ಮಂಗಳೂರು: ನಗರ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಜುಲೈ ತಿಂಗಳೊಂದರಲ್ಲಿಯೇ ಮದ್ಯ ಸೇವನೆ ಮಾಡಿ, ವಾಹನ ಚಲಾಯಿಸಿದ ಆರೋಪದಡಿ 250 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದವರ ವಿರುದ್ಧವೂ 90 ಪ್ರಕರಣಗಳು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದವರ ವಿರುದ್ಧ 250 ಪ್ರಕರಣಗಳು ದಾಖಲಾಗಿವೆ.
ಅಲ್ಲದೆ, ರೆಡ್ ಸಿಗ್ನಲ್ ಜಂಪ್ ಮಾಡಿದವರ ವಿರುದ್ಧ 170 ಪ್ರಕರಣಗಳು ದಾಖಲಾಗಿದ್ದರೆ, ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚುವರಿ ಪ್ರಯಾಣಿಕರ ಸಾಗಿಸಿದ ಆರೋಪದಲ್ಲಿ 300 ಪ್ರಕರಣಗಳು ದಾಖಲಾಗಿವೆ.