ETV Bharat / state

19ನೇ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿ ಸೈನೈಡ್ ಮೋಹನ್​ಗೆ ಜೀವಾವಧಿ ಶಿಕ್ಷೆ - ಸೈನೈಡ್ ಮೋಹನ್​ಗೆ ಜೀವಾವಧಿ ಶಿಕ್ಷೆ

ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರವೆಸಗಿ ಬಳಿಕ ಸೈನೆಡ್ ನೀಡಿ ಯುವತಿಯನ್ನು ಹತ್ಯೆ ಮಾಡಿರುವ 19ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಹಂತಕ ಸೈನೈಡ್ ಮೋಹನ್‌ ವಿರುದ್ಧದ ಆರೋಪವೂ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿದೆ.

cyanide Mohan sentenced to life imprisonment
ಅಪರಾಧಿ ಸೈನೈಡ್ ಮೋಹನ್
author img

By

Published : Feb 17, 2020, 7:22 PM IST

ಮಂಗಳೂರು: ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರವೆಸಗಿ ಬಳಿಕ ಸೈನೈಡ್ ನೀಡಿ ಯುವತಿಯನ್ನು ಹತ್ಯೆ ಮಾಡಿರುವ 19ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಹಂತಕ ಸೈನೈಡ್ ಮೋಹನ್‌ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ

ಈ ಪ್ರಕರಣದಲ್ಲಿ ಸೈನೈಡ್ ಮೋಹನ್ ಯುವತಿಯ ಕೊಲೆ ಮಾಡಿರೋದು ಸಾಬೀತಾದ ಹಿನ್ನೆಲೆಯಲ್ಲಿ ವಿಧಿ (302) ಅನ್ವಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಅಪಹರಣ (366) ಮಾಡಿರೋದಕ್ಕೆ 10 ವರ್ಷ ಕಠಿಣ ಶಿಕ್ಷೆ, 5 ಸಾವಿರ ದಂಡ, ಅತ್ಯಾಚಾರ (376)ಮಾಡಿರೋದಕ್ಕೆ 7ವರ್ಷ ಕಠಿಣ ಸಜೆ, 5 ಸಾವಿರ ರೂ. ದಂಡ, ಸೈನೆಡ್ ವಿಷ ಪದಾರ್ಥ(328) ಉಣಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷ ಕಠಿಣ ಸಜೆ, 5ಸಾವಿರ ರೂ. ದಂಡ, ಚಿನ್ನಾಭರಣ ಸುಲಿಗೆ (392) ಮಾಡಿರುವ ಆರೋಪಕ್ಕೆ 5 ವರ್ಷ ಕಠಿಣ ಸಜೆ, 5ಸಾವಿರ ರೂ. ದಂಡ, ವಿಷ ಉಣಿಸಿ ಸುಲಿಗೆ (394) ಮಾಡಿದ ಆರೋಪಕ್ಕೆ 10 ವರ್ಷ ಕಠಿಣ ಸಜೆ, 5ಸಾವಿರ ರೂ. ದಂಡ, ಮದುವೆ ಆಗುವುದಾಗಿ ನಂಬಿಸಿ ವಂಚನೆ (417) ಮಾಡಿರೋದಕ್ಕೆ ಒಂದು ವರ್ಷ ಕಠಿಣ ಸಜೆ, ಸಾಕ್ಷ್ಯ ನಾಶ (201) ಆರೋಪಕ್ಕೆ 7 ವರ್ಷ ಕಠಿಣ ಸಜೆ, 5ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಸಯೀದುನ್ನಿಸಾ ಆದೇಶ ನೀಡಿದ್ದಾರೆ.

ಪ್ರಕರಣದ ಹಿನ್ನಲೆ: ಮೋಹನ್​ಗೆ 2006ರಲ್ಲಿ ಸಂಬಂಧಿಕರೊಬ್ಬರ ಮದುವೆಗೆ ತೆರಳಿದ ಸಂದರ್ಭ ಕೇರಳದ ಕಾಸರಗೋಡಿನ 23 ವರ್ಷದ ಯುವತಿಯ ಪರಿಚಯ ಆಗಿತ್ತು. ಈ ಸಂದರ್ಭ ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು ಎಂದು ಪರಿಚಯಿಸಿದ್ದ. ಮದುವೆಯ ಬಗ್ಗೆ ಮಾತುಕತೆ ನಡೆದು ಆತ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿ ಒಂದು ವಾರದೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದ. ಬಳಿಕ ಮೋಹನ್ 2006 ಜೂನ್ 3 ರಂದು ಆಕೆಯನ್ನು ಪುಸಲಾಯಿಸಿ ಮೈಸೂರಿನ ಲಾಡ್ಜ್‌ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಮರುದಿನ ಬೆಳಗ್ಗೆ ದೇವಸ್ಥಾನಕ್ಕೆಂದು ಕರೆದು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಸೈನೈಡ್ ನೀಡಿದ್ದ. ಆಕೆ ಶೌಚಾಲಯಕ್ಕೆ ತೆರಳಿ ಸೈನೈಡ್ ಸೇವಿಸಿ ಕುಸಿದು ಬಿದ್ದಿದ್ದಳು. ಮಾಹಿತಿ ತಿಳಿದ ಪೊಲೀಸ್ ಠಾಣೆಯ ಸಿಬ್ಬಂದಿ ಬಸವರಾಜ್ ಕುಸಿದು ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಅಲ್ಲಿನ ವೈದ್ಯರು ಪರಿಶೀಲಿಸಿದಾಗ ಯುವತಿ ಸಾವನ್ನಪ್ಪಿರುವುದು ಗೊತ್ತಾಗಿತ್ತು.

ಮನೆಯಲ್ಲಿ ಯುವತಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದಳು. ಆದರೆ ಆ ಬಳಿಕ ಯುವತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009ರಲ್ಲಿ ಬಂಟ್ವಾಳದ ಯುವತಿವೋರ್ವಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಬಂಧನದ ಬಳಿಕ ಈ ಯುವತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು.

ಈ ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು. ಇದು ಸೈನೈಡ್ ಮೋಹನ್‌ನ 19ನೇ ಪ್ರಕರಣವಾಗಿದ್ದು, ಇನ್ನು 1 ಪ್ರಕರಣ ವಿಚಾರಣೆಗೆ ಬಾಕಿ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.