ETV Bharat / state

ಯುವಕರ ತಂಡಗಳ ಗಲಾಟೆ ಬಳಸಿ ರಾಜಕೀಯ ಲಾಭ ಪಡೆಯಲಾಗ್ತಿದೆ: ಯು.ಟಿ.ಖಾದರ್ ಅಸಮಾಧಾನ - ಮಂಗಳೂರಿನ ಮಾಲ್​ ಒಂದರಲ್ಲಿ ನಡೆದಿದ್ದ ಗಲಾಟೆ

ಮಂಗಳೂರಿನ ಮಾಲ್​ ಒಂದರಲ್ಲಿ ನಡೆದಿದ್ದ ಗಲಾಟೆ ಬಗ್ಗೆ ಮಾಜಿ ಸಚಿವ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಿಂದ ಅಹಿತಕರ ಘಟನೆಗಳಾಗದಂತೆ ನೋಡಿಕೊಳ್ಲುವುದು ಪೊಲೀಸರ ಜವಾಬ್ದಾರಿ. ಈ ರೀತಿಯ ಗಲಾಟೆಗಳಿಂದ ಜನಪ್ರತಿನಿಧಿಗಳು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯು. ಟಿ. ಖಾದರ್​ ಕಿಡಿಕಾರಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ ಯು.ಟಿ.ಖಾದರ್
author img

By

Published : Sep 28, 2019, 11:59 PM IST

ಮಂಗಳೂರು: ಸಮಾಜದಲ್ಲಿ ಅವಿಶ್ವಾಸ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಅನ್ಯಾಯಕ್ಕೊಳಪಟ್ಟವರಿಗೆ ನ್ಯಾಯ ಒದಗಿಸುವ ಕೆಲಸ ಒಗ್ಗಟ್ಟಿನಿಂದ ಮಾಡಬೇಕು. ಅಲ್ಲದೇ ಸೌಹಾರ್ದಯುತವಾದ ಕೆಲಸವನ್ನು ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಇತ್ತೀಚೆಗೆ ಮಂಗಳೂರಿನ ಮಾಲೊಂದರಲ್ಲಿ ನಡೆದಿರುವ ಯುವಕರ ಗಲಾಟೆ ವಿಚಾರದ ಬಗ್ಗೆ ಸರ್ಕ್ಯೂಟ್ ಹೌಸ್ ನಲ್ಲಿ‌ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ಕೂಡ ಅಧಿಕಾರ ಇಲ್ಲದವರ, ಬೆಂಬಲ ಇಲ್ಲದವರ ಬಗ್ಗೆ ಹೆಚ್ಚಿನ ನಿಗಾ ವಹಿಸಿಕೊಳ್ಳಬೇಕು. ನಾವು ವಿರೋಧ ಪಕ್ಷದಲ್ಲಿದ್ದೇವೆ. ಹಾಗಾಗಿ ಅವರು ನ್ಯಾಯಯುತವಾಗಿ ನಮ್ಮ ಕಡೆಗೆ ನಿಲ್ಲಬೇಕು. ಆದ್ದರಿಂದ ಅಧಿಕಾರಿ ವರ್ಗ ಯಾವುದೇ ತಾರತಮ್ಯವಿಲ್ಲದೇ ಸಮಾನತೆಯಿಂದ, ನಡೆದಿರುವ ಎಲ್ಲ ವಿಚಾರಗಳನ್ನು ನೇರವಾಗಿ ಹೇಳಬೇಕು ಎಂದು ಹೇಳಿದರು.

ಅಸಮಾಧಾನ ವ್ಯಕ್ತಪಡಿಸಿದ ಯು.ಟಿ.ಖಾದರ್

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುಳ್ಳುಸುದ್ದಿಗಳನ್ನು ಹರಡದಂತೆ ಮಾಡುವ ಕೆಲಸ ಪೊಲೀಸ್ ಅಧಿಕಾರಿಗಳು ಮಾಡಬೇಕು. ಯುವಕರ ಮಧ್ಯೆ ಸಣ್ಣ ಸಣ್ಣ ಗಲಾಟೆಗಳು ಎಲ್ಲ ಕಡೆಗಳಲ್ಲಿಯೂ ನಡೆಯುತ್ತದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ರಾಜಕಾರಣಿಗಳು ಯಾಕೆ ಗೊಂದಲ ಸೃಷ್ಟಿ ಮಾಡುವುದು ಎಂದರು.

ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯ ಅವರ ಚೇಲಾ ಎಂದು ಎಸ್ ಡಿ ಸೋಮಶೇಖರ್ ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ನಮ್ಮ ನಾಯಕರು ಎಲ್ಲರೂ ಜೊತೆಗಿದ್ದಾರೆ. ಹೊರಗಿನ‌ ಯಾರಿಗೂ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಪಕ್ಷದಲ್ಲಿ ಇದ್ದಾಗಲೇ ಅವರು ಹೇಳಬೇಕಿತ್ತು. ಆದ್ದರಿಂದ ಇಂತಹ ಮಾತುಗಳಿಗೆ ಮಹತ್ವ ನೀಡಬೇಕೆಂದಿಲ್ಲ ಎಂದರು.

ಲಾಠಿ ಹಿಡಿದು ಪಥಸಂಚಲನ ಅಭ್ಯಾಸ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಿಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಯಿಸಿ, ಪ್ರಧಾನಿ ಒಂದು ಕಡೆಯಲ್ಲಿ‌ ಫಿಟ್ ಇಂಡಿಯಾ ಎಂದು ಹೇಳುತ್ತಾರೆ. ಮತ್ತೊಂದೆಡೆ ಅದನ್ನೇ ಟ್ರೋಲ್ ಮಾಡಲಾಗುತ್ತದೆ. ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ನಾವು ತಯಾರು ಮಾಡಿಕೊಳ್ಳುತ್ತಿದ್ದೇವೆ. ನಾನು ಭಾರತೀಯ ಸೇವಾದಳದ ತರಬೇತುದಾರನಾಗಿದ್ದೆ. ಅದರಲ್ಲಿ ಹಿಂದಿನಿಂದಲೂ ಲಾಠಿ ಹಿಡಿದು ಪಥ ಸಂಚಲನ ಮಾಡಲಾಗುತ್ತದೆ. ಭಾರತೀಯ ಸೇವಾದಳದ ಕಾರ್ಯಕರ್ತರು ಲಾಠಿಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿದ್ದೇ ಹೊರತು, ಯಾವತ್ತೂ ದುರುಪಯೋಗ ಪಡಿಸಿಲ್ಲ ಎಂದು ಹೇಳಿದರು.

Intro:ಮಂಗಳೂರು: ಸಮಾಜದಲ್ಲಿ ಅವಿಶ್ವಾಸ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಅನ್ಯಾಯಕ್ಕೊಳಪಟ್ಟವರಿಗೆ ನ್ಯಾಯ ಒದಗಿಸುವ ಕೆಲಸ ಒಗ್ಗಟ್ಟಿನಿಂದ ಮಾಡಬೇಕು. ಅಲ್ಲದೆ ಸೌಹಾರ್ದಯುತವಾದ ಕೆಲಸವನ್ನು ನಾವೆಲ್ಲರೂ ಕೂಡಿ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಇತ್ತೀಚೆಗೆ ಮಂಗಳೂರಿನಲ್ಲಿ ಮಾಲೊಂದರಲ್ಲಿ ನಡೆದಿರುವ ಯುವಕರ ಗಲಾಟೆ ವಿಚಾರದ ಬಗ್ಗೆ ಸರ್ಕ್ಯೂಟ್ ಹೌಸ್ ನಲ್ಲಿ‌ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ಕೂಡ ಅಧಿಕಾರ ಇಲ್ಲದವರ, ಬೆಂಬಲ ಇಲ್ಲದವರ ಬಗ್ಗೆ ಹೆಚ್ಚಿನ ನಿಗಾ ವಹಿಸಿಕೊಳ್ಳಬೇಕು. ನಾವು ವಿರೋಧ ಪಕ್ಷದಲ್ಲಿದ್ದೇವೆ. ಹಾಗಾಗಿ ಅವರು ನ್ಯಾಯಯುತವಾಗಿ ನಮ್ಮ ಕಡೆಗೆ ನಿಲ್ಲಬೇಕು.ಆದ್ದರಿಂದ ಅಧಿಕಾರಿ ವರ್ಗ ಯಾವುದೇ ತಾರತಮ್ಯವಿಲ್ಲದೆ ಸಮಾನತೆಯಿಂದ, ನಡೆದಿರುವ ಎಲ್ಲಾ ವಿಚಾರಗಳನ್ನು ನೇರವಾಗಿ ಹೇಳಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುಳ್ಳುಸುದ್ದಿಗಳನ್ನು ಹರಡದಂತೆ ಮಾಡುವ ಕೆಲಸ ಪೊಲೀಸ್ ಅಧಿಕಾರಿಗಳು ಮಾಡಬೇಕು. ಯುವಕರ ಮಧ್ಯೆ ಸಣ್ಣ ಸಣ್ಣ ಗಲಾಟೆಗಳು ಎಲ್ಲಾ ಕಡೆಗಳಲ್ಲಿಯೂ ನಡೆಯುತ್ತದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ರಾಜಕಾರಣಿಗಳು ಯಾಕೆ ಗೊಂದಲ ಸೃಷ್ಟಿ ಮಾಡುವುದು ಎಂದು ಯು.ಟಿ.ಖಾದರ್ ಹೇಳಿದರು.

