ETV Bharat / state

ಎಂಎಸ್​​​ಐಎಲ್​​ ಮಳಿಗೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ - ಕಡಬ ಸುದ್ದಿ

ಪಂಜ ರಸ್ತೆಯಲ್ಲಿರುವ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆ ಮೇಲೆ ಅಬಕಾರಿ‌ ಇಲಾಖೆಯ ಅಧಿಕಾರಿಗಳು ಬುಧವಾರ ಮಧ್ಯಾಹ್ನ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

Excise officers attack MS IL shop in Kadapa
ಎಂಎಸ್​​​ಐಎಲ್​​ ಮಳಿಗೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ
author img

By

Published : May 13, 2020, 7:29 PM IST

ಕಡಬ: ಕಡಬದ ಪಂಜ ರಸ್ತೆಯಲ್ಲಿರುವ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆ ಮೇಲೆ ಅಬಕಾರಿ‌ ಇಲಾಖೆಯ ಅಧಿಕಾರಿಗಳು ಬುಧವಾರ ಮಧ್ಯಾಹ್ನ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಸಾರ್ವಜನಿಕರ ದೂರು ಆಧರಿಸಿ ಈ ದಾಳಿ ಮಾಡಲಾಗಿದೆ.

Excise officers attack MS IL shop in Kadapa
ಎಂಎಸ್​​​ಐಎಲ್​​ ಮಳಿಗೆ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ

ಎಂಎಸ್​​ಐಎಲ್​​ನಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಮದ್ಯ ಖರೀದಿ ಮಾಡಿದ್ದರು. ಈ ವೇಳೆ ಎಂಎಸ್ಐಲ್ ಸಿಬ್ಬಂದಿ ಅಧಿಕ ದರ ವಸೂಲಿ ಮಾಡಿದ್ದರು. ಈ ಬಗ್ಗೆ ಅಬಕಾರಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ನಂತರದಲ್ಲಿ ಮತ್ತೊಮ್ಮೆ ಮದ್ಯ ಖರೀದಿಸಿ ಬಿಲ್ ಕೇಳಿ ಪಡೆದಿದ್ದರು. ಈ ಸಮಯದಲ್ಲಿ ನಿಗದಿತ ದರ ನಮೂದಿಸಿದ ಬಿಲ್ ನೀಡಲಾಯಿತು. ಆದರೆ ಮೊದಲ ಖರೀದಿಯ ಬಿಲ್ ಕೇಳಿದಾಗ ವಸೂಲಿ ಮಾಡಿದ ಹಣಕ್ಕಿಂತ ಕಡಿಮೆ ಹಣದ ಬಿಲ್​​ ಕೊಡಲಾಗಿದೆ.

ಇನ್ನು ಮದ್ಯ ಖರೀದಿ ಮಾಡುವಾಗ ಬಿಲ್ ನೀಡಬೇಕೆಂಬ ನಿಯಮ ಇದ್ದರೂ ಬಿಲ್ ನೀಡಲಾಗುತ್ತಿಲ್ಲ. ಪತ್ರಕರ್ತರು ಈ ವ್ಯತ್ಯಾಸವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿದ್ದರು. ಕೂಡಲೇ ಅಬಕಾರಿ ನಿರೀಕ್ಷಕಿ ಸುಜಾತ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿವರಣೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.