ETV Bharat / state

ಮಂಗಳೂರು, ಪುತ್ತೂರಿನಲ್ಲಿ ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ - ಪುತ್ತೂರಿನಲ್ಲಿ ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ನಗರದ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಇಂದು ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಕಾರ್ಯಕ್ರಮವನ್ನು ನಗರಸಭಾಧ್ಯಕ್ಷ ಕೆ.ಜೀವಂಧರ್ ಜೈನ್ ಉದ್ಘಾಟಿಸಿದರು.

ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ
ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ
author img

By

Published : Jan 10, 2022, 5:37 PM IST

ಮಂಗಳೂರು/ಪುತ್ತೂರು: ಮಾಸ್ಕ್​​ ಧರಿಸದೆ ಓಡಾಡುತ್ತಿದ್ದವರಿಗೆ ಮಾಸ್ಕ್ ನೀಡುವ ಮೂಲಕ ಸರಿಯಾಗಿ ಮಾಸ್ಕ್ ಧರಿಸಿ ಅಭಿಯಾನಕ್ಕೆ ಸಚಿವ ಅಂಗಾರ ಮತ್ತು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರೆಡ್ ಕ್ರಾಸ್ ಸಂಸ್ಥೆ ಜಂಟಿ ಸಹಯೋಗದಲ್ಲಿ ನಡೆದ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಮಾಸ್ಕನ್ನು ಸರಿಯಾಗಿ ಧರಿಸುವಂತೆ ಮತ್ತು ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ಜಿಲ್ಲಾಧಿಕಾರಿ ಮತ್ತು ಸಚಿವ ಅಂಗಾರ ಮಾಸ್ಕ್ ವಿತರಣೆ ಮಾಡಿದರು. ಬಳಿಕ ಮೀನು ಮಾರುಕಟ್ಟೆಯವರೆಗೆ ತೆರಳಿ ಮಾಸ್ಕ್ ವಿತರಣೆ ಮಾಡಲಾಯಿತು.

ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಂಗಾರ, ವೀಕೆಂಡ್ ಕರ್ಫ್ಯೂ, ಲಾಕ್ ಡೌನ್‌ಗಳಿಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸರಿಯಾಗಿ ಮಾಸ್ಕ್ ಧರಿಸುವ ಮೂಲಕ ಕೋವಿಡ್ ನಿಯಂತ್ರಿಸಿ ವೀಕೆಂಡ್ ಕರ್ಫ್ಯೂ ಮತ್ತು ಲಾಕ್ ಡೌನ್‌ಗಳನ್ನು ತಪ್ಪಿಸಬಹುದು ಎಂದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಕೊರೊನಾ ನಿಯಂತ್ರಣಕ್ಕಾಗಿ ಸರಕಾರವು ಸರಿಯಾಗಿ ಚಿಂತನೆ ನಡೆಸಿ ನಿಯಮಾವಳಿಗಳನ್ನು ರೂಪಿಸುತ್ತದೆ, ಅದನ್ನು ಪಾಲಿಸಬೇಕು‌. ಮಾಸ್ಕ್ ಧರಿಸುವುದು, ಸ್ಯಾನಿಟೈಸೇಶನ್ ಮಾಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು‌ ಸಹಕರಿಸಬೇಕು ಎಂದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಅಭಿಯಾನಕ್ಕೆ ಚಾಲನೆ :

ನಗರದ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಇಂದು ಬೂಸ್ಟರ್ ಡೋಸ್‌ಗೆ ಚಾಲನೆ ನೀಡಿದರು. ಬಳಿಕ‌ ಮಾತನಾಡಿದ ಅವರು, ಜನತೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವ ಹಿಂದಿನ ಉದ್ದೇಶವನ್ನೂ ಅರ್ಥ ಮಾಡಿಕೊಳ್ಳಬೇಕು. ಸರಕಾರಕ್ಕೆ ಜನರ ಆರೋಗ್ಯ ಹಾಗೂ ಪ್ರಾಣ ರಕ್ಷಣೆ ಮುಖ್ಯ ಗುರಿಯಾಗಿದೆ. ಒಂದು ವೇಳೆ ಮಿತಿಮೀರಿದ್ದಲ್ಲಿ ಯಾರು ಹೊಣೆಯಾಗುತ್ತಾರೆ. ಆದ್ದರಿಂದ ಸರಕಾರಕ್ಕೆ ಇಂತಹ ಕಠಿಣ ಕ್ರಮ ಕ್ರಮ ಕೈಗೊಳ್ಳುವ ಅನಿವಾರ್ಯತೆ ತಲೆದೋರುತ್ತದೆ. ಆದ್ದರಿಂದ ಇಂತಹ ನಿಯಮಗಳಿಗೆ ಜನರ ಸ್ಪಂದನೆಯ ಅಗತ್ಯವಿದೆ. ಆದ್ದರಿಂದ ಜನತೆಯ ಸ್ಪಂದನೆಯಿದ್ದಲ್ಲಿ ವಾರಾಂತ್ಯ, ನೈಟ್ ಕರ್ಫ್ಯೂಗಳನ್ನು ಹಿಂಪಡೆಯುವ ಸಂದರ್ಭ ಬರಬಹುದು ಎಂದು ಎಸ್.ಅಂಗಾರ ಹೇಳಿದರು.

