ಮಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫೀ ಡೇ ಮಾಲೀಕ ವಿ. ಜಿ. ಸಿದ್ಧಾರ್ಥ್ ದಿಢೀರ್ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಉಲ್ಲಾಳ ಸಮೀಪದ ನೇತ್ರಾವತಿ ನದಿ ಬಳಿ ಕಾರಿನಲ್ಲಿ ತೆರಳಿದ್ದ ಸಿದ್ಧಾರ್ಥ್ ಕಳೆದ ರಾತ್ರಿಯಿಂದ ದಿಢೀರ್ ಕಾಣೆಯಾಗಿದ್ದಾರೆ.
ಸಿದ್ಧಾರ್ಥ್ ಕಾರಿನಿಂದ ಇಳಿದು ಹೋದ ಬಳಿಕ ಅವರು ಕಾಣದೇ ಇದ್ದಾಗ ಚಾಲಕ ಕರೆ ಮಾಡಿದರೂ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ಸಿದ್ಧಾರ್ಥ್ ಕೆಫೆ ಕಾಫೀ ಡೇ ಮಾಲೀಕರಾಗಿದ್ದು, ಅವರ ನಾಪತ್ತೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಿದ್ಧಾರ್ಥ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸಿದ್ಧಾರ್ಥ್ ಅವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಈಜು ತಜ್ಞರು ಸಹ ಹುಡುಕಾಟ ನಡೆಸಿದ್ದಾರೆ. ಸಿದ್ಧಾರ್ಥ್ ಅವರ ನಾಪತ್ತೆಗೆ ಕಾರಣ ತಿಳಿದುಬಂದಿಲ್ಲ.