ಮಂಗಳೂರು: ದುಬೈನಿಂದ ಬಂದಿದ್ದ ಗರ್ಭಿಣಿಗೆ ಅಪಾರ್ಟ್ಮೆಂಟ್ಗೆ ಹೋಗಲು ಅವಕಾಶ ನೀಡದೆ ಹೊಟ್ಟೆಯಲ್ಲಿ ಮಗು ಮೃತಪಟ್ಟ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು 9 ಮಂದಿಯ ವಿಚಾರಣಾ ಸಮಿತಿ ರಚಿಸಲು ಜಿಲ್ಲಾಧಿಕಾರಿ ಸಿಂಧೂ .ಬಿ. ರೂಪೇಶ್ ಆದೇಶಿಸಿದ್ದಾರೆ.
ಮೇ 12ರಂದು ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಗರ್ಭಿಣಿಯೊಬ್ಬರು ಬಂದಿದ್ದರು. ಅವರನ್ನು ಸರ್ಕಾರದ ನಿಯಮದಂತೆ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಈ ವೇಳೆ ಕೋವಿಡ್ ಪರಿಕ್ಷಾ ವರದಿ ನೆಗೆಟಿವ್ ಬಂದ ಬಳಿಕ ಮನೆಗೆ ಕಳುಹಿಸಲಾಗಿತ್ತು. ಅದರಂತೆ ಗರ್ಭಿಣಿ ತನ್ನ ಅಪಾರ್ಟ್ಮೆಂಟ್ಗೆ ತೆರಳಿದ್ದರು.
ಆದರೆ, ಅಲ್ಲಿ ಅವರಿಗೆ ವಾಸಿಸಲು ಅವಕಾಶ ನೀಡದೆ ಲಾಡ್ಜ್ನಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ನೊಂದ ಮಹಿಳೆಗೆ ಸರಿಯಾದ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿತ್ತು. ಈ ಬಗ್ಗೆ ಉಪ್ಪಿನಂಗಡಿಯ ಅಬ್ದುಲ್ ಅಝೀಝ್ ಬಸ್ತಿಕಾರ್ ಅವರು ನೀಡಿದ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ದೂರಿನ ಸತ್ಯಾಸತ್ಯಾತೆ ಪರಿಶೀಲಿಸಿ ವರದಿ ನೀಡಲು ಐಎಎಸ್ ಅಧಿಕಾರಿ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಆರ್ ಸ್ನೇಹಲ್ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿ ರಚಿಸಲಾಗಿದೆ. ಇದರಲ್ಲಿ 9 ಮಂದಿ ಸದಸ್ಯರಿದ್ದಾರೆ.