ETV Bharat / state

11 ವರ್ಷಗಳಿಂದ ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಶ್ವಾನ ಸಾವು - ಈಟಿವಿ ಭಾರತ ಕನ್ನಡ

ಪೊಲೀಸ್​ ಇಲಾಖೆಯಲ್ಲಿ 11ವರ್ಷಗಳ ಕಾಲ ಸೇವೆ ಸಲ್ಲಿಸಿದ ಗೀತಾ ಎಂಬ ಶ್ವಾನ ಮೃತಪಟ್ಟಿದೆ. ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಗುವುದು.

Kn_Mng_01_P
ಪೊಲೀಸ್ ಶ್ವಾನ ಸಾವು
author img

By

Published : Sep 3, 2022, 10:29 PM IST

ಮಂಗಳೂರು: ಕಳೆದ 11 ವರ್ಷಗಳಿಂದ ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಶ್ವಾನ ಇಂದು ಮೃತಪಟ್ಟಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ, ಗೀತಾ ಎಂಬ ಶ್ವಾನ ಕರ್ತವ್ಯ ನಿರ್ವಹಿಸುತ್ತಿತ್ತು. 2011 ಮೇ 21 ಕ್ಕೆ ಜನಿಸಿದ ಈ ಶ್ವಾನಕ್ಕೆ 11 ವರ್ಷ 2ತಿಂಗಳು ವಯಸ್ಸಾಗಿದ್ದು, 2011 ಆಗಷ್ಟ್ 19ಕ್ಕೆ ಇಲಾಖೆಯ ಕರ್ತವ್ಯಕ್ಕೆ ಸೇರಿ 11 ವರ್ಷಗಳ ಕಾಲ ಇಲಾಖೆಗೆ ಸೇವೆ ಸಲ್ಲಿಸಿತ್ತು.

ಲ್ಯಾಬ್ರಡಾರ್ ರಿಟ್ರೇವರ್ ತಳಿಯ ಈ ಹೆಣ್ಣು ಶ್ವಾನಕ್ಕೆ ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ನೀಡಿ ಬಳಿಕ ಮಂಗಳೂರಿನ ಪೊಲೀಸ್ ಇಲಾಖೆಗೆ ಸೇರಿಸಲಾಗಿತ್ತು. ಹರೀಶ್ ಎಂಬ ಪೊಲೀಸ್ ಸಿಬ್ಬಂದಿ ಶ್ವಾನದ ಹ್ಯಾಂಡ್ಲರ್ ಆಗಿದ್ದರು. ಈ ಶ್ವಾನ ಮಂಗಳೂರು ನಗರಕ್ಕೆ ಅತೀ ಗಣ್ಯ ವ್ಯಕ್ತಿಗಳ ಆಗಮನದ ಸಂದರ್ಭದಲ್ಲಿ ಮತ್ತು ಇತರ ಬಂದೋಬಸ್ತ್ ಸಂದರ್ಭದಲ್ಲಿ ಸ್ಪೋಟಕ ಪತ್ತೆ ಕಾರ್ಯವನ್ನು ನಿರ್ವಹಿಸುತ್ತಿತ್ತು. ನಾಳೆ ಮಂಗಳೂರು ನಗರ ಪೊಲೀಸ್ ಇಲಾಖೆಯ ಸಿಎಆರ್ ಗ್ರೌಂಡ್​ನಲ್ಲಿ ಎಲ್ಲಾ ಸರ್ಕಾರಿ ಗೌರವಗಳೊಂದಿಗೆ ಶ್ವಾನದ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ನೂರಾರು ಅಪರಾಧ ಪ್ರಕರಣ ಭೇದಿಸಿದ್ದ 10 ವರ್ಷದ‌ ಶ್ವಾನ ಸಾವು.. 'ರೇವಾ'ಗೆ ಪೊಲೀಸ್​ ಗೌರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.