ಪುತ್ತೂರು: ಕಾರ್‌ಗೆ ಡಿಕ್ಕಿಯಾದ ನಾಯಿಯೊಂದು ವಾಹನದ ಬಂಪರ್ ಸೇರಿಕೊಂಡು ಸುಮಾರು 70 ಕಿ.ಮೀವರೆಗೆ ಪ್ರಯಾಣಿಸಿದೆ. ವಿಶೇಷ ಅಂದ್ರೆ ನಾಯಿಗೆ ಯಾವುದೇ ಗಾಯವಾಗಿಲ್ಲ. ಸಲೀಸಾಗಿ ಬಂಪರ್‌ನಿಂದ ಕೆಳಗಿಳಿದು ಹೋಗಿದೆ.
ವಿವರ: ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಸಾಗುತ್ತಿದ್ದರು. ಬಳ್ಪ ಎಂಬಲ್ಲಿ ನಾಯಿಯೊಂದು ಕಾರ್‌ಗೆ ಡಿಕ್ಕಿಯಾಗಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರ್ ನಿಲ್ಲಿಸಿ ಸುತ್ತಮುತ್ತ ಹುಡುಕಾಡಿದ್ದಾರೆ. ನಾಯಿ ಎಲ್ಲಿ ಹೋಯಿತು ಎನ್ನುವುದು ಅವರಿಗೆ ತಕ್ಷಣಕ್ಕೆ ಗೊತ್ತಾಗಲಿಲ್ಲ. ಅಲ್ಲಿಂದ ನೇರವಾಗಿ ಕಬಕದ ತನ್ನ ಮನೆಗೆ ಬಂದು ಕಾರ್ ಪರಿಶೀಲಿಸಿದಾಗ ಬಂಪರ್ನ ಗ್ರಿಲ್ ತುಂಡಾಗಿರುವುದು ಗೊತ್ತಾಗಿದೆ. ತುಂಡಾದ ಗ್ರಿಲ್ ಮಧ್ಯೆ ನಾಯಿ ಸಿಲುಕಿಕೊಂಡಿತ್ತು.
ನಾಯಿಯನ್ನು ಬಂಪರ್‌ನೊಳಗಿಂದ ತೆಗೆಯಲಾಗದೇ, ಗ್ಯಾರೇಜ್ಗೆ ತೆರಳಿದ್ದಾರೆ. ಅಲ್ಲಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಸುಮಾರು 70 ಕಿ.ಮೀವರೆಗೆ ಬಂಪರ್‌ನೊಳಗಿದ್ದ ನಾಯಿ ಆರಾಮವಾಗಿ ಹೊರಬಂದಿದೆ. ಘಟನೆ ಅಚ್ಚರಿ ಉಂಟುಮಾಡಿತು.
ಇದನ್ನೂ ಓದಿ: ಅಪಘಾತ ತಪ್ಪಿಸಲು ನಾಮಫಲಕ ಅಳವಡಿಕೆ: ಪಿಎಸ್ಐ,ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