ಬೆಳ್ತಂಗಡಿ: ಎಂಡೋಸಲ್ಫಾನ್ ಎಂಬ ಮಹಾಮಾರಿಗೆ ಅದೆಷ್ಟೋ ಕುಟುಂಬಗಳು ಈಗಲೂ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಈ ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಮೂಲಕ ಶಾಸಕ ಹರೀಶ್ ಪೂಂಜ ನೆರವಾಗಿದ್ದಾರೆ.
ಈಗಾಗಲೇ ಆರ್ಥಿಕವಾಗಿ ತುಂಬ ಕಷ್ಟದಲ್ಲಿ ದಿನದೂಡುವ ಸ್ಥಿತಿ ಅವರದ್ದು. ಅದರೆ ಕೊರೊನಾ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ತುಂಬ ಸಂಕಷ್ಟದಲ್ಲಿರುವುದನ್ನು ಮನಗಂಡ ಶಾಸಕರು ತಾಲೂಕಿನ ಪಟ್ರಮೆ, ಕೊಕ್ಕಡ, ಹತ್ಯಡ್ಕ, ನಿಡ್ಲೆ, ರೆಖ್ಯಾ ಗ್ರಾಮಗಳ ಸುಮಾರು 100 ಎಂಡೋಸಲ್ಫಾನ್ ಪೀಡಿತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿದರು.