ETV Bharat / state

ಸುರತ್ಕಲ್​ನಲ್ಲಿ ಮತ್ತೆ ಸಾವರ್ಕರ್ ಸರ್ಕಲ್ ಹೆಸರಿನ ಚರ್ಚೆ: ಸರಕಾರದ ನಿರ್ಧಾರದ ನಿರೀಕ್ಷೆಯಲ್ಲಿ ಪಾಲಿಕೆ - ವೀರ ಸಾವರ್ಕರ್

ಶಾಸಕ ಭರತ್​ ಶೆಟ್ಟಿ ಅವರು ಸುರತ್ಕಲ್​ ಸರ್ಕಲ್​ಗೆ ವೀರ ಸಾವರ್ಕರ್​ ಹೆಸರು ಇಡುವಂತೆ ಪ್ರಸ್ತಾಪಿಸಿದ್ದರು.

Suratkal
ಸುರತ್ಕಲ್​
author img

By ETV Bharat Karnataka Team

Published : Oct 4, 2023, 10:18 AM IST

Updated : Oct 4, 2023, 2:25 PM IST

ಸುರತ್ಕಲ್​ನಲ್ಲಿ ಮತ್ತೆ ಸಾವರ್ಕರ್ ಸರ್ಕಲ್ ಹೆಸರಿನ ಚರ್ಚೆ

ಮಂಗಳೂರು: ಕಳೆದ ಒಂದು ವರ್ಷದಿಂದೀಚೆಗೆ ಸುರತ್ಕಲ್ ಸರ್ಕಲ್​ಗೆ ವೀರ ಸಾವರ್ಕರ್ ಅವರ ಹೆಸರನ್ನು ಇಡುವ ಬಗ್ಗೆ ಉಂಟಾದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಮಂಗಳೂರು ಮಹಾನಗರ ಪಾಲಿಕೆಯಿಂದ ಸುರತ್ಕಲ್ ಸರ್ಕಲ್​ಗೆ ವೀರ ಸಾವರ್ಕರ್ ಹೆಸರನ್ನು ಇಡುವ ಪ್ರಸ್ತಾಪವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಸರಕಾರದ ನಿರ್ಧಾರವನ್ನು ನಿರೀಕ್ಷಿಸಲಾಗುತ್ತಿದೆ.

ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಸುರತ್ಕಲ್ ಸೂಕ್ಷ್ಮ ಪ್ರದೇಶ. ಇಲ್ಲಿ ಸಣ್ಣ ವಿಚಾರಗಳೇ ದೊಡ್ಡ ಘಟನೆಗಳಾಗಿ ಪರಿವರ್ತನೆಯಾಗುತ್ತದೆ. ಇಂತಹ ಸೂಕ್ಷ್ಮ ನಗರದಲ್ಲಿ ಕಳೆದ ಒಂದು ವರ್ಷದಿಂದೀಚೆಗೆ ವೀರ ಸಾವರ್ಕರ್ ಹೆಸರಿನಲ್ಲಿ ಸರ್ಕಲ್ ಮಾಡುವ ವಿಚಾರ ವಿವಾದ ಉಂಟು ಮಾಡಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಮೂರನೇ ಎರಡಕ್ಕೂ ಹೆಚ್ಚು ಬಹುಮತವಿರುವ ಬಿಜೆಪಿ ಆಡಳಿತದಲ್ಲಿ ಸುರತ್ಕಲ್​ನ ಸರ್ಕಲ್​ಗೆ ಸಾವರ್ಕರ್ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಸುರತ್ಕಲ್​ಗೆ ವೀರ ಸಾವರ್ಕರ್ ಹೆಸರನ್ನು ಇಡಲು ಪ್ರಸ್ತಾಪಿಸಿದವರು ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ.

ಶಾಸಕ ಭರತ್ ಶೆಟ್ಟಿ ಅವರ ಪ್ರಸ್ತಾಪವನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಸ್ತಾವಿಸಿ ಅನುಮೋದನೆ ಪಡೆಯಲಾಗಿತ್ತು. ಆ ಬಳಿಕ ಸ್ಥಾಯಿ ಸಮಿತಿಯಲ್ಲಿಯೂ ಇದನ್ನು ಚರ್ಚಿಸಿ ಅಂಗೀಕರಿಸಲಾಗಿದೆ. ಆ ಬಳಿಕ ಇದನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರದ ನಿರ್ಧಾರದ ಮೇಲೆ ಇದೀಗ ಸುರತ್ಕಲ್​ಗೆ ವೀರ ಸಾವರ್ಕರ್ ಸರ್ಕಲ್ ಹೆಸರನ್ನು ನಾಮಕರಣದ ವಿಚಾರ ನಿಂತಿದೆ.

ಈ ಬಗ್ಗೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು "ಸುರತ್ಕಲ್ ನಗರದ ಸರ್ಕಲ್​ಗೆ ವೀರ ಸಾವರ್ಕರ್ ಹೆಸರನ್ನು ಇಡುವಂತೆ ಶಾಸಕ ಭರತ್ ಶೆಟ್ಟಿ ಮನವಿ ಕೊಟ್ಟಿದ್ದಾರೆ. ಆ‌ ಮನವಿ ಪಾಲಿಕೆ ಸಭೆಯಲ್ಲಿಟ್ಟು ಆ ಬಳಿಕ ಪಟ್ಟಣ ಸುಧಾರಣಾ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿ ನಂತರ ಪಾಲಿಕೆ ಸಭೆಯಲ್ಲಿ ಅನುಮೋದನೆ ‌ನೀಡಲಾಗಿದೆ. ಸಾರ್ವಜನಿಕರ ಆಕ್ಷೇಪಕ್ಕೂ ವ್ಯವಸ್ಥೆ ಮಾಡಿದ್ದೆವು. ಕಾಂಗ್ರೆಸ್ ಮತ್ತು ಎಸ್​ಡಿಪಿಐನವರು ಈ ಪ್ರಸ್ತಾಪಕ್ಕೆ ವಿರೋಧಿಸಿದ್ದರು. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ ಕ್ರಾಂತಿಕಾರಿ ನಾಯಕ. ಹಾಗಾಗಿ ಬಿಜೆಪಿಯ 44 ಸದಸ್ಯರು ವೀರ ಸಾವರ್ಕರ್ ಹೆಸರನ್ನು ಇಡಬೇಕು ಎಂದು ಒಮ್ಮತದಿಂದ ಹೇಳಿದ್ದಾರೆ. ನಾವು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಇದನ್ನು ಯು ಡಿ ಇಲಾಖೆ ಒಪ್ಪಬಹುದು ಅಥವಾ ತಿರಸ್ಕರಿಸಲೂಬಹುದು ಎಂದು ಹೇಳಿದರು.

ಇದನ್ನೂ ಓದಿ : ಹುಬ್ಬಳ್ಳಿ: ಚೆನ್ನಮ್ಮ ಸರ್ಕಲ್ ಫ್ಲೈಓವರ್ ನಿರ್ಮಾಣ ಪ್ರಶ್ನಿಸಿ ಸಲ್ಲಿಸಿದ್ದ PIL ರದ್ದುಗೊಳಿಸಿದ ಹೈಕೋರ್ಟ್: ಕಾಮಗಾರಿಗಿಲ್ಲ ಆತಂಕ

Last Updated : Oct 4, 2023, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.