ಮಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿರುವ ಕಿಡಿಗೇಡಿಗಳು, ಅದರಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದಾರೆ. ಈ ಕುರಿತು ಎಚ್ಚರದಿಂದ ಇರುವಂತೆ ಸ್ವತಃ ಪೊಲೀಸ್ ಆಯುಕ್ತ ಶಶಿಕುಮಾರ್ ತಮ್ಮ ಅಧಿಕೃತ ಫೇಸ್ಬುಕ್ ಖಾತೆ ಮೂಲಕ ಮನವಿ ಮಾಡಿದ್ಧಾರೆ.
ನಾವು ನಮ್ಮ ಅಧಿಕೃತ ಫೇಸ್ಬುಕ್ ಖಾತೆಗೆ ಅಪ್ಲೋಡ್ ಮಾಡಿರುವ ಫೋಟೋ ಮತ್ತು ವಿವರಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆಯಲಾಗಿದೆ. ಅದರಿಂದ ಹಲವು ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕೂಡ ಹೋಗಿದೆ. ಆದ್ದರಿಂದ ಎಲ್ಲರೂ ಈ ಬಗ್ಗೆ ಎಚ್ಚರದಿಂದ ಇರಿ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಇದನ್ನೂ ಓದಿ : ವಾರಾಂತ್ಯ ಕರ್ಫ್ಯೂ.. 300ಕ್ಕೂ ಅಧಿಕ ಮಂದಿಗೆ ಅನ್ನ ನೀಡಿ ಮಾನವೀಯತೆ ಮೆರೆದ ಕುಡ್ಲದ ಹೋಟೆಲ್
ನಕಲಿ ಖಾತೆ ಮೂಲಕ ಹಣ ಕಳಿಸಲು ಹೇಳಬಹುದು, ಆ ಬಗ್ಗೆ ಎಲ್ಲರೂ ಜಾಗರೂಕರಾಗಿ ಎಂದು ಸೂಚಿಸಿದ್ದಾರೆ. ಪೊಲೀಸ್ ಆಯುಕ್ತರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.