ETV Bharat / state

ಯಶಸ್ವಿಯಾಗಿ ನಡೆದ ಜಿಲ್ಲಾ ಹಾಗೂ ವಲಯ ಮಟ್ಟದ ಕುತೂಹಲ ಕಪ್ ಸೀಸನ್-6 ಕ್ರೀಡಾಕೂಟ - ಬೆಳ್ತಂಗಡಿ ಕ್ರೀಡಾ ಸುದ್ದಿ

ಕುತೂಹಲ ಕಪ್ ಸೀಸನ್-6 ಜಿಲ್ಲಾಮಟ್ಟದ ಸಿಂಗಲ್ ಗ್ರಿಪ್ ಮತ್ತು ವಲಯ ಮಟ್ಟದ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

Kutuhul Cup Season -6
ಜಿಲ್ಲಾ ಹಾಗೂ ವಲಯ ಮಟ್ಟದ ಕುತೂಹಲ ಕಪ್ ಸೀಸನ್ -6 ಕ್ರೀಡಾ ಕೂಟ
author img

By

Published : Oct 27, 2020, 10:54 AM IST

ಬೆಳ್ತಂಗಡಿ: ಕುತೂಹಲ ಕಪ್ ಸೀಸನ್ 6 ಜಿಲ್ಲಾಮಟ್ಟದ ಸಿಂಗಲ್ ಗ್ರಿಪ್ ಮತ್ತು ವಲಯ ಮಟ್ಟದ ಪಂದ್ಯಾವಳಿ ಉಜಿರೆ ಜನಾರ್ಧನ ದೇವಸ್ಥಾನದ ಸಮೀಪ ರಂಜನ್ ದೇವಾಡಿಗ ಎಂಬುವರ ಗದ್ದೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಲೂವಿಸ್ ರೋಡ್ರಿಗಸ್ ಅವರಿಗೆ ಕೂತೂಹಲ ಗೌರವ ಸಮ್ಮಾನ್ ಬಿರುದು ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ತಾ.ಪಂ, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನೀಲ್, ವಕೀಲರಾದ ವಸಂತ ಮರಕಡ ಭಾಗವಹಿಸಿ ಪ್ರಶಸ್ತಿ ವಿತರಿಸಿ ಪ್ರೇರಣಾತ್ಮಕ ಮಾರ್ಗದರ್ಶನ ನೀಡಿದರು.

ವಿಜಯ ದಶಮಿಯ ಪ್ರಯುಕ್ತ ಕ್ರೀಡಾಭಿಮಾನಿಗಳಿಗೆ ಸ್ವಾಮಿ ಕೊರಗಜ್ಜ ಅರ್ಥ್ ಮೂವರ್ಸ್ ಮಾಲಕ ಗಣೇಶ್ ಗೌಡ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿದ್ದರು. ಈ ಬಗ್ಗೆ ಕ್ರೀಡಾಕೂಟ ಆಯೋಜಕ ವಿಜಯ ಗೌಡ ಅತ್ತಾಜೆ ಪ್ರತಿಕ್ರಿಯಿಸಿ, ಕೆಲವು ವಾರಗಳಿಂದ ಈ ವಿವಿಧ ರೀತಿಯ ಕ್ರೀಡಾಕೂಟಗಳನ್ನು ವಿವಿಧ ಕಡೆಗಳಲ್ಲಿ ಆಯೋಜಿಸಿಕೊಂಡು ಬಂದಿದ್ದೇವೆ. ಈಗಾಗಲೇ ಕುತೂಹಲ ಕಪ್ ಸೀಸನ್- 6 ಮುಗಿದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ಮಾಡಿಕೊಡುತಿದ್ದೇವೆ ಎಂದರು.

ಈ ಕ್ರೀಡಾಕೂಟದಲ್ಲಿ ವಿವಿಧ ಭಾಗಗಳ ಸುಮಾರು 15 ತಂಡಗಳು ಭಾಗವಹಿಸಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.