ದ.ಕ.ಜಿಲ್ಲೆಯಲ್ಲಿ 52,529 ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು 15,924, ಹಿರಿಯ ನಾಗರಿಕರು 2,69,000 ಮಂದಿಯಿದ್ದು, ಇಂದು ದ.ಕ.ಜಿಲ್ಲೆಯಲ್ಲಿ 40 ಸಾವಿರ ಮಂದಿಗೆ ಬೂಸ್ಟರ್ ಡೋಸ್ ಹಾಕಲಾಗುತ್ತದೆ. ಎಲ್ಲಾ ಜಿಲ್ಲೆಯ ಸಾರ್ವಜನಿಕರು ಮುನ್ನೆಚ್ಚರಿಕಾ ಲಸಿಕೆ ಹಾಕಿಸಿಕೊಂಡು ಸಹಕಾರ ನೀಡಬೇಕೆಂದು ವಿನಂತಿಸಿದರು.

ಕಾಂಗ್ರೆಸ್ ಪಕ್ಷ ಮಾಡಿರುವ 'ಮೇಕೆದಾಟು ಪಾದಯಾತ್ರೆ'ಯನ್ನು ಜನರು ಗುರುತಿಸುತ್ತಾರೆ‌. ಆಡಳಿತ ಪಕ್ಷವಾಗಿ ನಮ್ಮ ಸರಕಾರ ಎಲ್ಲಾ ವಿಧದ ಕೋವಿಡ್ ನಿಯಮ ಪಾಲನೆಯನ್ನು ಮಾಡುತ್ತಿದೆ. ಆದ್ದರಿಂದ ಕಾಂಗ್ರೆಸ್ ನವರೂ ಇಂತಹ ನಿಯಮ ಪಾಲನೆ ಮಾಡಬೇಕಿತ್ತು. ಆದರೆ ಅವರು ಮಾಡಿಲ್ಲ. ಇದು ಸರಕಾರದ ಅಸಹಾಯಕತೆಯಲ್ಲ. ಆದರೆ ಸರಕಾರ ಈ ರೀತಿಯ ಎಲ್ಲಾ ಕಾರ್ಯಗಳಿಗೂ ಸ್ಪಂದಿಸಿ ಕೊಡುವಂತಹ ಕೆಲಸವನ್ನು ಮಾಡಿದೆ ಎಂದು ಎಸ್.ಅಂಗಾರ ಹೇಳಿದರು.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಕಾರ್ಯಕ್ರಮ :

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಕಾರ್ಯಕ್ರಮವನ್ನು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೊರೊನಾ ವಿರುದ್ಧದ ಯುದ್ಧದಲ್ಲಿ ಕೆಲಸ ಮಾಡುವ ವಾರಿಯರ್ಸ್‍ಗಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.

ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜೈನಾಭ, ಮೂರನೇ ಅಲೆಯನ್ನು ತಡೆಯಲು ಬೂಸ್ಟರ್ ಡೋಸ್‍ನ್ನು ನೀಡಲು ಮುಂದಾಗಿದೆ. ಎರಡು ಡೋಸ್ ಲಸಿಕೆ ಪಡೆದವರು ಎರಡನೇ ಡೋಸ್ ಪಡೆದ 9 ತಿಂಗಳ ಬಳಿಕ 60 ವರ್ಷ ವಯಸ್ಸು ಮೀರಿದರೆ ಬೂಸ್ಟರ್ ಡೋಸ್ ಪಡೆಯಬಹುದು. ಹೃದ್ರೋಗ, ಡಯಾಬಿಟಿಸ್, ರಕ್ತದೊತ್ತಡ ಕಾಯಿಲೆಯಿಂದ ಬಳಲುವವರು ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.