ಮಂಗಳೂರು: ಅಕ್ರಮ ಗಾಂಜಾ ಮಾರಾಟದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಮಂಗಳೂರು ನಗರ ಪೊಲಿಸರು ಇಂದು ನಗರದ ತೊಕ್ಕೊಟ್ಟುವಿನಲ್ಲಿ ಗಾಂಜಾ ವ್ಯವಹಾರದಲ್ಲಿ ನಿರತರಾಗಿದ್ದ ಪ್ರಮುಖ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಭಾರಿ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ತಿಳಿಸಿದ್ರು.
ಕಾಸರಗೋಡು ಮಂಜೇಶ್ವರದ ಅಬೂಬಕ್ಕರ್ ಸಮದ್ (24), ಮುಹಮ್ಮದ್ ಅಶ್ರಫ್ (30), ಮುಹಮ್ಮದ್ ಅಫ್ರಿದ್ (22), ಮುಹಮ್ಮದ್ ಅರ್ಷದ್ (18) ಬಂಧಿತರು. ಬಂಧಿತರಿಂದ 2 ಲಕ್ಷ ರೂ ಮೌಲ್ಯದ 10 ಕೆಜಿ ಗಾಂಜಾ, ಒಂದು ಕಾರು, ಒಂದು ಸ್ಕೂಟರ್ ಮತ್ತು ಮೂರು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.