ETV Bharat / state

20ನೇ ಪ್ರಕರಣದಲ್ಲಿಯೂ ಸೈನೈಡ್ ಮೋಹನ್‌ ಮೇಲಿನ ಆರೋಪ ಸಾಬೀತು...

ಅತ್ಯಾಚಾರ ಎಸಗಿ, ಸೈನೆಡ್ ನೀಡಿ ಹತ್ಯೆ ಮಾಡಿರುವ 20ನೇ ಹಾಗೂ ಕೊನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರ ಸರಣಿ ಹಂತಕ ಸೈನೆಡ್ ಮೋಹನ್‌ ಮೇಲಿನ ಆರೋಪ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆ ಜೂ.24ರಂದು ನಡೆಯುವ ಸಾಧ್ಯತೆಯಿದೆ.

Cyanide Mohan
ಸೈನೈಡ್ ಮೋಹನ್‌ ಮೇಲಿನ ಆರೋಪ ಸಾಬೀತು
author img

By

Published : Jun 21, 2020, 12:32 AM IST

ಮಂಗಳೂರು: ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ, ಸೈನೆಡ್ ನೀಡಿ ಹತ್ಯೆ ಮಾಡಿರುವ 20ನೇ ಹಾಗೂ ಕೊನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರ ಸರಣಿ ಹಂತಕ ಸೈನೆಡ್ ಮೋಹನ್‌ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ‌.

ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆ ಜೂ.24ರಂದು ನಡೆಯುವ ಸಾಧ್ಯತೆಯಿದೆ. ಆರೋಪಿ ಮೋಹನ್ ಯುವತಿಯನ್ನು ಸೈನೆಡ್ ತಿನ್ನಿಸಿ ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶೆ ಸಯೀದುನ್ನಿಸಾ ಅವರು ತೀರ್ಮಾನಕ್ಕೆ ಬಂದು ಆತ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ.

ಪ್ರಕರಣದ ವಿವರ: ಸೈನೈಡ್ ಮೋಹನನಿಗೆ ಲೇಡಿಸ್ ಹಾಸ್ಟೆಲ್​ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಕಾಸರಗೋಡಿನ 25 ವರ್ಷದ ಯುವತಿಯು 2009ರಲ್ಲಿ ಪರಿಚಯವಾಗಿದ್ದರು. ಬಳಿಕ ಆತ ಆಕೆಗೆ ಮದುವೆ ಆಗುವುದಾಗಿ ಭರವಸೆ ನೀಡಿ ಮೂರು ಬಾರಿ ಆಕೆಯ ಮನೆಗೆ ಹೋಗಿ ಬಂದಿದ್ದ. 2009ರ ಜುಲೈ 8ರಂದು ಯುವತಿ ಸುಳ್ಯದ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಸುಳ್ಯದಿಂದ ಮೋಹನ್ ಆಕೆಯನ್ನು ಬೆಂಗಳೂರಿಗೆ ಕರೆದೊಯ್ಯುತ್ತಾನೆ. ಮೂರು ದಿನಗಳ ಬಳಿಕ ಮನೆ ಮಂದಿ ಆಕೆಗೆ ಫೋನ್ ಮಾಡಿದಾಗ ಮೋಹನ್ ಕರೆಯನ್ನು ಸ್ವೀಕರಿಸಿ, ಆಕೆ ಸ್ನಾನಕ್ಕೆ ಹೋಗಿದ್ದಾಳೆ. ನಾವು ಮದುವೆ ಆಗಿದ್ದು, ಶೀಘ್ರದಲ್ಲಿಯೇ ಮನೆಗೆ ವಾಪಾಸಾಗುತ್ತೇವೆ ಎಂದು ತಿಳಿಸಿದ್ದನು.

ಆದರೆ ಬೆಂಗಳೂರಿನ ಲಾಡ್ಜ್‌ನಲ್ಲಿ ರೂಂ ಮಾಡಿದ್ದ ಮೋಹನ್ ಜು.15ರಂದು ಬೆಳಗ್ಗೆ ಯುವತಿಯನ್ನು ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಸೈನೈಡ್ ಮಾತ್ರೆ ನೀಡಿದ್ದನು. ಅದನ್ನು ಸೇವಿಸಿದ ಆಕೆ ಶೌಚಾಲಯದ ಬಾಗಿಲಿನ ಬಳಿ ಕುಸಿದು ಬಿದ್ದಿದ್ದಳು. ಅಷ್ಟರಲ್ಲಿ ಮೋಹನ್ ಅಲ್ಲಿಂದ ತಪ್ಪಿಸಿಕೊಂಡಿದ್ದ. ಕುಸಿದು ಬಿದ್ದಿದ್ದ ಯುವತಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಯ ಕಾನ್ಸ್​ಟೆಬಲ್​ ​ ರಾಮಕೃಷ್ಣ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಕೆ ಸಾವನ್ನಪ್ಪಿದ್ದಳು.

2009ರ ಅಕ್ಟೋಬರ್‌ನಲ್ಲಿ ಮೋಹನ್ ಬಂಧಿತನಾದ ಸಂದರ್ಭ ಯುವತಿಯ ಸಹೋದರಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಳು. ಈ ಪ್ರಕರಣದಲ್ಲಿ ಯುವತಿಯ ಮೃತದೇಹದ ಪರೀಕ್ಷೆಯಲ್ಲಿ ಸೈನೈಡ್ ಅಂಶವಿರುವುದು ದೃಢ ಪಟ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.