ETV Bharat / state

ರಾಹುಲ್ ಗಾಂಧಿ ಪಿಎ ಹೆಸರಿನಲ್ಲಿ ಯುಟಿ ಖಾದರ್​ಗೆ ನಕಲಿ ಕರೆ: ದೂರು ದಾಖಲು

ರಾಹುಲ್​ ಗಾಂಧಿ ಪಿಎ ಹೆಸರಿನಲ್ಲಿ ನಕಲಿ ಕರೆ- ಸೈಬರ್​ ಕ್ರೈಮ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು- ಕ್ರಮಕ್ಕೆ ಖಾದರ್​ ಮನವಿ

fake-call-to-ut-khader-in-the-name-of-rahul-gandhi-pa
ರಾಹುಲ್ ಗಾಂಧಿ ಪಿಎ ಹೆಸರಿನಲ್ಲಿ ಯುಟಿ ಖಾದರ್​ಗೆ ನಕಲಿ ಕರೆ: ದೂರು ದಾಖಲು
author img

By

Published : Jan 2, 2023, 7:39 PM IST

ಮಂಗಳೂರು: ರಾಹುಲ್ ಗಾಂಧಿ ಪಿಎ ಹೆಸರಿನಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್​ ಅವರಿಗೆ ಇಂದು ನಕಲಿ ಕರೆ ಬಂದಿದೆ. ಈ ಬಗ್ಗೆ ಯು ಟಿ ಖಾದರ್ ಅವರು ತನಿಖೆ ನಡೆಸುವಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ.

ಯು ಟಿ ಖಾದರ್ ಅವರ ಮೊಬೈಲ್ ಸಂಖ್ಯೆಗೆ ಸೋಮವಾರ ಮಧ್ಯಾಹ್ನ 1.33 ರ ಸಮಯದಲ್ಲಿ ನಕಲಿ ಕರೆ ಬಂದಿತ್ತು. ಖಾದರ್​ ಅವರು ಸಭೆಯೊಂದರಲ್ಲಿ ಭಾಗವಹಿಸಿದ್ದ ಕಾರಣ ಕರೆ ಸ್ವೀಕರಿಸಿರಲಿಲ್ಲ. ಸಭೆ ಮುಗಿಸಿ ಮೊಬೈಲ್‌ ನೋಡುವಾಗ ಇದೇ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. ‘‘ಶುಭ ಮಧ್ಯಾಹ್ನ ಈ ಕಡೆಯಿಂದ ಕನಿಷ್ಕ ಸಿಂಗ್, ಶ್ರೀ ರಾಹುಲ್ ಗಾಂಧಿ ಜೀ ಪಿಎ ನನಗೆ ಕರೆ ಮಾಡಿ’’ ಎಂದು ಸಂದೇಶದಲ್ಲಿ ಬರೆದಿತ್ತು.

ಟ್ರುಕಾಲರ್​ ಮೂಲಕ ಪರಿಶೀಲಿಸಿದಾಗ ಈ ಮೊಬೈಲ್ ಸಂಖ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಲಾಗಿರುವುದು ತಿಳಿದು ಬಂದಿದೆ. ಬಳಿಕ ಈ ಕುರಿತು ಮಾಹಿತಿ ಕಲೆ ಹಾಕಿದಾಗ ಇದು ನಕಲಿ ಹೆಸರಲ್ಲಿ ಬಂದ ಕರೆ ಎಂದು ಮನವರಿಕೆಯಾಗಿದೆ.

ಕೂಡಲೇ ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿ ಈ ಕುರಿತು ತನಿಖೆ ನಡೆಸಿ ಕರೆ ಮಾಡಿದವರು ಯಾರು ಮತ್ತು ಯಾಕಾಗಿ ಎಂದು ತಿಳಿಯುವುದರ ಜತೆಗೆ ಈ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಈ ಬಗ್ಗೆ ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿನ್ನ, ದುಡ್ಡಲ್ಲ.. 40 ಕೆಜಿ ತೂಕದ 24 ಕೋಳಿಗಳಿಗೆ ಕನ್ನ ಹಾಕಿದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.