ETV Bharat / state

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಡಿಜಿಟಲೀಕರಣ

ಪೊಲೀಸ್‌, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್‌ಗಾಗಿ ಬೇರೆ ಬೇರೆ ನಂಬರ್‌ಗಳಿಗೆ ಕಾಲ್‌ ಮಾಡಬೇಕಿಲ್ಲ. ಈ ಮೂರಕ್ಕೂ 112 ಒಂದೇ ನಂಬರ್‌ ಜಾರಿಗೆ ಬಂದಿದೆ.

Police control room
ಪೊಲೀಸ್ ಕಂಟ್ರೋಲ್​ ರೂಮ್​
author img

By

Published : Dec 3, 2020, 7:22 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ‌ಪೊಲೀಸ್ ಇಲಾಖೆ ಡಿಜಿಟಲೀಕರಣ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಯಾವುದೇ ಘಟನೆಗಳಾದರೂ ಪೊಲೀಸರು ಅಲ್ಲಿಗೆ ಧಾವಿಸಿ ಸಮಸ್ಯೆ ಪರಿಹರಿಸುವ ವ್ಯವಸ್ಥೆ ಆರಂಭವಾಗಿದೆ.

ಪೊಲೀಸ್‌, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್‌ಗಾಗಿ ಬೇರೆ ಬೇರೆ ನಂಬರ್‌ಗಳಿಗೆ ಕಾಲ್‌ ಮಾಡಬೇಕಿಲ್ಲ. ಈ ಮೂರಕ್ಕೂ 112 ಒಂದೇ ನಂಬರ್‌ ಜಾರಿಗೆ ಬಂದಿದೆ. ಈ ಸಹಾಯವಾಣಿಗೆ ಕರೆ ಮಾಡುವ ಮೂಲಕ ಎಲ್ಲ ಸೇವೆಗಳನ್ನು ಪಡೆಯಬಹುದು. ಕರೆ ಮಾಡಿದರೆ ಅದು ಬೆಂಗಳೂರು ಕಂಟ್ರೋಲ್​ ರೂಮ್​ಗೆ ಹೋಗುತ್ತದೆ. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ವಿಚಾರವಾಗಿದ್ದರೆ ಕಂಪ್ಯೂಟರ್ ಮೂಲಕ ಮಂಗಳೂರಿಗೆ ಮಾಹಿತಿ ರವಾನಿಸಲಾಗುತ್ತದೆ. ಕರೆ ಬಂದ ಅರ್ಧ ಗಂಟೆಯೊಳಗೆ ಪೊಲೀಸ್ ವಾಹನ ಘಟನಾ ಸ್ಥಳಕ್ಕೆ ತೆರಳಲಿದೆ.

ದ.ಕ ಜಿಲ್ಲಾ ಎಸ್ ಪಿ ಲಕ್ಷ್ಮಿಪ್ರಸಾದ್

ಎಫ್​​ಐಆರ್​​, ರೌಡಿ ಟ್ರಾಕಿಂಗ್, ಫೈಲ್ಸ್, ಸಮನ್ಸ್, ವಾರೆಂಟ್ ಪೊಲೀಸ್ ಐಟಿಯಲ್ಲಿ (ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವ ಸಾಮರ್ಥ್ಯ ಹೊಂದಿದೆ) ದಾಖಲಾಗುತ್ತದೆ. ಇ-ಸಿಂಧುತ್ವ, ಸೇವಾ ಸಿಂಧು ಮೂಲಕ ಪೊಲೀಸ್ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಡಿಜಿಟಲ್ ಮೂಲಕವೇ ಸರ್ಟಿಫಿಕೇಟ್ ಸಹ ಸಿಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.