ಬಂಟ್ವಾಳ: ಕೊರೊನಾ ವೈರಸ್ ಭೀತಿಯಿಂದ ಹೇರಲಾಗಿದ್ದ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಅಕ್ಷರ ದಾಸೋಹ ನೌಕರರಿಗೆ ವೇತನ ನೀಡುವ ಬಗ್ಗೆ ಮತ್ತು ದಾಸೋಹ ನೌಕರರಿಗೆ ಲಾಕ್ಡೌನ್ ಅವಧಿಯ ಪ್ರತಿ ತಿಂಗಳು 6 ಸಾವಿರ ರೂ. ನೀಡಬೇಕು. ತಕ್ಷಣ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಕೋವಿಡ್-19 ಲಾಕ್ಡೌನ್ ಪ್ರಾರಂಭವಾದ ಬಳಿಕ ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ. 2 ಲಕ್ಷ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ಅವರಿಗೆ ಈ ತನಕ ಯಾವುದೇ ಹಣ ದೊರೆತಿಲ್ಲ. ಕೆಲಸವೂ ಇಲ್ಲ. ಪರಿಹಾರವೂ ಇಲ್ಲದೆ ಅವರು ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಈ ಹಿನ್ನೆಲೆಯಲ್ಲಿ ಅವರಿಗೆ ಏಪ್ರಿಲ್ ನಂತರದ ವೇತನ ಹಾಗೂ ತಿಂಗಳಿಗ 6 ಸಾವಿರ ರೂ. ದಂತೆ ಕೋವಿಡ್ ಪರಿಹಾರವನ್ನು ಏಕಗಂಟಿನಲ್ಲಿ ನೀಡಬೇಕು ಎಂದು ಆಗ್ರಹಿಸಿದರು.