ಬಂಟ್ವಾಳ: ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಆಗಸ್ಟ್ 24 ರಿಂದ 29 ರ ವರೆಗೆ ದೇಶವ್ಯಾಪಿ ಮುಷ್ಕರವನ್ನು ಸಿಪಿಎಂ ನಡೆಸುತ್ತಿದೆ. ಇಂದು ನಗರದ ಮಿನಿ ವಿಧಾನಸೌಧ ಮುಂಭಾಗ ಸಿಪಿಎಂ ಬಂಟ್ವಾಳ ತಾಲೂಕು ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ, ಬಡವರು ಮತ್ತು ಕಾರ್ಮಿಕರ ಬದುಕು ಇಂದು ಅತಂತ್ರವಾಗಿದೆ ಎಂದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೊರೊನಾ ನಡುವೆ ಜನರಿಗೆ ಭದ್ರತೆ ಮತ್ತು ಧೈರ್ಯ ತುಂಬುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೇಂದ್ರ ಸರ್ಕಾರ ಬಡವರಿಗೆ ಉದ್ಯೋಗ ಹಾಗೂ ನೆರವು ನೀಡಲು ವಿಫಲವಾಗಿದೆ. ಈ ಕುರಿತು ಸರ್ಕಾರ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಡಿವೈಎಫ್ಐ ಮುಖಂಡರಾದ ಇಕ್ಬಾಲ್ ಹಳೆಮನೆ, ಸುರೇಂದ್ರ ಕೋಟ್ಯಾನ್, ತುಳಸೀದಾಸ್ ವಿಟ್ಲ, ಸಿಐಟಿಯು ಮುಖಂಡರಾದ ಉದಯಕುಮಾರ್, ಲೋಲಾಕ್ಷಿ ಬಂಟ್ವಾಳ, ಲಿಯಾಕತ್ ಖಾನ್, ಬಿ.ನಾರಾಯಣ, ದಿನೇಶ್ ಆಚಾರಿ, ನಾರಾಯಣ ಅಂಗ್ರಿ, ಗಣೇಶ್ ಪ್ರಭು, ಹಮೀದ್ ಕುಕ್ಕಾಜೆ, ವಿನಯ ನಡುಮೊಗರು, ಬೆನ್ನಿ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.