ETV Bharat / state

ಹಾವು ಕಚ್ಚಿದ ಭಾಗಕ್ಕೆ ಬಾಯಿ ಇಟ್ಟು ರಕ್ತ ತೆಗೆದು ಅಮ್ಮನ ಪ್ರಾಣ ರಕ್ಷಿಸಿದ ಮಗಳು! - ETV Bharath Kannada news

ತಾಯಿಗೆ ಹಾವು ಕಚ್ಚಿದ್ದು ತಿಳಿದು ತಕ್ಷಣವೇ ಮಗಳು ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ ಅಪರೂಪದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

Etv Bharat
Etv Bharat
author img

By

Published : Mar 21, 2023, 12:54 PM IST

Updated : Mar 21, 2023, 1:11 PM IST

ಪುತ್ತೂರು (ದಕ್ಷಿಣ ಕನ್ನಡ): ತಾಯಿಗೆ ವಿಷ ತುಂಬಿದ ಹಾವು ಕಚ್ಚಿದ ಸಂದರ್ಭದಲ್ಲಿ ಧೃತಿಗೆಡದ ಮಗಳು ವಿಷವನ್ನು ತೆಗೆದು ತಾಯಯನ್ನು ರಕ್ಷಿಸಿದ ಘಟನೆ ತವಾಗಿ ಬೆಳಕಿಗೆ ಬಂದಿದೆ. ಪುತ್ರಿ ಆ ವಿಷವನ್ನು ಹಾವು ಕಚ್ಚಿದ ಜಾಗದಿಂದ ಹೊರ ತೆಗೆದಿದ್ದು, ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ್ದಾರೆ. ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ತಾಯಿಗೆ ಮರುಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ. ಅಲ್ಲದೇ ಆಕೆ ಆ ಕ್ಷಣಕ್ಕೆ ಹಾವು ಕಡಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆಯ ಜೊತೆಗೆ, ತುರ್ತಾಗಿ ಆಸ್ಪತ್ರೆಗೆ ಸೇರಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಕೆಯ್ಯೂರು ಗ್ರಾಮದ ಎಟ್ಯಡ್ಕ ಎಂಬಲ್ಲಿ ವಾರದ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಎಟ್ಯಡ್ಕ ನಿವಾಸಿ ಸತೀಶ್ ರೈ ಎಂಬವರ ಪತ್ನಿ ಮಮತಾ ಎಸ್.ರೈ ಅವರಿಗೆ ಮನೆಯ ತೋಟದಲ್ಲಿ ನಾಗರಹಾವು ಕಚ್ಚಿತ್ತು. ಈ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ಮಗಳು ಶ್ರಮ್ಯ ರೈ ಕೂಡಲೇ ಹಾವು ಕಚ್ಚಿದ ಜಾಗಕ್ಕೆ ಬಾಯಿಯಿಟ್ಟು ವಿಷಪೂರಿತ ರಕ್ತವನ್ನು ಚೀಪಿ ಹೊರತೆಗೆದು ವಿಷಪ್ರಸರಣ ಆಗದಂತೆ ನೋಡಿಕೊಂಡು, ತಾಯಿಯ ಜೀವಕ್ಕೆ ಆಗಬಹುದಾಗಿದ್ದ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ.

ಮಮತಾ ರೈ ಕೆಯ್ಯೂರು ಗ್ರಾ.ಪಂ ಸದಸ್ಯೆಯಾಗಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುತ್ರಿ ಶ್ರಮ್ಯ ರೈ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಓದುತ್ತಿದ್ದಾರೆ. ಜತೆಗೆ ಕಾಲೇಜಿನ ರೋವರ್ಸ್ ರೇಂಜರ್ಸ್ ಘಟಕದಲ್ಲೂ ತೊಡಗಿಸಿಕೊಂಡಿದ್ದಾರೆ.

ಮತ್ತಷ್ಟು ವಿವರ: ಘಟನೆ ನಡೆದ ದಿನ ಮಮತಾ ರೈ ಅವರು ಅಡಿಕೆ ಗಿಡಗಳಿಗೆ ನೀರು ಹಾಯಿಸುವ ಉದ್ದೇಶದಿಂದ ಸಂಜೆ 5 ಗಂಟೆ ಸುಮಾರಿಗೆ ತೋಟದಲ್ಲಿರುವ ಪಂಪ್ ಶೆಡ್​ಗೆ ಹೋಗಿದ್ದಾರೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ ನಾಗರ ಹಾವು ಅವರ ಕಾಲಿಗೆ ಕಡಿದಿದೆ. ಭಯಭೀತರಾದ ವಾಪಸ್ಸು ಮನೆಗೆ ಓಡಿ ಬಂದಿದ್ದಾರೆ. ಮನೆಯಲ್ಲಿ ಅವರ ಮಗಳು ಶ್ರಮ್ಯ ರೈ ಮಾತ್ರ ಇದ್ದರು. ವಿಷಯ ತಿಳಿದ ಆಕೆ ತಡ ಮಾಡದೇ, ಯಾವುದೇ ಅಳುಕು ಪ್ರದರ್ಶಿಸದೇ ತಾಯಿಯ ಕಾಲಿಗೆ ಹಾವು ಕಚ್ಚಿದ ಜಾಗಕ್ಕೆ ಬಾಯಿಯಿಟ್ಟು ವಿಷ ಚೀಪಿದ್ದಾರೆ. ಈ ರೀತಿ ಮೂರು ಬಾರಿ ವಿಷ ಪೂರಿತ ರಕ್ತವನ್ನು ಚೀಪಿ ಹೊರಗೆ ಚೆಲ್ಲಿದ್ದಾರೆ.

ಮಮತಾ ರೈ ಯವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರ ಸಲಹೆಯಂತೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸದ್ಯ ಮಮತಾ ಚೇತರಿಸಿಕೊಂಡಿದ್ದಾರೆ. ಹಾವು ಕಡಿದ ತಕ್ಷಣ ವಿಷವನ್ನು ಕಾಲಿನಿಂದ ತೆಗೆದ ಕಾರಣ ವಿಷ ದೇಹಕ್ಕೆ ಸೇರಿಲ್ಲ. ಮಮತಾ ಆರೊಗ್ಯದಲ್ಲಿ ವೇಗವಾಗಿ ಚೇತರಿಸಿಕೊಳ್ಳಲು ವಿಷ ತೆಗೆದಿರುವುದು ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿರಸಿ: ವಿದ್ಯುತ್ ತಂತಿ​ ತಗುಲಿ ಮೃತಪಟ್ಟ ಅಪರೂಪದ ಹಾರುವ ಬೆಕ್ಕು

Last Updated : Mar 21, 2023, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.