ETV Bharat / state

19ನೇ ಯುವತಿಯ ಕೊಲೆ ಪ್ರಕರಣ ಸಾಬೀತು: ಫೆ.15 ರಂದು ಸೈನೈಡ್​ ಮೋಹನ್‌ಗೆ ಶಿಕ್ಷೆ ಪ್ರಕಟ - ಫೆ.15 ರಂದು ಸೈನೈಡ್​ ಮೋಹನ್‌ಗೆ ಶಿಕ್ಷೆ ಪ್ರಕಟ

2006ರಲ್ಲಿ ಮೋಹನ್ ಸಂಬಂಧಿಕರೊಬ್ಬರ ಮದುವೆಗೆ ತೆರಳಿದ್ದ ಸಂದರ್ಭ ಕೇರಳ ರಾಜ್ಯದ ಕಾಸರಗೋಡಿನ 23 ವರ್ಷದ ಯುವತಿಯ ಪರಿಚಯ ಆಗಿತ್ತು. ಆ ವೇಳೆ ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು ಎಂದು ಪರಿಚಯ ಮಾಡಿಕೊಂಡಿದ್ದ.

ಸೈನೈಡ್​ ಮೋಹನ್‌,  Cyanide Mohan 19th case also Proved
ಸೈನೈಡ್​ ಮೋಹನ್‌
author img

By

Published : Feb 13, 2020, 1:12 AM IST

ಮಂಗಳೂರು: ಮದುವೆ ಆಗುವ ಭರವಸೆ ನೀಡಿ, ಬಳಿಕ ಅತ್ಯಾಚಾರ ಎಸಗಿ ಸೈನೈಡ್ ಬಳಕೆ ಮಾಡಿಕೊಂಡು ಹತ್ಯೆ ಮಾಡಿರುವ 19ನೇ ಯುವತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರ ಸರಣಿ ಹಂತಕ ಸೈನೈಡ್​ ಮೋಹನ್‌ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.

2006ರಲ್ಲಿ ಮೋಹನ್ ಸಂಬಂಧಿಕರೊಬ್ಬರ ಮದುವೆಗೆ ತೆರಳಿದ್ದ ಸಂದರ್ಭ ಕೇರಳ ರಾಜ್ಯದ ಕಾಸರಗೋಡಿನ 23 ವರ್ಷದ ಯುವತಿಯ ಪರಿಚಯ ಆಗಿತ್ತು. ಆ ವೇಳೆ ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು ಎಂದು ಪರಿಚಯ ಮಾಡಿಕೊಂಡಿದ್ದ. ಬಳಿಕ 2006ರ ಜೂನ್ 3 ರಂದು ಆಕೆಯನ್ನು ಪುಸಲಾಯಿಸಿ ಮೈಸೂರಿನ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.

ಮರುದಿನ ಬೆಳಗ್ಗೆ ದೇವಸ್ಥಾನಕ್ಕೆಂದು ಹೇಳಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಆಕೆಗೆ ಸೈನೈಡ್ ಸೇವನೆ ಮಾಡಿಸಿದ್ದ. ಅದೇ ವೇಳೆ ಶೌಚಾಲಯಕ್ಕೆ ಹೋಗಿದ್ದ ಯುವತಿ ಸೈನೈಡ್ ಸೇವಿಸಿದ್ದರಿಂದ ಕುಸಿದು ಬಿದ್ದಿದ್ದಳು. ಮಾಹಿತಿ ತಿಳಿದ ಪೊಲೀಸ್​ ಸಿಬ್ಬಂದಿ ಬಸವರಾಜ್, ಕುಸಿದು ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಯುವತಿ ಸಾಗಿವೀಡಾಗಿದ್ದಳು.

ಇನ್ನು ಯುವತಿ ಮನೆಗೆ ವಾಪಸ್​ ಆಗದ ಹಿನ್ನೆಲೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009ರಲ್ಲಿ ಮೋಹನ್ ಬಂಧನದ ಬಳಿಕ ಈ ಯುವತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು. ಪ್ರಕರಣದ ಶಿಕ್ಷೆಯ ಪ್ರಮಾಣವು ಫೆ.15ರಂದು ಪ್ರಕಟಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.