ETV Bharat / state

ಲೀಫ್ ಆರ್ಟ್ ಕಲಾವಿದನನ್ನು ಅಭಿನಂದಿಸಿದ ವೀರೇಂದ್ರ ಹೆಗ್ಗಡೆ - ಗಮನ ಸೆಳೆದ ಲೀಫ್ ಆರ್ಟ್ ಕಲಾವಿದ

ಕಾಗದದ ಮೂಲಕ ಚಿತ್ರ ಬಿಡಿಸುವುದನ್ನು ಆರಂಭಿಸಿದ ಅಕ್ಷಯ್‌ ಎಂ.ಕೋಟ್ಯಾನ್‌, ಕಳೆದ ನಾಲ್ಕು ತಿಂಗಳುಗಳಿಂದ ಎಲೆಗಳ ಮೇಲೆ ಚಿತ್ರ ಮೂಡಿಸಿ (ಲೀಫ್‌ ಆರ್ಟ್‌) ಯಶಸ್ವಿಯಾಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ವೀರೇಂದ್ರ ಹೆಗ್ಗಡೆ, ನಾರಾಯಣಗುರು ಸೇರಿದಂತೆ ಅನೇಕ ಗಣ್ಯರ ಚಿತ್ರಗಳನ್ನು ಎಲೆಗಳಲ್ಲಿ ಮೂಡಿಸಿದ್ದಾರೆ.

Dr.  Veerendra Hegde congratulates the Leaf Artist
ಗಮನ ಸೆಳೆದ ಲೀಫ್ ಆರ್ಟ್ ಕಲಾವಿದ
author img

By

Published : Jul 29, 2020, 11:56 AM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಎಲೆಗಳ ಮೇಲೆ ಚಿತ್ರ ಮೂಡಿಸುವ ಲೀಫ್‌ ಆರ್ಟ್‌ ಕಲೆಯಲ್ಲಿ ಮೂಡುಬಿದಿರೆಯ ಅಕ್ಷಯ್‌ ಎಂ.ಕೋಟ್ಯಾನ್‌ ಸಾಧನೆ ಮಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆಯವರ ಚಿತ್ರವನ್ನು ಅಶ್ವತ್ಥ ಎಲೆಗಳಲ್ಲಿ ಮೂಡಿಸುವ ಮೂಲಕ ಡಾ. ಹೆಗ್ಗಡೆಯವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೂಲತಃ ಮೂಡುಬಿದಿರೆಯ ಕಲ್ಲಬೆಟ್ಟುವಿನ ಮೋಹನ್‌ ಬಿ. ಪೂಜಾರಿ ಹಾಗೂ ಶೋಭಾ ಕೋಟ್ಯಾನ್‌ ದಂಪತಿಯ ಪುತ್ರ ಅಕ್ಷಯ್,‌ ಪ್ರಸ್ತುತ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ಎರಡನೇ ವರ್ಷದ ಬಿವಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಗದದ ಮೂಲಕ ಚಿತ್ರ ಬಿಡಿಸುವುದನ್ನು ಆರಂಭಿಸಿದ ಇವರು, ಕಳೆದ ನಾಲ್ಕು ತಿಂಗಳುಗಳಿಂದ ಎಲೆಗಳ ಮೇಲೆ ಚಿತ್ರ ಮೂಡಿಸಿ (ಲೀಫ್‌ ಆರ್ಟ್‌) ಯಶಸ್ವಿಯಾಗಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಡಾ.ಡಿ. ವೀರೇಂದ್ರ ಹೆಗ್ಗಡೆ, ನಾರಾಯಣಗುರು, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಸಹಿತ ಇನ್ನೂ ಅನೇಕ ನಾಯಕರು, ಯಕ್ಷಗಾನ ಕಲಾವಿದರು, ಚಿತ್ರ ನಟರು ಹಾಗೂ ದೇವರ ಚಿತ್ರಗಳನ್ನು ಎಲೆಗಳಲ್ಲಿ ಮೂಡಿಸಿದ್ದಾರೆ.

ಬಹುಮುಖ ಪ್ರತಿಭೆ: ಅಕ್ಷಯ್‌ ಅವರು ಬಹುಮುಖ ಪ್ರತಿಭೆಯಾಗಿದ್ದು, ಪೆನ್ಸಿಲ್‌ ಮೊನೆಗಳಲ್ಲಿ ಆಕೃತಿ, ಸೋಪಿನಲ್ಲಿ ಆಕೃತಿ, ಸ್ಪೀಡ್‌ ಪೇಂಟಿಂಗ್​​‌, ರಂಗೋಲಿ, ಮರಳಿನಲ್ಲಿ ಆಕೃತಿ, ಡಿಜಿಟಲ್‌ ಪೇಂಟಿಂಗ್​​‌ ಮೊದಲಾದ ಅನೇಕ ಬಗೆಗಳ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ.

ಡಾ. ಹೆಗ್ಗಡೆ ಪ್ರೋತ್ಸಾಹ ಪ್ರೇರಣೆ :

ಕಲೆಯಲ್ಲಿ ಬಾಲ್ಯದಿಂದಲೂ ಆಸಕ್ತಿ ಇತ್ತು. ಎಲೆ ಮೇಲೆ ಆಕೃತಿಗೂ ಮಾಡುವುದಕ್ಕೂ ಮುನ್ನ ಕಾಗದದಲ್ಲಿ ಅಭ್ಯಾಸ ನಡೆಸಿದ್ದೆ. ನಾಲ್ಕು ತಿಂಗಳ ಹಿಂದೆ ಎಲೆಗಳಲ್ಲಿ ಆಕೃತಿ ಬಿಡಿಸಲು ಮುಂದಾದೆ. ಡಾ. ಹೆಗ್ಗಡೆ ಅವರ ಪ್ರೋತ್ಸಾಹ, ಆಶೀರ್ವಾದ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡಿದೆ ಎಂದು ಅಕ್ಷಯ್‌ ಹೇಳಿದ್ದಾರೆ.

ಅತ್ಯಪೂರ್ವ ಕಲಾ ಸಾಧನೆ : ಅಕ್ಷಯ್‌ ಕೋಟ್ಯಾನ್‌ ಅವರು ಮೂಡಿಸಿದ ಎಲೆಗಳ ಮೇಲಿನ ಚಿತ್ರಕಲೆ ನನಗೆ ಮತ್ತು ಮನೆ ಮಂದಿಗೆ ಬಹಳಷ್ಟು ಇಷ್ಟವಾಗಿದೆ. ನನಗೆ ಅನೇಕರು ಅವರ ಕಲೆಯನ್ನು ಪ್ರಶಂಸಿಸಿ ಸಂದೇಶ ಕಳುಹಿಸಿದ್ದರು. ಅವರ ಅತ್ಯಪೂರ್ವ ಕಲಾ ಸಾಧನೆಗೆ ಪ್ರೋತ್ಸಾಹಿಸುತ್ತ, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಜೊತೆಗಿರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಶುಭ ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.