ETV Bharat / state

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ದಾರಿಯಲ್ಲೇ 5 ಗ್ರೆನೇಡ್​ಗಳು ಪತ್ತೆ: ಬೆಚ್ಚಿಬಿದ್ದ ಗ್ರಾಮಸ್ಥರು! - ಉಪ್ಪಿನಂಗಡಿ ಅಪರಾಧ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮಾಜಿ ಸೈನಿಕನ ಮನೆ ಬಳಿ ಗ್ರೆನೇಡ್​ಗಳು ಪತ್ತೆಯಾಗಿದ್ದು, ಆತಂಕ ಮನೆಮಾಡಿದೆ.

ಮಾಜಿ ಸೈನಿಕನ ಮನೆಯ ಬಳಿ ಗ್ರೆನೇಡ್ ನಂತಹ ವಸ್ತುಗಳು ಪತ್ತೆ

author img

By

Published : Nov 7, 2021, 11:42 AM IST

Updated : Nov 7, 2021, 4:06 PM IST

ಉಪ್ಪಿನಂಗಡಿ(ದಕ್ಷಿಣ ಕನ್ನಡ): ಬೆಳ್ತಗಂಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ವಾಸವಾಗಿರುವ ಮಾಜಿ‌ ಸೈನಿಕನ ಮನೆಯ ಪಕ್ಕದಲ್ಲೇ ಗ್ರೆನೇಡ್​ಗಳು ಪತ್ತೆಯಾಗಿವೆ.

ಭೂಸೇನಾ ರೆಜಿಮೆಂಟ್​​ನಲ್ಲಿ SCO ಆಗಿ ನಿವೃತ್ತಿ ಜೀವನದಲ್ಲಿರುವ ಜಯಕುಮಾರ್ ಪೂಜಾರಿ ಎಂಬುವರ ಮನೆಯ ಬಳಿಯಲ್ಲೇ ಈ ಅಪಾಯಕಾರಿ ಗ್ರೆನೇಡ್​ಗಳು ಸಿಕ್ಕಿವೆ. ನಿನ್ನೆ ಸಂಜೆ 5.30 - 6 ಗಂಟೆಯ ವೇಳೆಗೆ ಜಯಕುಮಾರ್ ಪೂಜಾರಿಯವರು ಉಪ್ಪಿನಂಗಡಿಯಿಂದ ಮನೆ ಕಡೆಗೆ ಬರುತ್ತಿರುವ ವೇಳೆ ಮನೆಯ ಪಕ್ಕದಲ್ಲಿ ಹರಡಿರುವ ಸ್ಥಿತಿಯಲ್ಲಿ 5 ಗ್ರೆನೇಡ್​​ಗಳು ಕಂಡುಬಂದಿವೆ. ಸುದ್ದಿ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಜಯಕುಮಾರ್ ಪೂಜಾರಿ ಭೂಸೇನಾ ರೆಜಿಮೆಂಟ್​ನಲ್ಲಿ ಎಸಿಒ ಆಗಿದ್ದರಿಂದ ಈ ವಸ್ತುಗಳು ಗ್ರೆನೇಡ್ ಎಂದು ಅವರಿಗೆ ಅರಿವಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಅಪಾಯವಾಗಬಹುದು ಎಂಬುದನ್ನು ಅರಿತ ಅವರು, ಅದನ್ನು ಮನೆಯ ಅಂಗಳದ ಮೂಲೆ ಸುರಕ್ಷಿತವಾಗಿ ಇಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪರಿಶೀಲನೆ ನಡೆಸಿರುವ ದ.ಕ. ಜಿಲ್ಲಾ ಎಸ್​ಪಿ ಋಷಿಕೇಶ ಸೋಣಾವಾಲ ಅವರು ಪ್ರತಿಕ್ರಿಯೆ ನೀಡಿ, ಇದು 40 ವರ್ಷಗಳ ಹಳೆಯ ಗ್ರೆನೇಡ್ ಆಗಿದ್ದು, ಎಲ್ಲಿಂದ ಬಂದಿರುವುದೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Last Updated : Nov 7, 2021, 4:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.