಾಸಿಟಿವ್

ಧರ್ಮನೇಮೊತ್ಸವಕ್ಕೆ ತೆರಳಿದ್ದ ಗಣ್ಯರು, ಸಾರ್ವಜನಿಕರಲ್ಲಿ ಹೆಚ್ಚಿನವರು ಕೋವಿಡ್ ನಿಮಯಗಳನ್ನು ಪಾಲಿಸಿರಲಿಲ್ಲ ಎನ್ನುವ ಆರೋಪವೂ ಇದೆ. ಮುಖಕ್ಕೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗಣ್ಯರು ಜೊತೆ ಜೊತೆಯಾಗಿ ಕುಳಿತುಕೊಂಡಿರುವ, ಹಾರ ಹಾಕಿಸಿಕೊಳ್ಳುವ, ಪರಸ್ಪರ ಆಲಿಂಗನ ಮಾಡುವ ಫೋಟೋಗಳು, ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ ಸೇರಿದಂತೆ ಪತ್ರಿಕೆಗಳಲ್ಲೂ ಬಂದಿದ್ದವು. ಇದೀಗ ಧರ್ಮನೇಮೋತ್ಸವದ ಮರುದಿನವೇ ಇಡೀ ದ.ಕ ಜಿಲ್ಲೆಯ ಉಸ್ತುವಾರಿ ಹೊಂದಿರುವ ಸಚಿವರಿಗೇ ಕೋವಿಡ್ ಸೋಂಕು ಕಂಡುಬಂದಿದೆ.

ತನ್ನ ಜೊತೆಗಿದ್ದವರೆಲ್ಲಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸ್ವತಃ ಸಚಿವರು ಸಲಹೆ ನೀಡಿದ್ದಾರೆ. ಇದರಿಂದಾಗಿ ಧರ್ಮನೇಮೋತ್ಸವದಲ್ಲಿ ಪಾಲ್ಗೊಂಡವರಿಗೆ ಆತಂಕ ಎದುರಾಗಿದೆ. ಕಳೆದ ವಾರ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಕೋವಿಡ್ ಮಾರ್ಗಸೂಚಿ ಹೊರಡಿಸಿ, ಹೊರಾಂಗಣದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ 500ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ. ಒಳಾಂಗಣದ ಸಭೆ, ಸಮಾರಂಭಗಳಿಗೆ 200 ಜನ ಮಾತ್ರ ಪಾಲ್ಗೊಳ್ಳಬಹುದು ಎಂದು ಆದೇಶಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.