Body:ದಿನೇಶ್ ಗುಂಡೂರಾವ್ ಅವರು ಸಿದ್ದರಾಮಯ್ಯರ ಚೇಲಾ ಎಂದು ಎಸ್ ಡಿ ಸೋಮಶೇಖರ್ ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ನಮ್ಮ ನಾಯಕರು ಎಲ್ಲರೂ ಜೊತೆಗಿದ್ದಾರೆ. ಹೊರಗಿನ‌ ಯಾರಿಗೂ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಪಕ್ಷದಲ್ಲಿ ಇದ್ದಾಗಲೇ ಅವರು ಹೇಳಬೇಕಿತ್ತು. ಆದ್ದರಿಂದ ಇಂತಹ ಮಾತುಗಳಿಗೆ ಮಹತ್ವ ನೀಡಬೇಕೆಂದಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಯುವನಾಯಕರಿಗೆ ಅವಕಾಶವಿಲ್ಲ, ಅಲ್ಲದೆ ಕಾಂಗ್ರೆಸ್ ನಲ್ಲಿ ಹಿತ್ತಾಳೆ ಕಿವಿಯವರು ಇರುವುದು ಎಂದು ದಿನೇಶ್ ಗುಂಡೂರಾವ್ ಪತ್ನಿ ಟ್ವಿಟ್ ಮಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್, ಸಾಮಾಜಿಕ ಜಾಲತಾಣಗಳಿಗೆ ಮಹತ್ವ ನೀಡಬೇಡಿ. ನಮ್ಮ ಕಾಂಗ್ರೆಸ್ ನಲ್ಲಿ ಹಿತ್ತಾಳೆ ಕಿವಿಯವರು ಯಾರೂ ಇಲ್ಲ ಎಂದು ಹೇಳಿದರು.

Conclusion:ಲಾಠಿ ಹಿಡಿದ ಪಥಸಂಚಲನ ಅಭ್ಯಾಸ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಿಡಿಯೋ ವೈರಲ್ ಆಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾಜಿ ಸಚಿವ ಖಾದರ್ ಮಾತನಾಡಿ, ಪ್ರಧಾನಿ ಒಂದು ಕಡೆಯಲ್ಲಿ‌ಫಿಟ್ ಇಂಡಿಯಾ ಎಂದು ಹೇಳುತ್ತಾರೆ. ಮತ್ತೊಂದೆಡೆ ಅದನ್ನೇ ಟ್ರೋಲ್ ಮಾಡಲಾಗುತ್ತದೆ. ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ನಾವು ತಯಾರು ಮಾಡಿಕೊಳ್ಳುತ್ತಿದ್ದೇವೆ. ನಾನು ಭಾರತೀಯ ಸೇವಾದಳದ ತರಬೇತುದಾರನಾಗಿದ್ದೆ. ಅದರಲ್ಲಿ ಹಿಂದಿನಿಂದಲೂ ಲಾಠಿ ಹಿಡಿದು ಪಥ ಸಂಚಲನ ಮಾಡಲಾಗುತ್ತದೆ. ಭಾರತೀಯ ಸೇವಾದಳದ ಕಾರ್ಯಕರ್ತರು ಲಾಠಿಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿದ್ದೇ ಹೊರತು, ಯಾವತ್ತೂ ದುರುಪಯೋಗ ಪಡಿಸಿಲ್ಲ‌ ಎಂದು ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.