ETV Bharat / state

ಮಂಗಳೂರಿನಲ್ಲಿ ಡಿವೈಡರ್​ಗೆ ಸ್ಕೂಟರ್ ಡಿಕ್ಕಿ.. ಅಪ್ರಾಪ್ತರಿಬ್ಬರ ದಾರುಣ ಸಾವು - Vikas College Maryhill

ಸ್ಕೂಟರ್​ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತರಿಬ್ಬರು ಅತಿವೇಗದ ಚಾಲನೆಯಿಂದ ಡಿವೈಡರ್​ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಡಿವೈಡರ್​ಗೆ ಸ್ಕೂಟರ್ ಡಿಕ್ಕಿ.
ಡಿವೈಡರ್​ಗೆ ಸ್ಕೂಟರ್ ಡಿಕ್ಕಿ.
author img

By

Published : Jun 29, 2023, 11:58 AM IST

Updated : Jun 29, 2023, 12:19 PM IST

ಮಂಗಳೂರು(ದಕ್ಷಿಣ ಕನ್ನಡ): ನಗರದ ಮೇರಿಹಿಲ್ ಬಳಿ ಬುಧವಾರ ರಾತ್ರಿ ಸ್ಕೂಟರ್​​​​ ಒಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪ್ರಾಪ್ತ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪಚ್ಚನಾಡಿ ನಿವಾಸಿಗಳಾದ ಪವನ್ (16) ಹಾಗೂ ಚಿರಾಗ್(15) ಸಾವನ್ನಪ್ಪಿದವರು.

ನಿನ್ನೆ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಇವರಿಬ್ಬರು ನಗರದಿಂದ ಪದವಿನಂಗಡಿ ಕಡೆಗೆ ಸ್ಕೂಟರ್​ನಲ್ಲಿ ಹೋಗುತ್ತಿದ್ದರು‌. ಅತಿವೇಗದ ಚಾಲನೆಯಲ್ಲಿದ್ದ ಸ್ಕೂಟರ್ ಮೇರಿಹಿಲ್​ನ ವಿಕಾಸ್ ಕಾಲೇಜು ಮುಂಭಾಗ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಇವರಲ್ಲಿ ಓರ್ವ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾನೆ. ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ. ಸರಿಯಾದ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ ಓರ್ವನನ್ನು ಬಸ್​ನಲ್ಲಿ ಆಸ್ಪತ್ರೆಗೆ ರವಾನಿಸಿರುವ ಘಟನೆಯೂ ನಡೆದಿದೆ. ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಅಪಘಾತ ಪ್ರಕರಣಗಳು:

ಬೈಕ್​ಗೆ ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು: ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಮೇ 22 ರಂದು ವಿದ್ಯಾರ್ಥಿಗಳಿಬ್ಬರು ಚಲಾಯಿಸುತ್ತಿದ್ದ ಬೈಕ್​ಗೆ ವ್ಯಾಗನರ್​ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಪರಿಣಾಮ ಸುಳ್ಯದ ಆರ್ಯುವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ತೀವ್ರ ಸ್ವರೂಪದ ತಲೆಗಾದ ಗಾಯಗಳಿಂದ ಮೃತಪಟ್ಟಿದ್ದ.

ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಕಾಲು ಕಳೆದು ಕೊಂಡಿದ್ದಾರೆ ಪಾರ್ವತಮ್ಮ ರಾಜ್​ಕುಮಾರ್​ ತಮ್ಮನ ಮಗ: ಜೂನ್​ 25 ರಂದು ರಾಯಲ್​ ಎನ್​ಫೀಲ್ಡ್​ ಹಾಗು ಟಿಪ್ಪರ್ ನಡುವೆ ಚಾಮರಾಜನಗರದಲ್ಲಿ ಅಪಘಾತ ಸಂಭವಿಸಿತ್ತು. ಪರಿಣಾಮ ಬೈಕ್​ನಲ್ಲಿದ್ದ ಕನ್ನಡ ಚಿತ್ರರಂಗದ ದಿ.ಡಾ ರಾಜ್​ಕುಮಾರ್​ ಅವರ ಪತ್ನಿ ದಿ.ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಮಗ ಸೂರಜ್ ಕುಮಾರ್​ ಗಂಭೀರ ಗಾಯದಿಂದ ತಮ್ಮ ಕಾಲನ್ನು ಕಳೆದು ಕೊಂಡಿದ್ದಾರೆ. ಇವರು ಕರ್ನಾಟದ ನಿರ್ಮಾಪಕ ಎಸ್​.ಎ. ಶ್ರೀನಿವಾಸ್​ ಅವರ ಪುತ್ರರಾಗಿದ್ದು, ಐರಾವತ ಮತ್ತು ತಾರಕ್​ ಸಿನಿಮಾಗಳಿಗೆ ಅಸಿಸ್ಟೆಂಟ್​ ಡೈರಕ್ಟರ್​ ಆಗಿ ಕೆಲಸ ನಿರ್ವಹಿಸಿದ್ದರು.

ನಿಯಂತ್ರಣ ತಪ್ಪಿ ಬಸ್​ ಪಲ್ಟಿ 2 ಸಾವು: ಇಂದು ಬೆಳಗ್ಗೆ ನಸುಕಿನ ಜಾವ ಬೆಂಗಳೂರಿನಿಂದ ಮೀರಜ್​ಗೆ ಹೋಗುತ್ತಿದ್ದ ಖಾಸಗಿ ಬಸ್​ ನಿಯಂತ್ರಣ ತಪ್ಪಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಪಲ್ಟಿ ಹೊಡೆದಿದೆ. ಪರಿಣಾಮ ಬೆಳಗಾವಿಯ ಚಾಲಕ ಹಾಗೂ ಒಬ್ಬ ಪ್ರಯಾಣಿಕ (ರಾಹುಲ್​) ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಒಟ್ಟು 4 ಜನ ಪ್ರಯಾಣಿಕರು ಗಾಯಗೊಂಡಿದ್ದು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ: ಇಬ್ಬರು ಸಾವು, 4 ಮಂದಿಗೆ ಗಾಯ..ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

Last Updated : Jun 29, 2023, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.