ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮಕ್ಕೆ ಭಕ್ತೆಯೊಬ್ಬರು ಶ್ರೀ ಕೃಷ್ಣನಿಗೆ 88 ಬಗೆಯ ಖಾದ್ಯ ಬಡಿಸಿದ್ದು, ಇದರ ಪೊಟೋವನ್ನು ಮಂಗಳೂರಿನ ವೈದ್ಯರೊಬ್ಬರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಹಂಚಿಕೊಂಡಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಆಗಿರುವ ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ 88 ಬಗೆಯ ಖಾದ್ಯಗಳ ಫೋಟೋವೊಂದನ್ನು ಎಕ್ಸ್ನಲ್ಲಿ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, ಅಲಂಕಾರಗೊಂಡ ದೇವರ ಮಂಟಪ, ಕೃಷ್ಣನ ಮುಂದೆ ಅಚ್ಚುಕಟ್ಟಾಗಿ ಇರಿಸಿದ 88 ಬಗೆಯ ತಿನಿಸುಗಳು, ಮಧ್ಯ ಭಕ್ತೆ ಕುಳಿತಿರುವ ಫೊಟೋಗಳನ್ನು ಹಂಚಿಕೊಂಡಿರುವ ಜೊತೆಗೆ "ಅವರ ಮತ್ತು ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರು ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು (ರೋಗಿ). ಅವರು ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು ನಿನ್ನೆ ರಾತ್ರಿ (ಸೆ.6, ಬುಧವಾರ) 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
-
Proud of her and her devotion to lord Krishna. She is my patient. She has again broken her previous record. 88 dishes were prepared last night for Gokulashtami. #janamashtami pic.twitter.com/SDoh3JKTvM
— Dr P Kamath (@cardio73) September 7, 2023 " class="align-text-top noRightClick twitterSection" data="
">Proud of her and her devotion to lord Krishna. She is my patient. She has again broken her previous record. 88 dishes were prepared last night for Gokulashtami. #janamashtami pic.twitter.com/SDoh3JKTvM
— Dr P Kamath (@cardio73) September 7, 2023Proud of her and her devotion to lord Krishna. She is my patient. She has again broken her previous record. 88 dishes were prepared last night for Gokulashtami. #janamashtami pic.twitter.com/SDoh3JKTvM
— Dr P Kamath (@cardio73) September 7, 2023
ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಡಾ. ಪದ್ಮನಾಭ ಕಾಮತ್, "ಇವರ ಶ್ರದ್ಧಾ ಭಕ್ತಿಗೆ ಸಾಟಿಯಿಲ್ಲ. ಕೆಲವು ವರುಷಗಳ ಹಿಂದೆ ಹೃದಯದ ತೊಂದರೆಯಿದ್ದರೂ ಅಷ್ಟಮಿಯಂದು ನೈವೇದ್ಯದ ಬಗ್ಗೆಯೇ ಆಲೋಚಿಸುತ್ತಿದ್ದರು. ದೇವರ ಮೇಲಿನ ಅಪಾರ ಭಕ್ತಿ ಹಾಗೂ ನಂಬಿಕೆಯಿಂದ ಈಗ ಆರೋಗ್ಯವಂತರಾಗಿದ್ದಾರೆ'' ಎಂದರು. ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ಬಗೆಯ ಖಾದ್ಯ ತಯಾರಿ ಮಾಡಿದ್ದರು.
ಮಂಗಳೂರಿನಲ್ಲಿ ಮೊಸರು ಕುಡಿಕೆ ಉತ್ಸವ : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೊಸರು ಕುಡಿಕೆ ಸಂಭ್ರಮದಿಂದ ಆಚರಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯಲ್ಲಿ ವಿಟ್ಲ ಪಿಂಡಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಸರು ಕುಡಿಕೆ ಉತ್ಸವವನ್ನು ಆಚರಿಸಲಾಗುತ್ತದೆ.
ಮಂಗಳೂರಿನ ವಿವಿದೆಡೆ ಆಯಾ ಊರಿನ ಸಂಘ ಸಂಸ್ಥೆಗಳು, ಯುವಕರು ಸೇರಿ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸುತ್ತಾರೆ. ಈ ವೇಳೆ ಎತ್ತರದ ಎರಡು ಕಂಬಗಳ ಮಧ್ಯೆ ಮೇಲ್ಬಾಗದಲ್ಲಿ ಕಟ್ಟಲಾದ ಬಣ್ಣದ ನೀರು ತುಂಬಿದ ಮಡಕೆಗಳನ್ನು ಒಡೆದು ಸಂಭ್ರಮಿಸಲಾಗುತ್ತದೆ. ಹಲವೆಡೆ ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮೊಸರು ಕುಡಿಕೆ ಉತ್ಸವದ ಅಂಗವಾಗಿ ಕೆಲವೆಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಅಲ್ಲದೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಗೆ ಕೃಷ್ಣನ ವೇಷಗಳನ್ನು ಹಾಕಲಾಗುತ್ತದೆ. ಮಕ್ಕಳ ತಾಯಂದಿರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಪಡುತ್ತಾರೆ. ಅಲ್ಲದೆ ವಿವಿದೆಡೆ ಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಬುಧವಾರ ಜನ್ಮಾಷ್ಟಮಿ ಹಿನ್ನೆಲೆ ಕಲ್ಕೂರ ಪ್ರತಿಷ್ಠಾನದಿಂದ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೃಷ್ಣವೇಷ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗಿಯಾಗಿದ್ದರು.
ಮಂಗಳೂರಿನ ನಗರದ ವಿವಿದೆಡೆ ಮೊಸರು ಕುಡಿಕೆ ಒಡೆಯುವ ಸ್ಫರ್ಧೆಯನ್ನು ಆಯೋಜಿಸಲಾಗುತ್ತದೆ.ಈ ವೇಳೆ ನೂರಾರು ತಂಡಗಳು ಮಾನವ ಗೋಪುರಗಳನ್ನು ನಿರ್ಮಿಸಿ ಎತ್ತರದಲ್ಲಿರುವ ಮೊಸರು ಕುಡಿಕೆಯನ್ನು ಒಡೆಯುತ್ತಾರೆ. ಇವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣವೇಷಧಾರಿಗಳ ಮೆರವಣಿಗೆಯೂ ನಡೆಯುತ್ತದೆ.
ಇದನ್ನೂ ಓದಿ : ವಿಜಯನಗರ: ಉರ್ದು ಶಾಲೆಯಲ್ಲಿ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